ರಾಯಚೂರು: ಬಸ್ ಡಿಕ್ಕಿಯಾಗಿ ತಂದೆ, ಮಗಳ ಸಾವು; ಮಂತ್ರಾಲಯಕ್ಕೆ ತೆರಳುವಾಗ ದುರ್ಘಟನೆ
Raichur News: ಮೃತ ಪ್ರಸಾದ್ ಅಂಬಾರಮಠದ ಅರ್ಚಕರಾಗಿದ್ದರು ಎಂದು ತಿಳಿದುಬಂದಿದೆ. ಅಂಬಾರಮಠದಿಂದ ಮಂತ್ರಾಲಯಕ್ಕೆ ತೆರಳುವಾಗ ಘಟನೆ ನಡೆದಿದೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಯಚೂರು: ಸರ್ಕಾರಿ ಬಸ್ ಡಿಕ್ಕಿ ಆಗಿ ಕಾರಿನಲ್ಲಿದ್ದ ತಂದೆ, ಮಗಳ ಸಾವು ಸಂಭವಿಸಿದ ದುರ್ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ಬಳಿ ನಡೆದಿದೆ. ಅಪಘಾತದಲ್ಲಿ ಪ್ರಸಾದ್ (50), ವಿದ್ಯಾ (11) ಎಂಬವರು ಸಾವನ್ನಪ್ಪಿದ್ದಾರೆ. ಮೃತ ಪ್ರಸಾದ್ ಅಂಬಾರಮಠದ ಅರ್ಚಕರಾಗಿದ್ದರು ಎಂದು ತಿಳಿದುಬಂದಿದೆ. ಅಂಬಾರಮಠದಿಂದ ಮಂತ್ರಾಲಯಕ್ಕೆ ತೆರಳುವಾಗ ಘಟನೆ ನಡೆದಿದೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಮನಗರ: ಪ್ರೀತಿ ನಿರಾಕರಿಸಿದ್ದಕ್ಕೆ ವಿಷ ಕುಡಿದು ಯುವಕ ಆತ್ಮಹತ್ಯೆ ಪ್ರೀತಿ ನಿರಾಕರಿಸಿದ್ದಕ್ಕೆ ವಿಷ ಕುಡಿದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರು ಎಂಬಲ್ಲಿ ನಡೆದಿದೆ. ಇಲ್ಲಿನ ಅರುಣ್ ರಾಜ್ ಅರಸ್(20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಕುಡಿಯುವುದನ್ನ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಪ ಮಾಡುತ್ತಿದ್ದಾಗಲೇ ಕೊನೆಯುಸಿರೆಳೆದ ವೃದ್ಧೆ ಜಪ ಮಾಡುತ್ತಿದ್ದಾಗಲೇ ವೃದ್ಧೆ ಕೊನೆಯುಸಿರೆಳೆದ ಘಟನೆ ನೆಲಮಂಗಲದ ಶ್ರೀನಿಧಿ ಲಾಡ್ಜ್ನಲ್ಲಿ ನಡೆದಿದೆ. ಭಾರತಿ (75) ಎಂಬವರು ಸಾವನ್ನಪ್ಪಿದ್ದಾರೆ. ವೃದ್ಧೆಯ ಪತಿ ಮಹೇಶ್ ವಾಸುದೇವ್ (75) ಅಸ್ವಸ್ಥ ಆಗಿದ್ದಾರೆ. ಅಸ್ವಸ್ಥ ವೃದ್ಧನಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ದಂಪತಿ ವಿಶ್ರಾಂತಿಗಾಗಿ 3 ದಿನದ ಹಿಂದೆ ರೂಂ ಪಡೆದಿದ್ದರು. 2 ದಿನದಿಂದ ದಂಪತಿ ರೂಂನಿಂದ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Agumbe Ghat: ತೀರ್ಥಹಳ್ಳಿಯ ಆಗುಂಬೆ ಘಾಟ್ನಲ್ಲಿ ಭೀಕರ ಅಪಘಾತ; 4 ಜನ ಸ್ಥಳದಲ್ಲೇ ಸಾವು, ಐವರ ಸ್ಥಿತಿ ಗಂಭೀರ
ಇದನ್ನೂ ಓದಿ: Crime: ಬೀರೂರಿನಲ್ಲಿ ತಂದೆಯಿಂದ ಮಗಳ ಕೊಲೆ, ಶ್ರೀನಿವಾಸಪುರದಲ್ಲಿ ಅಪಘಾತ, ಚಡಚಣದಲ್ಲಿ ಕಬ್ಬಿನಗದ್ದೆಗೆ ಬೆಂಕಿ
Published On - 7:45 pm, Sat, 30 October 21