ಗೃಹಲಕ್ಷ್ಮೀ ಅರ್ಜಿ ಸಲ್ಲಿಸಲು ಯಾರೇ ಹಣ ಪಡೆದರೂ ಅವರ ಲೈಸೆನ್ಸ್ ರದ್ದು: ಸಂತೋಷ್​ ಲಾಡ್

ರಾಜ್ಯದಲ್ಲಿ ‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಸಲು ಯಾರೇ ಹಣ ಪಡೆದರೂ ಅವರ ಲೈಸೆನ್ಸ್ ರದ್ದು ಮಾಡಲಾಗುವುದು. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಕೊಡುವಂತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್​ ಲಾಡ್ ಹೇಳಿದರು.

ಗೃಹಲಕ್ಷ್ಮೀ ಅರ್ಜಿ ಸಲ್ಲಿಸಲು ಯಾರೇ ಹಣ ಪಡೆದರೂ ಅವರ ಲೈಸೆನ್ಸ್ ರದ್ದು: ಸಂತೋಷ್​ ಲಾಡ್
ಸಚಿವ ಸಂತೋಷ ಲಾಡ್​
Follow us
| Updated By: ವಿವೇಕ ಬಿರಾದಾರ

Updated on: Jul 25, 2023 | 11:36 AM

ಹುಬ್ಬಳ್ಳಿ: ರಾಜ್ಯದಲ್ಲಿ ‘ಗೃಹಲಕ್ಷ್ಮೀ’ (Gruhalakshmi) ಅರ್ಜಿ ಸಲ್ಲಿಸಲು ಯಾರೇ ಹಣ ಪಡೆದರೂ ಅವರ ಲೈಸೆನ್ಸ್ ರದ್ದು ಮಾಡಲಾಗುವುದು. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಕೊಡುವಂತಿಲ್ಲ. ನನ್ನ ಕ್ಷೇತ್ರದ ಕೆಲವು ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಯಾರಾದರೂ ಹಣ ಪಡೆದ ಬಗ್ಗೆ ಮಾಹಿತಿ ಬಂದರೇ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್​ ಲಾಡ್ (Santosh Lad) ಎಚ್ಚರಿಕೆ ನೀಡಿದರು. ಧಾರಾವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್​ ಇಂದು (ಜು.25) ಬೆಳಂಬೆಳಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಧಾರಾವಾಡ ಜಿಲ್ಲೆಯಲ್ಲಿ ಮಳೆಗೆ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ಅಂದಾಜು ನಮಗೆ ಸಿಕ್ಕಿಲ್ಲ. ಮಳೆ ಇನ್ನೂ ಹೆಚ್ಚಾದರೆ ರೈತರಗೆ ಅನಾನುಕೂಲ ಆಗಲಿದೆ. ಧಾರವಾಡ ಜಿಲ್ಲೆಯ ಸ್ಲಂಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Gruha Lakshmi Scheme: ಯಜಮಾನಿಗೆ 2000 ರೂ. ಗೃಹಲಕ್ಷ್ಮೀ ಯೋಜನೆಯ ಮಾರ್ಗಸೂಚಿ ಒಮ್ಮೆ ನೋಡಿ

ಇವತ್ತು ಮುಖ್ಯಮಂತ್ರಿಗಳು ಹಾವೇರಿಗೆ ಬರುತ್ತಿದ್ದಾರೆ. ಅವರೊಂದಿಗೆ ಚರ್ಚೆ ಮಾಡುತ್ತೇವೆ. ಬಹಳ ವರ್ಷಗಳಿಂದ ಈ ಸಮಸ್ಯೆ ಇದೆ. ಸರ್ಕಾರದಿಂದ ಏನ ಸಹಾಯ ಮಾಡಬೇಕು ಅದನ್ನು ನಾವ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಬಂದ್ರೆ ಮಳೆ ಆಗಲ್ಲ ಎಂಬ ಮಾತಿನ ವಿಚಾರವಾಗಿ ಮಾತನಾಡಿದ ಅವರು ಈ ತರಹದ ವಾಡಿಕೆಗೆ ದೇವರು ಉತ್ತರ ಕೊಟ್ಟಿದ್ದಾನೆ ಎಂದರು.

ಸಿಂಗಪುರದಲ್ಲಿ ಸರ್ಕಾರದ ವಿರುದ್ಧ ತಂತ್ರ ಮಾಡುತ್ತಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಜೆಪಿಯವರದು ಯಾವಾಗಲೂ ಇಷ್ಟೆ. ಯಾವಾಗ ಸೋಲುತ್ತಾರೆ, ಅಲ್ಲಿಂದ ಸರ್ಕಾರ ಬಿಳಸೋಕೆ ಕೆಲಸ ಆರಂಭಿಸುತ್ತಾರೆ. ಹೇಗೆ ಸರ್ಕಾರ ಬೀಳಸಬೇಕು ಎಂದು ಬಿಜೆಪಿ ಮನಿಫ್ಯಾಕ್ಚರಿಂಗ್ ಯುನಿಟ್ ಕೆಲಸ ಮಾಡತ್ತೆ. ಇದಕ್ಕೆ ಉದಾಹರಣೆ ಸಾಕಷ್ಟಿವೆ. ಕಳೆದ ಬಾರಿ ಕರ್ನಾಟಕ, ಮದ್ಯಪ್ರದೇಶ, ಗೋವಾದಲ್ಲಿ ಮಾಡಿದರು. ಈ ಮಾರ್ಗ ಬಿಟ್ಟರೇ ಬೇರೆ ಯಾವ ಮಾರ್ಗ ಇಲ್ಲ ಎಂದು ಕಾಲೆಳೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ