ಬಿಜೆಪಿ ತೊರೆಯುತ್ತೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ: ಅರವಿಂದ ಬೆಲ್ಲದ್ ಸ್ಪಷ್ಟನೆ

Aravind Bellad: ಬಿಜೆಪಿ ತೊರೆಯುವ ವಿಚಾರ ಇಲ್ಲ ಎಂದಿರುವ ಅರವಿಂದ್ ಬೆಲ್ಲದ್ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಅರವಿಂದ ಬೆಲ್ಲದ್ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ತೊರೆಯುತ್ತೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ: ಅರವಿಂದ ಬೆಲ್ಲದ್ ಸ್ಪಷ್ಟನೆ
ಶಾಸಕ ಅರವಿಂದ ಬೆಲ್ಲದ
Edited By:

Updated on: Sep 20, 2021 | 9:03 PM

ಧಾರವಾಡ: ಅರವಿಂದ ಬೆಲ್ಲದ್​​ ಬಿಜೆಪಿ ತೊರೆಯುತ್ತಾರೆಂಬ ವದಂತಿ ವಿಚಾರವಾಗಿ ಮಾಧ್ಯಮ ಪ್ರಕಟಣೆಯ ಮೂಲಕ ಅರವಿಂದ ಬೆಲ್ಲದ್ ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್​​, ನಾನು ಬಿಜೆಪಿ ಬಿಡುತ್ತೇನೆಂಬ ಈ ಸುದ್ದಿ‌ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ. ನನ್ನ ವಿಚಾರದಲ್ಲಿ ಸುಳ್ಳು ಸಂದೇಶ ಹಬ್ಬಿಸುವ ಪ್ರಯತ್ನ ಇದು. ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ, ನನ್ನ ನಿಷ್ಠೆ ಅಚಲವಾಗಿದೆ. ಆರ್​ಎಸ್​ಎಸ್​​ ಬಗೆಗಿನ ನನ್ನ ನಿಷ್ಠೆ ಅಚಲವಾಗಿದೆ ಎಂದು ಬೆಲ್ಲದ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬಿಜೆಪಿ ತೊರೆಯುವ ವಿಚಾರ ಇಲ್ಲ ಎಂದಿರುವ ಅರವಿಂದ್ ಬೆಲ್ಲದ್ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಅರವಿಂದ ಬೆಲ್ಲದ್ ಎಚ್ಚರಿಕೆ ನೀಡಿದ್ದಾರೆ.

ಅರವಿಂದ ಬೆಲ್ಲದ ಬಿಜೆಪಿ ತೊರೆಯುತ್ತಾರೆಂಬ ವದಂತಿ 2 ದಿನದಿಂದ ಹಬ್ಬಿತ್ತು. ಈ ಸುದ್ದಿ‌ ಸತ್ಯಕ್ಕೆ ದೂರವಾಗಿದೆ. ಸುಳ್ಳುಗಳನ್ನೇ ನಿಜವೆಂದು ಹೇಳುವ ಕಾಲವಿದು. ಅಂಥ ಕಾಲಘಟ್ಟದಲ್ಲಿ ನಾವು ಇದ್ದೇವೆ. ಹೀಗಾಗಿ ಈ ಬಗ್ಗೆ ನಾನೇ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ತೊರೆಯುವ ವಿಚಾರ ಇಲ್ಲ. ಅದನ್ನು ಕಾಯಾ, ವಾಚಾ ಮನಸಾ ಕಲ್ಪಿಸಲು ಸಾಧ್ಯವಿಲ್ಲ. ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕುಮಾರವ್ಯಾಸನ ಪದ್ಯ ಓದಿ ಸಿದ್ದರಾಮಯ್ಯಗೆ ಟಾಂಗ್; ಮೋದಿ ಪ್ರಧಾನಿ ಆದ್ಮೇಲೆ ದೇಶದ ಬೆಲೆ ಹೆಚ್ಚಾಗಿದೆ: ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಬೆಲೆ ಏರಿಕೆ ಪ್ರಸ್ತಾಪಿಸಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ