ಶಕ್ತಿ ಯೋಜನೆಯಲ್ಲಿ ಹುಬ್ಬಳ್ಳಿ-ಧಾರವಾಡದ ಚಿಗರಿ ಬಸ್ನಲ್ಲೂ ಫ್ರೀ ಪ್ರಯಾಣಕ್ಕೆ ಬೇಡಿಕೆ
ಒಂದು ಕಡೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆ ಮಾಡಿದೆ. 5 ಯೋಜನೆಗೆ ದಿನಕ್ಕೊಂದು ಷರತ್ತು ಹಾಕುತ್ತಿದೆ. ಅದರಂತೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಬಸ್ ಫ್ರೀ ಎಂದು ಘೋಷಣೆ ಮಾಡಲಾಗಿತ್ತು. ನಂತರ ಅದಕ್ಕೆ ಕೆಲವೊಂದು ಷರತ್ತು ಹಾಕಿ ಇದೇ ತಿಂಗಳು 11ರಿಂದ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು. ಆದ್ರೆ, ಸರ್ಕಾರಕ್ಕೆ ಹುಬ್ಬಳ್ಳಿ ಧಾರವಾಡದ BRTS ಸಾರಿಗೆ ವ್ಯಾಪ್ತಿಯ ಚಿಗರಿ ಬಸ್ ಟೆನ್ಶನ್ ತಂದಿಟ್ಟಿದೆ. ಅಷ್ಟಕ್ಕೂ ಏನಿದು ಚಿಗರಿ ಬಸ್ ಟೆನ್ಶನ್ ಅಂತೀರಾ? ಇಲ್ಲಿದೆ ನೋಡಿ.

ಹುಬ್ಬಳ್ಳಿ ಧಾರವಾಡ: ಈ ಅವಳಿ ನಗರದಲ್ಲಿ ನಿತ್ಯ ನೂರಾರು ಚಿಗರಿ ಬಸ್ಗಳು ಓಡಾಡುತ್ತವೇ. ಹುಬ್ಬಳ್ಳಿ(Hubballi)ಯ ಬಿಆರ್ಟಿಸಿ (BRTS) ಸಾರಿಗೆ ವ್ಯಾಪ್ತಿಯ ಚಿಗರಿ ಬಸ್(Chigari Bus) ಹವಾನಿಯಂತ್ರಿತ ಬಸ್ ಆಗಿದೆ. ಅವಳಿ ನಗರದಲ್ಲಿ ಬಹುತೇಕ ಜನ ಇದೇ ಬಸ್ನಲ್ಲಿ ಪ್ರಯಾಣ ಮಾಡ್ತಾರೆ. ಆದ್ರೆ, ಸರ್ಕಾರದ ಆದೇಶದಲ್ಲಿ ಹವಾನಿಯಂತ್ರಿತ, ರಾಜಹಂಸ ಸೇರಿ ಕೆಲ ಬಸ್ನಲ್ಲಿ ಉಚಿತ ಪ್ರಯಾಣ ಇಲ್ಲ. ಆದ್ರೆ, ಇದೀಗ ಹುಬ್ಬಳ್ಳಿ ಧಾರವಾಡ ಜನ ಚಿಗರಿ ಬಸ್ ಸೇರಿದಂತೆ ಎಲ್ಲ ಬಸ್ಗೂ ಫ್ರೀ ಬಿಡಬೇಕು ಎನ್ನುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ನಡುವೆ ಸುಮಾರು 96 ಚಿಗರಿ ಬಸ್ ಗಳಿವೆ. ನಿತ್ಯ 80 ಸಾವಿರ ಪ್ರಯಾಣಿಕರು ಓಡಾಡುತ್ತಾರೆ. ಸಹಜವಾಗಿ ಸರ್ಕಾರದ ಫ್ರೀ ಯೋಜನೆಯಲ್ಲಿ ಚಿಗರಿ ಬಸ್ ತರಬೇಕು ಅನ್ನೋದು ಮಹಿಳೆಯರ ವಾದವಾಗಿದೆ.
ಇದು ಸಹಜವಾಗಿ ಸರ್ಕಾರ ಮತ್ತು BRTS ಸಾರಿಗೆ ಅಧಿಕಾರಿಗಳಿಗೆ ಟೆನ್ಶನ್ ತಂದಿಟ್ಟಿದೆ. ಅಕಸ್ಮಾತ್ ಚಿಗರಿ ಬಸ್ಗೆ ಅನುಮತಿ ನೀಡಿದ್ರೆ, ಸಿದ್ದು ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದಂತಾಗತ್ತೆ. ಯಾಕಂದ್ರೆ ಮತ್ತೆ BMTC ಬಸ್ನಲ್ಲೂ ಉಚಿತ ಪ್ರಯಾಣದ ಕೂಗು ಕೇಳಿ ಬರಲಿದೆ. ಆದ್ರೆ, ಹುಬ್ಬಳ್ಳಿ ಜನ ಮಾತ್ರ ನಮಗೆ ಚಿಗರಿ ಬಸ್ನಲ್ಲೂ ಫ್ರೀ ಬಿಡಬೇಕು ಎನ್ನುತ್ತಿದ್ದಾರೆ. BRTS ವ್ಯಾಪ್ತಿಯ ಚಿಗರಿ ಬಸ್ ಹವಾನಿಯಂತ್ರಿತ ಬಸ್ ಆಗಿದ್ದು, ಮಾಹಿತಿ ಪ್ರಕಾರ ಈಗಾಗಲೇ ತಿಂಗಳಿಗೆ 2 ಕೋಟಿಯಷ್ಟು BRTS ಲಾಸ್ನಲ್ಲಿದೆ. ಅಕಸ್ಮಾತ್ ಇದೀಗ ಶಕ್ತಿ ಯೋಜನೆಯಲ್ಲಿ ಚಿಗರಿ ಬಸ್ ಬಂದ್ರೆ, ಮತ್ತಷ್ಟು ದೋಖಾ ಆಗಲಿದೆ. ಇದೇ ಕಾರಣಕ್ಕೆ ಇದುವರೆಗೂ ಚಿಗರಿ ಬಸ್ಗೆ ಉಚಿತ ಪ್ರಯಾಣದ ಅನುಮತಿ ಕೊಟ್ಟಿಲ್ಲ.
ಇದನ್ನೂ ಓದಿ:Hubli News: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ; ಜೂನ್ 20 ರಂದು ಮಹಾಪೌರ, ಉಪ ಮಹಾಪೌರ ಚುನಾವಣೆ
ಆದರೀಗ ಜನರ ಬೇಡಿಕೆಯಾಗಿರೋ ಕಾರಣಕ್ಕೆ BRTC ಎಮ್.ಡಿ ಭರತ್ ಈಗಾಗಲೇ ಸರ್ಕಾರಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಶಕ್ತಿ ಯೋಜನೆಯಲ್ಲಿ ಚಿಗರಿ ಬಸ್ ತರಲು ಅನುಮತಿ ಕೊಡಿ ಎಂದು ಭರತ್ ಮನವಿ ಮಾಡಿಕೊಂಡಿದ್ದಾರೆ. ಆದ್ರೆ, ಸರ್ಕಾರ ಇದುವರೆಗೂ ಯಾವುದೇ ಪ್ರತಿಕ್ರೀಯೆ ನೀಡಿಲ್ಲ. ನಿತ್ಯ ಹೆಚ್ಚು ಕಡಿಮೆ 80 ಸಾವಿರ ಪ್ರಯಾಣಿಕರು ಬಸ್ನಲ್ಲಿ ಓಡಾಡುತ್ತಿದ್ದಾರೆ. ಬಹುತೇಕ ಮಹಿಳೆಯರು ಕೆಲಸಕ್ಕೆಂದು ಹೋಗುವವರು ಚಿಗರಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅವಳಿ ನಗರದ ಮದ್ಯೆ ಚಿಗರಿ ಬಸ್ಗೆ ಅವಲಂಬಿತವಾಗಿರೋರೆ ಹೆಚ್ಚು, ಇದೀಗ ಶಕ್ತಿ ಯೋಜನೆ ಸರ್ಕಾರಕ್ಕೆ ಹೊಸ ಚಿಂತೆ ಶುರು ಮಾಡಿದೆ.
ಒಟ್ಟಾರೆ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿಗಳು ಇದುವರೆಗೂ ಜನರನ್ನು ತಲುಪಿಲ್ಲ. ಜೂನ್ ಒಂದರಿಂದ ಗ್ಯಾರಂಟಿ ಕೊಡ್ತೀವಿ ಅಂದ ಸರ್ಕಾರ ಇದೀಗ ದಿನಕ್ಕೊಂದು ಷರತ್ತು ಹಾಕುತ್ತಿದೆ. ಇತ್ತ ಸರ್ಕಾರ ಘೋಷಣೆ ಮಾಡಿರೋ ಯೋಜನೆಗಳು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದಂತೂ ಸತ್ಯ.
ಶಿವಕುಮಾರ್ ಪತ್ತಾರ್ ಟಿವಿ9 ಹುಬ್ಬಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ