Sign In

By signing in or creating an account, you agree with Associated Broadcasting Company's Terms & Conditions and Privacy Policy.

Chaturthi 2023: ಹುಬ್ಬಳ್ಳಿಯಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿರುವ ಮುಸ್ಲಿಂ ಮಹಿಳೆ

ಹುಬ್ಬಳ್ಳಿಯ ಮುಸ್ಲಿಂ ಮಹಿಳೆಯೊಬ್ಬರು ಗಣೇಶ‌ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ‌ ಕೆಲಸಕ್ಕೆ ಜಾತಿ‌ಬೇಧ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಗೋಪನಕೊಪ್ಪದ ನಿವಾಸಿ ನಿರುಪಮಾ ಯಾದವ ಎಂಬುವರು ಕಳೆದ 20 ವರ್ಷಗಳಿಂದ ಗಣೇಶ ಮೂರ್ತಿಯನ್ನು ತಯಾರಿಸುತ್ತಿದ್ದು, ಇವರ ಬಳಿ ಹಾವೇರಿಯ ಮುಸ್ಲಿಂ ಮಹಿಳೆ ಸುಮನ್ ಎಂಬಾಕೆ ಗಣೇಶ ವಿಗ್ರಹಗಳ ತಯಾರಿಸುತ್ತಿದ್ದಾರೆ.

Chaturthi 2023: ಹುಬ್ಬಳ್ಳಿಯಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿರುವ ಮುಸ್ಲಿಂ ಮಹಿಳೆ
ಹುಬ್ಬಳ್ಳಿಯಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿರುವ ಮುಸ್ಲಿಂ ಮಹಿಳೆ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: Digi Tech Desk

Updated on:Sep 12, 2023 | 10:47 AM

ಹುಬ್ಬಳ್ಳಿ, ಆಗಸ್ಟ್ 20: ಜಾತಿ, ಧರ್ಮ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಆದರೆ, ಮಾನವೀಯ ಮೌಲ್ಯಗಳನ್ನೇ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಹಾವೇರಿ ಮೂಲದ ಮುಸ್ಲಿಂ ಮಹಿಳೆಯೊಬ್ಬರು ಹುಬ್ಬಳ್ಳಿಯಲ್ಲಿ (Hubballi) ಗಣೇಶನ ವಿಗ್ರಹಗಳನ್ನು (Ganesha Idol) ತಯಾರಿಸುವ ಮೂಲಕ ವೃತ್ತಿಯಲ್ಲಿ ಯಾವುದೇ ಜಾತಿ, ಧರ್ಮವಿಲ್ಲ, ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಹುಬ್ಬಳ್ಳಿಯ ಗೋಪನಕೊಪ್ಪದ ನಿವಾಸಿ ನಿರುಪಮಾ ಯಾದವ ಎಂಬುವರು ಕಳೆದ 20 ವರ್ಷಗಳಿಂದ ಗಣೇಶ ಮೂರ್ತಿಯನ್ನು ತಯಾರಿಸುತ್ತಿದ್ದಾರೆ. ಇವರ ಬಳಿ ಸುಮನ್ ಎಂಬ ಹಾವೇರಿಯ ಮುಸ್ಲಿಂ ಮಹಿಳೆ ಗಣೇಶ ವಿಗ್ರಹಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಗ್ರಾಹಕರಿಂದ ಪ್ರತಿಭಟನೆ

ಸುಮನ್ ಮನೆಯಲ್ಲಿ ಕಡು ಬಡತನ ಇರುವುದರಿಂದ ಉದ್ಯೋಗ ಕೇಳಿಕೊಂಡು ಬಂದಿದ್ದರಂತೆ. ಆಗ ಗಣೇಶ ಮೂರ್ತಿ ತಯಾರಿಕೆ ಕೆಲಸ ಮಾಡುತ್ತಿದ್ದ ಅರುಣ್ ಯಾದವ್ ಜಾತಿ ಭೇದಭಾವ ಮಾಡದೆ ಸುಮನ್ ಅವರಿಗೆ ಕೆಲಸವನ್ನು ನೀಡಿದ್ದಾರೆ. ಅದರಂತೆ ಕಳೆದ ನಾಲ್ಕು ವರ್ಷಗಳಿಂದ ಸುಮನ್ ಅವರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲಸಕ್ಕೆ ಜಾತಿ ಇಲ್ಲ ಅಂದುಕೊಂಡ ಸುಮನ್ ಮೂರ್ತಿ ತಯಾರಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಸರ್ಕಾರ ಪಿಒಪಿ ಗಣೇಶ ಮೂರ್ತಿಗಳನ್ನು ಬ್ಯಾನ್ ಮಾಡಿದೆ. ಹೀಗಾಗಿ ಪೋರಬಂದರ್​ನಿಂದ ಮಣ್ಣು ಹಾಗೂ ಕಾಗದದಿಂದ ಗಣೇಶ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ.‌ ಹೀಗಾಗಿ ಮಹಿಳೆಯು ಕೂಡ ಅರುಣ ಯಾದವ್ ಅವರಿಂದ ಮೂರ್ತಿ ತಯಾರಿಕೆಯಲ್ಲಿ ಪಳಗಿದ್ದು, ವಿಘ್ನೇಶ್ವರನ ಮೂರ್ತಿ ತಯಾರಿಸುತ್ತಾ ತಮ್ಮ ಮನೆಯ ಆರ್ಥಿಕ ವಿಘ್ನವನ್ನು ದೂರ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ಒಟ್ಟಿನಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಗಲಭೆ, ಗಲಾಟೆ ಮಾಡುವವರ ಮಧ್ಯೆ ಕಾಯಕಕ್ಕೆ ಯಾವುದೇ ಧರ್ಮ‌ಜಾತಿ ಕಟ್ಟುಪಾಡುಗಳಿಲ್ಲ ಎಂದು ತೋರಿಸಿಕೊಟ್ಟ ಸುಮನ್ ಅವರು ಸಮಾಜಕ್ಕೆ ಉತ್ತಮ ಮಾದರಿಯಾಗಿ ನಿಂತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:44 pm, Sun, 20 August 23

ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ