ಧಾರವಾಡ: ಇಲ್ಲಿನ ಆಹಾರ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ವ್ಯವಸ್ಥಾಪಕ ಶಿವಶಂಕರ ಹಿರೇಮಠ ಕಚೇರಿ, ಮನೆ ಮೇಲೆ ದಾಳಿ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಕಾಂಪೌಂಡ್ನಲ್ಲಿರುವ ಆಹಾರ ಇಲಾಖೆ ಕಚೇರಿ ಮೇಲೆ ದಾಳಿ ನಡೆದಿದೆ. ಶಿವಶಂಕರ ಹಿರೇಮಠ ಕಚೇರಿಯಲ್ಲಿ 1.15 ಲಕ್ಷ ನಗದು ಪತ್ತೆ ಆಗಿದೆ. ಶಿವಶಂಕರ ಹಿರೇಮಠ ಮನೆಯಲ್ಲಿ 4.46 ಲಕ್ಷ ನಗದು ಪತ್ತೆ ಆಗಿದೆ. ಒಟ್ಟು ಅಕ್ರಮವಾಗಿ ಸಂಗ್ರಹಿಸಿದ್ದ 5.61 ಲಕ್ಷ ನಗದು ಎಸಿಬಿ ವಶಕ್ಕೆ ಪಡೆಯಲಾಗಿದೆ.
ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಹಣ ಸುಲಿಗೆ ಮಾಡುತ್ತಿದ್ದ ವ್ಯವಸ್ಥಾಪಕ ಶಿವಶಂಕರ ಹಿರೇಮಠ ವಿರುದ್ಧ ಬಹಳಷ್ಟು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಮನೆ ಹಾಗೂ ಕಚೇರಿ ಸಹಿತ ಒಟ್ಟು 5.61 ಲಕ್ಷ ರೂಪಾಯಿ ನಗದು ಪತ್ತೆ ಆಗಿದೆ.
ವಿಜಯನಗರ: ನಾಲ್ವರು ದರೋಡೆಕೋರರ ಬಂಧನ
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕು ಹಲವಾಗಲು ಎಂಬಲ್ಲಿ ಪೊಲೀಸರು ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ. ಹರಪನಹಳ್ಳಿ ತಾಲೂಕಿನ ಅಲಗಿಲವಾಡ ಗ್ರಾಮದ ಬಳಿ ಬಂಧನ ಮಾಡಲಾಗಿದೆ. ಚಂದ್ರು, ಚನ್ನದಾಸರ ಭೀಮ, ಚಂದ್ರಪ್ಪ, ರಮೇಶ ಬಂಧಿತರು ಆಗಿದ್ದಾರೆ. ದರೋಡೆ ಮಾಡಲು ಹೊಂಚುಹಾಕಿ ಕುಳಿತಿದ್ದಾಗ ನಾಲ್ವರ ಸೆರೆ ಮಾಡಲಾಗಿದೆ. ಪೊಲೀಸರ ದಾಳಿ ವೇಳೆ ಓರ್ವ ಆರೋಪಿ ಪರಾರಿ ಆಗಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗಿದೆ. ಬಂಧಿತರಿಂದ ಕಬ್ಬಿಣದ ರಾಡ್, ಖಾರದ ಪುಡಿ ಪ್ಯಾಕೇಟ್, ಹಗ್ಗ ಹಾಗೂ ಎರಡು ಬೈಕ್ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರಾಯಚೂರು: ಬಸ್ ಡಿಕ್ಕಿಯಾಗಿ ತಂದೆ, ಮಗಳ ಸಾವು; ಮಂತ್ರಾಲಯಕ್ಕೆ ತೆರಳುವಾಗ ದುರ್ಘಟನೆ
ಇದನ್ನೂ ಓದಿ: ನೌಕರಿ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ವಂಚನೆ! ಹೊಸದುರ್ಗ ಪೊಲೀಸರಿಂದ ಐವರು ಅರೆಸ್ಟ್