ಅಂಗವೈಕಲ್ಯವಿದ್ದರೆ ಏನೂ ಸಾಧಿಸಲು ಆಗೋಲ್ಲ ಅನ್ನುವವರ ಮಧ್ಯೆ ಹುಬ್ಬಳ್ಳಿಯ ಸಿದ್ಧಾರ್ಥ ಹೇಗೆ ಸಾಧನೆಯ ಶೀಖವೇರಿದ್ದಾನೆ, ನೋಡಿ!

Hubballi Siddharth Bellary: ವಿದ್ಯುತ್ ಅವಘಡದಲ್ಲಿ ಸಿದ್ದಾರ್ಥ್‌ಗೆ 11 ಸಾವಿರ ಕೆ.ವಿ. ವಿದ್ಯುತ್ ತಂತಿ ತಗುಲಿ ಹೊಟ್ಟೆಯ ಕೆಳಭಾಗವೆಲ್ಲ ಸುಟ್ಟು ಹೋಗಿತ್ತು. ತೊಡೆಯ ಭಾಗದ ಮಾಂಸ ಕರಗಿಹೋಗಿತ್ತು. ಈಗಲೂ ಎಡಗೈ ಸ್ವಾಧೀನವಿಲ್ಲ. ಇದನ್ನೆಲ್ಲ ಸರಿಪಡಿಸಲು 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ದೇಹದಲ್ಲಿ 6,500ಕ್ಕೂ ಹೆಚ್ಚು ಹೊಲಿಗೆಗಳಿವೆ. ಹೀಗಿದ್ದರೂ ಛಲ ಬಿಡದ ಸಿದ್ಧಾರ್ಥ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಜೊತೆಗೆ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಲು ಹೊರಟಿದ್ದಾರೆ.

ಅಂಗವೈಕಲ್ಯವಿದ್ದರೆ ಏನೂ ಸಾಧಿಸಲು ಆಗೋಲ್ಲ ಅನ್ನುವವರ ಮಧ್ಯೆ ಹುಬ್ಬಳ್ಳಿಯ ಸಿದ್ಧಾರ್ಥ ಹೇಗೆ ಸಾಧನೆಯ ಶೀಖವೇರಿದ್ದಾನೆ, ನೋಡಿ!
ಅಂಗವೈಕಲ್ಯ ಇದ್ದರೆ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುವವರ ಮಧ್ಯೆ ಹುಬ್ಬಳ್ಳಿಯ ಸಿದ್ಧಾರ್ಥ ಹೇಗೆ ಸಾಧನೆಯ ಶೀಖವೇರಿದ್ದಾನೆ, ನೋಡಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 26, 2022 | 2:46 PM

ಸಣ್ಣದೊಂದು ಅಂಗವೈಕಲ್ಯ ಇಡೀ ಜೀವನವನ್ನೇ ಅಂಧಕಾರಕ್ಕೆ ತಳ್ಳಿ ಬಿಡುತ್ತದೆ‌ ಅನ್ನೋದನ್ನ ನಾವೆಲ್ಲಾ ಕೇಳಿದ್ದಿವಿ.‌ ಆದ್ರೆ ಅದಕ್ಕೆ ಪಕ್ಕಾ ಅಪವಾದ ಎಂಬಂತೆ ಹುಬ್ಬಳ್ಳಿಯ ಈತ ಅಪೂರ್ವ ಸಾಧನೆ ಮಾಡಿ ತೋರಿಸಿದ್ದಾನೆ (Hubballi Siddharth Bellary). ಆತನ ಜೀವನದಲ್ಲಿ ನಡೆದ ಅದೊಂದು ಅವಘಡದಿಂದ ಪ್ರಪಾತಕ್ಕೆ ಜಾರಿದ್ದ ಆತ ಫಿನಿಕ್ಸ್ ನಂತೆ ಮತ್ತೆ ಮೇಲೆದು ಬಂದಿದ್ದಾನೆ. ಹೌದು. ಅಂಗವೈಕಲ್ಯ ಇದ್ದವರು ಕೂಡ ಏನು ಬೇಕಾದರೂ ಸಾಧಿಸಬಹುದು ಅನ್ನೋದನ್ನ ಈತ ಮತ್ತೊಮ್ಮೆ ನಿರೂಪಿಸಿದ್ದಾನೆ. ಯಾಕಂದ್ರೆ ಅಂಗವಿಕಲತೆ ಇದ್ದರೋ ನನ್ನ ಲೈಫ್ ಇಷ್ಟೆ ನನ್ನ ಕೈಯಲ್ಲಿ ಏನು ಮಾಡೊಕ್ಕಾಗಲ್ಲ ಅನ್ನೋರು ಈ ಸ್ಟೋರಿ ಒಮ್ಮೆ ಒದಲೇಬೇಕು. ಯಾಕಂದ್ರೆ ಅಂಗವೈಕಲತೆ ಇದ್ದರೇ ಸಾಕು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುವವರ ಮಧ್ಯೆ ಹುಬ್ಬಳ್ಳಿಯ ಬಾಲಕನೊಬ್ಬ ಸಾಧನೆಯ ಶೀಖವೇರಿ ತೋರಿಸಿದ್ದಾನೆ. ಬರೋಬ್ಬರಿ 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ತನ್ನ ಛಲ ಗುರಿ ಮುಟ್ಟಿ ಸಾಧಿಸಿದ್ದಾನೆ. ಅಷ್ಟೆ ಏಕೆ ಅತನ ದೇಹದ ತುಂಬೆಲ್ಲಾ ಬರೋಬ್ಬರೀ 6500 ಕ್ಕೂ ಹೆಚ್ಚು ಹೊಲಿಗೆಗಳು ದೇಹದಲ್ಲಿದ್ದರೂ ಆತ್ಮಸ್ಥೈರ್ಯ ಮಾತ್ರ ಕುಗ್ಗಿರಲಿಲ್ಲ. ಯಾವುದೇ ಕಷ್ಟ ಬಂದರೂ ಬಿಡದೇ ಮುನ್ನುಗಿ ದೇಶಕ್ಕೆ ‌ಕೀರ್ತಿ ತರಲು ವಿದೇಶಕ್ಕೆ ಹೊರಟ್ಟಿದ್ದಾನೆ (Parasports in France ).

ಬಾಲಕನ ದೇಹದಲ್ಲಿ 6,500ಕ್ಕೂ ಅಧಿಕ ಹೊಲಿಗೆಗಳು: ಹೌದು. ಹೀಗೆ ಕಠಿಣ ಪರಿಶ್ರಮವನ್ನೇ ಗುರಿಯಾಗಿಸಿಕೊಂಡಿರೋ ಈ ಬಾಲಕ ಛೋಟಾ ಮುಂಬಯಿ ಖ್ಯಾತಿಯ ಹುಬ್ಬಳ್ಳಿ ನಿವಾಸಿ ಮಂಜುನಾಥ ಬಳ್ಳಾರಿ ಎಂಬುವವರ ಮಗ. ಈತನ ಹೆಸರು ಸಿದ್ಧಾರ್ಥ ಬಳ್ಳಾರಿ. ಸಾಧನೆ ಮಾಡಬೇಕು ಅಂದರೆ ಅದಕ್ಕೆ ಸಾಧಿಸುವ ಛಲ ಇದ್ದರೇ ಸಾಕು. ಎಂತಹುದೇ ಸಮಸ್ಯೆ ಎದುರಾದರೂ ಸಾಧನೆ ಮಾಡಬಹುದು ಎಂಬುವುದನ್ನು ತೋರಿಸಿಕೊಟ್ಟ ಸಾಧಕ. 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕನ ದೇಹದಲ್ಲಿ ಸುಮಾರು 6,500ಕ್ಕೂ ಅಧಿಕ ಹೊಲಿಗೆಗಳಿದ್ದರೂ ಛಲ ಬಿಡದೇ ಅಂತರಾಷ್ಟ್ರೀಯ ಐಎಸ್ಎಫ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ದೇಶವನ್ನು ಪ್ರತಿನಿಧಿಸುತ್ತಿದ್ದಾನೆ.

ಮೇ 14ರಿಂದ ಫ್ರಾನ್ಸ್ ನಲ್ಲಿ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲಿರುವ ಸಿದ್ಧಾರ್ಥ ಬಳ್ಳಾರಿ: ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ಯಾರಾ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಹುಬ್ಬಳ್ಳಿಯ ಸಿದ್ದಾರ್ಥ್ ಬಳ್ಳಾರಿ ಈಗ 19ನೇ ಅಂತರರಾಷ್ಟ್ರೀಯ ಸ್ಪೋರ್ಟ್ಸ್​​ ಫೆಡರೇಷನ್ (ಐಎಸ್‌ಎಫ್) ಆಯೋಜಿಸಿರುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಕ್ರೀಡಾಕೂಟ ಮೇ 14ರಿಂದ ಫ್ರಾನ್ಸ್ ನಲ್ಲಿ ಆಯೋಜನೆಯಾಗಿದೆ. 18 ವರ್ಷದ ಒಳಗಿನ ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲು ನಗರದ ಶಾಂತಿ ನಿಕೇತನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಸಿದ್ದಾರ್ಥ.

ಎರಡೂವರೆ ವರ್ಷಗಳ ಹಿಂದೆ ನಡೆದ ವಿದ್ಯುತ್ ಅವಘಡದಲ್ಲಿ ಸಿದ್ದಾರ್ಥ್‌ಗೆ 11 ಸಾವಿರ ಕೆ.ವಿ. ವೋಲ್ವೇಜ್‌ನ ವಿದ್ಯುತ್ ತಂತಿ ತಗುಲಿ ಹೊಟ್ಟೆಯ ಕೆಳಭಾಗವೆಲ್ಲ ಸುಟ್ಟು ಹೋಗಿತ್ತು. ತೊಡೆಯ ಭಾಗದ ಮಾಂಸ ಛಿದ್ರವಾಗಿತ್ತು. ಈಗಲೂ ಎಡಗೈ ಸ್ವಾಧೀನವಿಲ್ಲ. ಇದನ್ನೆಲ್ಲ ಸರಿಪಡಿಸಲು 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ದೇಹದಲ್ಲಿ 6,500ಕ್ಕೂ ಹೆಚ್ಚು ಹೊಲಿಗೆಗಳಿವೆ. ಹೀಗಿದ್ದರೂ ಛಲ ಬಿಡದ ಸಿದ್ಧಾರ್ಥ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಜೊತೆಗೆ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಲು ಹೊರಟಿದ್ದಾರೆ.

ಹಾರ್ಡ್ ವರ್ಕ್ ಮೂಲಕ, ತನ್ನ ಶಸ್ತ್ರಚಿಕಿತ್ಸೆಗಿಂತ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ! ಇನ್ನು, ಹಾಕಿ ಆಟಗಾರ ಆಗಿದ್ದ ಸಿದ್ಧಾರ್ಥ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದ. ಆದರೆ ವಿಧಿಯು ಸಿದ್ಧಾರ್ಥ ಜೀವನದಲ್ಲಿ ಆಟ ಆಡಿತ್ತು. ಆದರೆ ಇದನ್ನೇ ಸವಾಲು ಎಂದು ಸ್ವೀಕರಿಸಿ ದಿನವೂ ಹಾರ್ಡ್ ವರ್ಕ್ ಮೂಲಕ, ತನ್ನ ಶಸ್ತ್ರಚಿಕಿತ್ಸೆಗಿಂತ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾನೆ! ಈ ಎಲ್ಲಾ ಸವಾಲುಗಳ ನಡುವೆ ಅರಳಿ ನಿಂತಿರುವ ಸಿದ್ದಾರ್ಥ್‌ ಬಳ್ಳಾರಿ ಐಎಸ್‌ಎಫ್ ಕ್ರೀಡಾಕೂಟದಲ್ಲಿ 100 ಮೀಟರ್, 400 ಮೀ. ಮತ್ತು ಲಾಂಗ್‌ಜಂಪ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ತಂಡದ ಆಯ್ಕೆಗಾಗಿ ಭುವನೇಶ್ವರದಲ್ಲಿ ಈಚೆಗೆ ಭಾರತ ಸ್ಕೂಲ್ ಗೇಮ್ಸ್ ಫೆಡರೇಷನ್ (ಎಸ್‌ಜಿಎಫ್‌ಐ) ಆಯೋಜಿಸಿದ್ದ ಅಯ್ಕೆ ಟ್ರಯಲ್ಸ್‌ನಲ್ಲಿ ಅರ್ಹತೆ ಪಡೆದಿದ್ದಾರೆ.

ಒಟ್ಟಾರೆ ಇಂತಹದೊಂದು ಪ್ರತಿಭೆ ಹುಬ್ಬಳ್ಳಿಯಲ್ಲಿ ಅರಳುತ್ತಿರುವುದು ವಾಣಿಜ್ಯ ನಗರಿಯ ಹೆಮ್ಮೆ. ಬಡತನ ಬೇಗೆಯಲ್ಲಿ ಬೆಳೆದರೂ ತನ್ನ ಅಚಲವಾದ ಶ್ರದ್ದೆ ಹಾಗೂ ಛಲದಿಂದ ಅಂಗವೈಕಲ್ಯವನ್ನೆ ಮೆಟ್ಟಿ, ಸಾಧನೆಯ ಶೀಖರವೇರಿದ್ದಾನೆ. ಅಷ್ಟೆ ಏಕೆ ತಂದೆ ತಾಯಿ ಸೇರಿದಂತೆ ಇಡೀ ಕರುನಾಡಿಗೆ ಕೀರ್ತಿ ತಂದಿರೊ ಈತನಿಗೆ ಒಂದು ಸಲಾಂ ಹೇಳುತ್ತಾ, ಇನ್ನಷ್ಟು ಮತ್ತಷ್ಟು ಸಹಾಯ- ಪ್ರೋತ್ಸಾಹ ನೀಡಿ ಪೋಷಿಸೋಣಾ. -ದತ್ತಾತ್ರೇಯ ಪಾಟೀಲ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್