Chennaveera Kanavi: ಚೆನ್ನವೀರ ಕಣವಿ ಅವರ ವೈದ್ಯಕೀಯ ವೆಚ್ಚವನ್ನು ದೇಣಿಗೆ ನೀಡಲು ನಿರ್ಧರಿಸಿದ ಕುಟುಂಬ

| Updated By: ganapathi bhat

Updated on: Mar 27, 2022 | 9:06 AM

ಕಣವಿ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಿತ್ತು. ಈ ಹಿನ್ನೆಲೆಯಲ್ಲಿ ಕಣವಿ ಕುಟುಂಬಸ್ಥರು ವೈದ್ಯಕೀಯ ವೆಚ್ಚವನ್ನು ದೇಣಿಗೆ ನೀಡಲು ನಿರ್ಧಾರ ಮಾಡಿದ್ದಾರೆ. ಕಣವಿ ಅವರ ಆಸ್ಪತ್ರೆ ವೆಚ್ಚ 7 ಲಕ್ಷ ರೂ. ಆಗಿತ್ತು.

Chennaveera Kanavi: ಚೆನ್ನವೀರ ಕಣವಿ ಅವರ ವೈದ್ಯಕೀಯ ವೆಚ್ಚವನ್ನು ದೇಣಿಗೆ ನೀಡಲು ನಿರ್ಧರಿಸಿದ ಕುಟುಂಬ
ನಾಡೋಜ ಚೆನ್ನವೀರ ಕಣವಿ
Follow us on

ಧಾರವಾಡ: ಕವಿ, ಹಿರಿಯ ಸಾಹಿತಿ ನಾಡೋಜ ಚೆನ್ನವೀರ ಕಣವಿ ನಿಧನ ಹಿನ್ನೆಲೆ ಅವರ ವೈದ್ಯಕೀಯ ವೆಚ್ಚ ದೇಣಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಕಣವಿ ಕುಟುಂಬಸ್ಥರಿಂದ ಅವರ ವೈದ್ಯಕೀಯ ವೆಚ್ಚವನ್ನು ದೇಣೀಗೆ ನೀಡಲು ನಿರ್ಧರಿಸಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಎಸ್‌ಡಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಚಿನ್ನದ ಪದಕದ ರೂಪದಲ್ಲಿ ನೀಡಲು ತೀರ್ಮನ ಕೈಗೊಳ್ಳಲಾಗಿದೆ. ಕಣವಿಯವರ ಪುತ್ರ ಪ್ರಿಯದರ್ಶಿ ಕಣವಿ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಕವಿ ಚೆನ್ನವೀರ ಕಣವಿ ಅವರು 32 ದಿನಗಳ ಕಾಲ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರೆಳೆದಿದ್ದರು. ಕಣವಿ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಿತ್ತು. ಈ ಹಿನ್ನೆಲೆಯಲ್ಲಿ ಕಣವಿ ಕುಟುಂಬಸ್ಥರು ವೈದ್ಯಕೀಯ ವೆಚ್ಚವನ್ನು ದೇಣಿಗೆ ನೀಡಲು ನಿರ್ಧಾರ ಮಾಡಿದ್ದಾರೆ. ಕಣವಿ ಅವರ ಆಸ್ಪತ್ರೆ ವೆಚ್ಚ 7 ಲಕ್ಷ ರೂ. ಆಗಿತ್ತು. ಕಣವಿ ವೈದ್ಯಕೀಯ ವೆಚ್ಚಕ್ಕೆ ಮೊದಲೇ ಹಣ ಇಟ್ಟಿದ್ದರು. ವೈದ್ಯಕೀಯ ವೆಚ್ಚ ತಮ್ಮ ಹಣದಲ್ಲೇ ಭರಿಸುವಂತೆ ಹೇಳಿದ್ದರು. ಆದರೆ, ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಿದ ಹಿನ್ನೆಲೆ ಕಣವಿ ಇಟ್ಟಿದ್ದ ಹಣ ವಿದ್ಯಾರ್ಥಿಗಳಿಗೆ ದೇಣಿಗೆ ನೀಡಲು ನಿರ್ಧರಿಸಲಾಗಿದೆ.

ಬೆಂಗಳೂರು: ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

ರಸ್ತೆ ದಾಟುವ ವೇಳೆ ಯುವತಿಗೆ ಕ್ಯಾಂಟರ್ ಡಿಕ್ಕಿಯಾದ ಪ್ರಕರಣದಲ್ಲಿ ಮೃತಪಟ್ಟ ಹಿಮಾದ್ರಿ (23) ನೇತ್ರ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಶುಕ್ರವಾರ ಪೀಣ್ಯ ಮೆಟ್ರೋ ನಿಲ್ದಾಣದ ಬಳಿ ರಸ್ತೆ ದಾಟುವಾಗ ಕ್ಯಾಂಟರ್ ಡಿಕ್ಕಿಯಾಗಿ ಯುವತಿ ಮೃತಪಟ್ಟಿದ್ದರು. ಅವರು ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ.

ಇದನ್ನೂ ಓದಿ: Chennaveera Kanavi Death: ‘ವ್ಯಕ್ತಿಗೀತೆ’; ಬೇಂದ್ರೆಯವರಿಗೆ ಎಪ್ಪತ್ತು ತುಂಬಿದಾಗ ಕಣವಿಯವರು ಬರೆದ ಧೀಮಂತ ಕವಿತೆ

ಇದನ್ನೂ ಓದಿ: Chennaveera Kanavi Death: ನಾಡೋಜ ಚೆನ್ನವೀರ ಕಣವಿ ವಿಧಿವಶ: ಕವಿಯ ಕೆಲ ಫೋಟೋಗಳು ಇಲ್ಲಿವೆ

Published On - 9:04 am, Sun, 27 March 22