AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಆಕಾಶಬುಟ್ಟಿಯಿಂದ ಸುಟ್ಟು ಕರಕಲಾದ ನಾಲ್ಕೈದು ಎಕರೆ ಕಬ್ಬು: ರೈತನ ಬದುಕಿಗೆ ಕತ್ತಲು ತಂದ ಹಬ್ಬದ ಸಂಭ್ರಮ

ದೀಪಾವಳಿ ಸಂಭ್ರಮದ ಆಚರಣೆ ವೇಳೆ ಹುಬ್ಬಳ್ಳಿಯ ತಿಮ್ಮಸಾಗರದಲ್ಲಿ ಆಕಾಶಬುಟ್ಟಿ ಬೆಂಕಿ ಅವಘಡಕ್ಕೆ ಕಾರಣವಾಗಿದೆ. ಕಟಾವಿಗೆ ಬಂದಿದ್ದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂ ನಷ್ಟವಾಗಿದೆ. ಬರಗಾಲದಲ್ಲೂ ಕಷ್ಟಪಟ್ಟು ಬೆಳೆದ ಕಬ್ಬು ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಆಕಾಶಬುಟ್ಟಿಗಳನ್ನು ಹಾರಿಸದಂತೆ ರೈತರು ಮನವಿ ಮಾಡಿದ್ದಾರೆ.

ದೀಪಾವಳಿ ಆಕಾಶಬುಟ್ಟಿಯಿಂದ ಸುಟ್ಟು ಕರಕಲಾದ ನಾಲ್ಕೈದು ಎಕರೆ ಕಬ್ಬು: ರೈತನ ಬದುಕಿಗೆ ಕತ್ತಲು ತಂದ ಹಬ್ಬದ ಸಂಭ್ರಮ
ಆಕಾಶಬುಟ್ಟಿಯಿಂದ ಕಬ್ಬಿನ ಗದ್ಗೆಗೆ ಬೆಂಕಿ
ಸಂಜಯ್ಯಾ ಚಿಕ್ಕಮಠ
| Edited By: |

Updated on:Nov 11, 2026 | 3:48 PM

Share

ಮುಖ್ಯಾಂಶಗಳು

  • ರೈತನ ಬದುಕಿನಲ್ಲಿ ಕತ್ತಲು ಆವರಿಸುವಂತೆ ಮಾಡಿದ ದೀಪಾವಳಿ
  • ದೀಪಾವಳಿಯಲ್ಲಿ ಬಿಡುವ ಆಕಾಶಬುಟ್ಟಿಯಿಂದ ಕಬ್ಬಿನ ಗದ್ದೆಗೆ ಬೆಂಕಿ
  • ಸುಟ್ಟು ಕರಕಲಾದ ನಾಲ್ಕೈದು ಎಕರೆ ಕಬ್ಬು

ಹುಬ್ಬಳ್ಳಿ, ನವೆಂಬರ್​​ 11: ದೇಶದೆಲ್ಲಡೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳಕಿನ ಹಬ್ಬ ಅನೇಕರ ಬಾಳಲ್ಲಿ ಹೊಸಬೆಳಕು ಮೂಡಿಸಿದ್ದರೆ, ಇನ್ನು ಕೆಲವರ ಬಾಳಿಗೆ ಕತ್ತಲು ಆವರಿಸುವಂತೆ ಮಾಡಿದೆ. ಸಂಭ್ರಮಕ್ಕಾಗಿ ಆಕಾಶದಲ್ಲಿ ಹಾರಿ ಬಿಡುವ ಆಕಾಶ ದೀಪ (ಆಕಾಶಬುಟ್ಟಿ)ಯಿಂದ ಕಟಾವಿಗೆ ಬಂದಿದ್ದ 7 ಎಕರೆ ಕಬ್ಬು ಸುಟ್ಟು ಹೋಗಿದೆ. ಈ ಅವಘಡದಿಂದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿ ಕಬ್ಬು ಸುಡುವುದು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಬ್ಬು ಬೆಳೆ ಹಾಳಾಗಿರುವ ಅನೇಕ ಘಟನೆಗಳು ನಡೆದಿವೆ. ಆದರೆ ತಿಮ್ಮಸಾಗರ ಗ್ರಾಮದ ರೈತ ಶಂಕರಲಿಂಗ ಅವರ ಹೊಲದಲ್ಲಿ ಕಬ್ಬು ಸುಡಲು ಕಾರಣವಾಗಿದ್ದು ದೀಪಾವಳಿ ಹಬ್ಬ.

ಇದನ್ನೂ ಓದಿ: ಕರ್ನಾಟಕದ ವಾಯುಗುಣಮಟ್ಟ: ದೀಪಾವಳಿ ಪಟಾಕಿ ಎಫೆಕ್ಟ್​ಗೆ ಬೆಂಗಳೂರಿನಲ್ಲಿ ಶೇ30ರಷ್ಟು ಹೆಚ್ಚಿದ ವಾಯುಮಾಲಿನ್ಯ

ಹೌದು.. ದೀಪಾವಳಿ ಹಬ್ಬವನ್ನು ಎಲ್ಲಡೆ ಸಂಭ್ರಮದಿಂದ ಆಚರಿಸಲಾಗಿದೆ. ಅನೇಕರು ದೀಪಗಳನ್ನು ಹಚ್ಚಿ ಹಬ್ಬ ಮಾಡಿದರೆ, ಅನೇಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಕೆಲವರು ಮುಂದೆ ಹೋಗಿ ಆಕಾಶದಲ್ಲಿ ಸ್ಕೈ ಲ್ಯಾಂಟರ್ನ್ ಅಂದರೆ ಆಕಾಶ ಬುಟ್ಟಿ ಹಾರಿ ಬಿಡುವ ಮೂಲಕ ಸಂಭ್ರಮಿಸಿದ್ದಾರೆ. ಹೀಗೆ ಹುಬ್ಬಳ್ಳಿಯಲ್ಲಿ ಬಿಟ್ಟ ಆಕಾಶ ಬುಟ್ಟಿ, ರೈತ ಶಂಕರಲಿಂಗ ಅವರ ಕಬ್ಬಿನ ಹೊಲದಲ್ಲಿ ಕಳೆದ ರಾತ್ರಿ ಬಂದು ಬಿದ್ದಿದೆ. ಆಕಾಶ ಬುಟ್ಟಿಯಲ್ಲಿದ್ದ ದೀಪದಿಂದ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ, ಎಲ್ಲಡೆ ಆವರಿಸಿಕೊಂಡಿದೆ.

ನಾಲ್ಕೈದು ಎಕರೆ ಕಬ್ಬು ಸುಟ್ಟು ಭಸ್ಮ     

ಬೆಂಕಿ ಬಿದ್ದಿರುವುದನ್ನು ನೋಡಿದ ರೈತ, ಜಮೀನಿಗೆ ಓಡಿ ಬಂದು ಬೆಂಕಿ ನಂದಿಸಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ಗ್ರಾಮಸ್ಥರು ಕೂಡ ಸಾಥ ನೀಡಿದ್ದಾರೆ. ಮತ್ತೊಂದಡೆ ಅಗ್ನಿಶಾಮಕ ಸಿಬ್ಬಂದಿ ಕೂಡ ಆಗಮಸಿದ್ದಾರೆ. ಆದರೆ ಬೆಂಕಿ ನಂದಿಸುವಷ್ಟರಲ್ಲಿ ನಾಲ್ಕೈದು ಎಕರೆಯಲ್ಲಿದ್ದ ಕಬ್ಬು ಸುಟ್ಟು ಹೋಗಿದೆ.

LIVE TV

ಶಂಕರಲಿಂಗ ಅವರು ಸಾವಿರಾರು ರೂ ಖರ್ಚು ಮಾಡಿ ಕಬ್ಬು ಬೆಳದಿದ್ದರು. ದೀಪಾವಳಿ ಹಬ್ಬ ಮುಗಿದ ತಕ್ಷಣವೇ ಕಟಾವು ಮಾಡಲು ಸಿದ್ಧತೆ ನಡೆಸಿದ್ದರು. ಆ ಮೂಲಕ ಲಕ್ಷಾಂತರ ರೂ ಆದಾಯದ ನಿರೀಕ್ಷೆಯಲ್ಲಿದ್ದರು. ಬರಗಾಲದಲ್ಲಿ ಕೂಡ ಸಾಕಷ್ಟು ಶ್ರಮವಹಿಸಿ ಕಬ್ಬು ಬೆಳದಿದ್ದ ರೈತನಿಗೆ ಕಳೆದ ರಾತ್ರಿ ಆಕಾಶ ಬುಟ್ಟಿ ದೊಡ್ಡ ಶಾಕ್ ನೀಡಿದೆ.

ಆಕಾಶ ಬುಟ್ಟಿಗಳನ್ನ ಬಿಡದಂತೆ ಮನವಿ 

ಇನ್ನು ಈ ರೀತಿಯ ಘಟನೆ ಹುಬ್ಬಳ್ಳಿ ಸುತ್ತಮುತ್ತ ನಡೆಯುತ್ತಿರುವುದು ಮೊದಲೇನಲ್ಲ. ಈ ಹಿಂದೆ ಕೂಡ ಹುಬ್ಬಳ್ಳಿಯ ಅನೇಕರು ಹಾರಿ ಬಿಡುವ ಆಕಾಶಬುಟ್ಟಿಗಳು ಸುತ್ತಮುತ್ತಲಿನ ರೈತರ ಜಮೀನಿನಲ್ಲಿ ಬಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಯಾರು ಆಕಾಶ ಬುಟ್ಟಿ ಬಿಟ್ಟಿದ್ದು ಅಂತ ಯಾರಿಗೂ ಗೊತ್ತಾಗುವುದಿಲ್ಲ. ಒಂದೆಡೆ ಆಕಾಶ ಬುಟ್ಟಿ ಬಿಟ್ಟವರು ಸಂತೋಷ ಪಟ್ಟರೆ, ಅವು ರೈತರ ಜಮೀನಿಗೆ ಬಿದ್ದಾಗ ಹೊತ್ತಿಕೊಳ್ಳುವ ಬೆಂಕಿಯಿಂದ ರೈತರು ಅಪಾರ ಪ್ರಮಾಣದ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ದಯವಿಟ್ಟು ಆಕಾಶ ಬುಟ್ಟಿಗಳನ್ನು ಬಿಡಬೇಡಿ ಅಂತ ರೈತರು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪಟಾಕಿ ಹಚ್ಚಿದವರಿಗಿಂತ ನೋಡುತ್ತಿದ್ದವರಿಗೇ ಹೆಚ್ಚು ಅಪಾಯ: ಬೆಂಗಳೂರಿನಲ್ಲಿ 150ರ ಗಡಿ ದಾಟಿದ ಪ್ರಕರಣಗಳು

ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿಕ್ಕೆ ಅನೇಕ ದಾರಿಗಳಿವೆ. ಆದರೆ ಕೆಲವರು ಇನ್ನೊಬ್ಬರ ಆಸ್ತಿ-ಪಾಸ್ತಿಗೆ ಹಾನಿ ಮಾಡುವ ಆಕಾಶ ಬುಟ್ಟಿಗಳನ್ನು ಬಿಟ್ಟು ಸಂಭ್ರಮಪಟ್ಟು, ಮತ್ತೊಬ್ಬರ ಬಾಳಿಗೆ ಕತ್ತಲು ತರುವಂತೆ ಮಾಡುತ್ತಿರುವುದು ಮಾತ್ರ ದುರ್ದೈವದ ಸಂಗತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:45 pm, Wed, 11 November 26

Follow Us
ಸಂಜಯ್ಯಾ ಚಿಕ್ಕಮಠ
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು