ಸರ್ಕಾರ ಸತ್ತಿದೆಯೋ ಬದುಕಿದೆಯೋ? ನೇಹಾ, ಅಂಜಲಿಗೆ ಕೊಲೆಗೆ ಸರ್ಕಾರವೇ ನೇರ ಹೊಣೆ: ಬಿಜೆಪಿ ಎಂಎಲ್​ಸಿ ರವಿಕುಮಾರ್ ವಾಗ್ದಾಳಿ

| Updated By: ಗಣಪತಿ ಶರ್ಮ

Updated on: May 17, 2024 | 2:01 PM

ನೇಹಾ ಹಿರೇಮಠ ‌ಕೊಲೆಯಾಗಿ ಒಂದು ವರ್ಷ ಆಗಿಲ್ಲ. ಮತ್ತೆ ಅಂತಹದೇ ಕೊಲೆಯಾಗಿದೆ ಅಂದರ ಏನರ್ಥ? ಈ ಕೊಲೆಗಳಿಗೆ ಪೊಲೀಸರು ಹೊಣೆ. ಕರ್ನಾಟಕ ಕ್ರೈಂ ರಾಜ್ಯ, ಕೊಲೆಪಾತಕರ ರಾಜ್ಯ ಆಗಿದೆ ಎಂದು ಬಿಜೆಪಿ ಎಂಎಲ್​ಸಿ ಎನ್​. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಸತ್ತಿದೆಯೋ ಬದುಕಿದೆಯೋ? ನೇಹಾ, ಅಂಜಲಿಗೆ ಕೊಲೆಗೆ ಸರ್ಕಾರವೇ ನೇರ ಹೊಣೆ: ಬಿಜೆಪಿ ಎಂಎಲ್​ಸಿ ರವಿಕುಮಾರ್ ವಾಗ್ದಾಳಿ
ಬಿಜೆಪಿ ಎಂಎಲ್​ಸಿ ಎನ್​. ರವಿಕುಮಾರ್
Follow us on

ಹುಬ್ಬಳ್ಳಿ, ಮೇ 17: ರಾಜ್ಯದಲ್ಲಿ ಅಪರಾಧ ಕೃತ್ಯಗಳು, ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ವಿಚಾರವಾಗಿ ಬಿಜೆಪಿ ಎಂಎಲ್​ಸಿ ಎನ್​. ರವಿಕುಮಾರ್ (N Ravikumar) ವಾಗ್ದಾಳಿ ನಡೆಸಿದ್ದು, ಸರ್ಕಾರ ಸತ್ತಿದೆಯೋ ಬದುಕಿದೆಯೋ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. ಅಂಜಲಿ ಕೊಲೆ (Anjali Ambigera Murder) ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಇರುವುದು ನಿಜ ಎಂದು ಗೃಹ ಸಚಿವ ಜಿ ಪರಮೇಶ್ವರ (G Parameshwara) ಒಪ್ಪಿಕೊಂಡ ಬೆನ್ನಲ್ಲೇ ರವಿಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಜಲಿ ಅಂಬಿಗೇರ ಹತ್ಯೆ ಆಗಿರೋದು ಕಾಡಿನಲ್ಲಿ ಅಲ್ಲ. ಆಕೆ ಕೊಲೆಯಾಗಿದ್ದು ಜನ‌ವಸತಿ ಪ್ರದೇಶದಲ್ಲಿ. ಈ ವಿಚಾರದಲ್ಲಿ ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸಿದೆ. ಇದು ಅಸಮರ್ಥ ಸರ್ಕಾರ. ಇದು ರಣ ಹೇಡಿ ಸರ್ಕಾರ. ಕೊಲೆ ಪಾತಕರನ್ನು ರಕ್ಷಣೆ ‌ಮಾಡುವ ಸರ್ಕಾರ ಎಂದು ರವಿಕುಮಾರ್ ಕಿಡಿಕಾರಿದ್ದಾರೆ.

ನೇಹಾ ಹಿರೇಮಠ ‌ಕೊಲೆಯಾಗಿ ಒಂದು ವರ್ಷ ಆಗಿಲ್ಲ. ಮತ್ತೆ ಅಂತಹದೇ ಕೊಲೆಯಾಗಿದೆ ಅಂದರ ಏನರ್ಥ? ಈ ಕೊಲೆಗಳಿಗೆ ಪೊಲೀಸರು ಹೊಣೆ. ಕರ್ನಾಟಕ ಕ್ರೈಂ ರಾಜ್ಯ, ಕೊಲೆಪಾತಕರ ರಾಜ್ಯ ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಂಜಲಿ ಮನೆಯ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಅಂಜಲಿ ಮನೆಯವರಿಗೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಸರ್ಕಾರ ಸ್ವಂತ ಮನೆ ಕಟ್ಟಿಸಿ ಕೊಡಬೇಕು. ಅಕಸ್ಮಾತ್ ಕೊಡದೆ ಹೋದರೆ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಇದೆ: ಜಿ ಪರಮೇಶ್ವರ್​

ಆರೋಪಿಗಳಾದ ಗಿರೀಶ್ ಅರೆಸ್ಟ್ ಆಗಿದ್ದಾನೆ, ಫಯಾಜ್ ಅರೆಸ್ಟ್ ಆಗಿದ್ದಾನೆ. ಇನ್ನೇನು ತನಿಖೆ ಮಾಡ್ತೀರಿ, ನೀವೇನ್ ಬಳೆ ತೊಟ್ಕೊಂಡಿದ್ದೀರ? ಆರೋಪಿಗಳಿಗೆ ಏಕೆ ಶಿಕ್ಷೆ ಕೊಡ್ತಿಲ್ಲ ಎಂದು ರವಿ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ