ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿಯೂ ಆಗಿರುವ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ (Basavaraj Horatti) ಅವರ ಬಿಜೆಪಿ ಸೇರ್ಪಡೆ ಪಕ್ಷದ ಹಿರಿಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೊರಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಆಕ್ಷೇಪಿಸಿರುವ ಅವರು, ತಮ್ಮ ನಿರ್ಧಾರಕ್ಕೆ 10 ಕಾರಣಗಳನ್ನೂ ನೀಡಿದ್ದಾರೆ. ಈ ಕುರಿತು ತಮ್ಮ ಆಕ್ಷೇಪ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಹಲವು ನಾಯಕರ ಸಹಿ ಇರುವ ಪತ್ರವೊಂದು ರವಾನೆಯಾಗಿದೆ. ಪತ್ರದ ಜೊತೆಗೆ ಹಲವು ದಾಖಲೆಗಳನ್ನೂ ಈ ಭಾಗದ ಬಿಜೆಪಿ ನಾಯಕರು ಹೈಕಮಾಂಡ್ಗೆ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೆ ಹೊರಟ್ಟಿ ಅವರನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಬಾರದೆಂದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಉಲ್ಲೇಖವಾಗಿರುವ ಪ್ರಮುಖ ಅಂಶಗಳಿವು.
ಬಸವರಾಜ್ ಹೊರಟ್ಟಿಗೆ ಈಗಾಗಲೇ 76 ವರ್ಷ ಆಗಿದೆ. ಪಕ್ಷದ ನಿಯಮದಂತೆ ಇವರಿಗೆ ಟಿಕೆಟ್ ನೀಡಲು ಅವಕಾಶವಿಲ್ಲ.
ಹೊರಟ್ಟಿ ಒಟ್ಟಿಗೆ ಎರಡೆರೆಡು ವೇತನ ಪಡೆದಿರುವ ಆರೋಪ ಹೊಂದಿದ್ದಾರೆ. 1980ರಲ್ಲಿ ವಿಧಾನ ಪರಿಷತ್ಸ
ಸದಸ್ಯರಾಗಿದ್ದರು. ಆದರೆ 1999ರವರೆಗೆ ಲ್ಯಾಮಿಂಗ್ಟನ್ ಶಾಲೆಯಲ್ಲಿ ದೈಹಿಕ ಶಿಕ್ಷಕರ ಹುದ್ದೆ ಉಳಿಸಿಕೊಂಡು ವೇತನ ಪಡೆದಿದ್ದರು.
ಧಾರವಾಡದಲ್ಲಿ ಎಸ್ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಸಿದ ಆರೋಪ ಇವರ ಮೇಲಿದೆ
ಶಿಕ್ಷಣ ಸಂಸ್ಥೆ ವಿಚಾರದಲ್ಲಿ ಬಸವರಾಜ ಹೊರಟ್ಟಿ ಅವರ ಮೇಲೆ ಎಫ್ಐಆರ್ ದಾಖಲಾಗಿದೆ
ಹಿಂದುತ್ವದ ವಿರುದ್ಧದ ಚಳವಳಿಯಲ್ಲಿ ಕಾಂಗ್ರೆಸ್ ಜೊತೆ ಹೊರಟ್ಟಿ ಗುರುತಿಸಿಕೊಂಡಿದ್ದರು
ಬಿಜೆಪಿ ಪಕ್ಷದ ಸಿದ್ದಾಂತಗಳನ್ನು ಹೊರಟ್ಟಿ ಅವರು ಈವರೆಗೆ ಸಂಪೂರ್ಣವಾಗಿ ಒಪ್ಪಿಂಡಿಕೊಂಡಿಲ್ಲ
ಹಾವೇರಿ, ಧಾರವಾಡ,, ಗದಗ, ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ 17 ಶಾಸಕರು, 3 ಸಂಸತ್ ಸದಸ್ಯರು, 4 ವಿಧಾನ ಪರಿಷತ್ ಸದಸ್ಯರು, ಓರ್ವ ಸಭಾಪತಿ, 3 ಕ್ಯಾಬಿನೆಟ್ ಸಚಿವರು, ಓರ್ವ ಕೇಂದ್ರ ಸಚಿವರು, ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಇದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಒಬ್ಬರೆ ಒಬ್ಬ ಶಾಸಕರು ಇಲ್ಲ.
ಬಸವರಾಜ್ ಹೊರಟ್ಟಿ ಒಬ್ಬ ಕಳಂಕಿತ ವ್ಯಕ್ತಿ, ಇಂತಹ ಕಳಂಕಿತ ವ್ಯಕ್ತಿಗೆ ಟಿಕೆಟ್ ಕೊಟ್ಟು ಸಾಧಿಸುವುದೇನಿದೆ?