AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಸಿಮ್ ಸಕ್ರಿಯಗೊಳಿಸಲು ಜಿಯೋ ಕಂಪನಿಗೆ ನಿರ್ದೇಶನ ನೀಡಿದ ಗ್ರಾಹಕರ ಆಯೋಗ

ಮೊಬೈಲ್ ಸಿಮ್ ಕಳೆದುಕೊಂಡ ಹಿನ್ನೆಲೆಯಲ್ಲಿ ಮತ್ತೊಂದು ಸಿಮ್‌ ಸಕ್ರಿಯಗೊಳಿಸಲು ವಿಫಲವಾದ ರಿಲೈನ್ಸ್ ಕಂಪನಿಗೆ ಪರಿಹಾರ ನೀಡಲು ಧಾರವಾಡದ ಗ್ರಾಹಕರ ಆಯೋಗ ಆದೇಶ ನೀಡಿದೆ. ಧಾರವಾಡ ನಗರದ ಮಾಳಮಡ್ಡಿ ಬಡಾವಣೆಯ ನಿವಾಸಿ ಲಕ್ಕಪ್ಪ ಬೆಣ್ಣಿ ಎಂಬುವರು 2017ರಲ್ಲಿ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆಯಿಂದ ಜಿಯೋ ಸಿಮ್ ಖರೀದಿಸಿದ್ದರು. ಕೋವಿಡ್-19 ಅವಧಿಯಲ್ಲಿ ಅವರು ಆ ಸಿಮ್‌ನ್ನು ಕಳೆದುಕೊಂಡಿದ್ದರು.

ಧಾರವಾಡ: ಸಿಮ್ ಸಕ್ರಿಯಗೊಳಿಸಲು ಜಿಯೋ ಕಂಪನಿಗೆ ನಿರ್ದೇಶನ ನೀಡಿದ ಗ್ರಾಹಕರ ಆಯೋಗ
ಗ್ರಾಹಕನ ಸಿಮ್ ಸಕ್ರಿಯಗೊಳಿಸುವಂತೆ ಜಿಯೋ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ನಿರ್ದೇಶನ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: Rakesh Nayak Manchi|

Updated on: Sep 01, 2023 | 9:30 PM

Share

ಧಾರವಾಡ, ಸೆ.1: ಮೊಬೈಲ್ ಸಿಮ್ ಕಳೆದುಕೊಂಡ ಹಿನ್ನೆಲೆಯಲ್ಲಿ ಮತ್ತೊಂದು ಸಿಮ್‌ ಸಕ್ರಿಯಗೊಳಿಸಲು ವಿಫಲವಾದ ರಿಲೈನ್ಸ್ ಕಂಪನಿಗೆ ಪರಿಹಾರ ನೀಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಧಾರವಾಡ (Dharwad) ನಗರದ ಮಾಳಮಡ್ಡಿ ಬಡಾವಣೆಯ ನಿವಾಸಿ ಲಕ್ಕಪ್ಪ ಬೆಣ್ಣಿ ಎಂಬುವರು 2017ರಲ್ಲಿ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆಯಿಂದ ಜಿಯೋ ಸಿಮ್ ಖರೀದಿಸಿದ್ದರು.

ಕೋವಿಡ್-19 ಅವಧಿಯಲ್ಲಿ ಲಕ್ಕಪ್ಪ ಬೆಣ್ಣಿ ಅವರ ಆ ಸಿಮ್‌ನ್ನು ಕಳೆದುಕೊಂಡಿದ್ದರು. ಅದನ್ನು ಮತ್ತೆ ಸಕ್ರಿಯಗೊಳಿಸುವಂತೆ ಸಿಮ್ ಖರೀದಿಸಿದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆ ಮತ್ತು ಜಿಯೋ ಕಸ್ಟಮರ್ ಕೇರ್‌ಗೆ ಸಾಕಷ್ಟು ವಿನಂತಿಸಿದ್ದರು. ಆದರೂ ಹೇಳಿದ ನಂಬರಿನ ಜಿಯೋ ಸಿಮ್‌ ಅನ್ನು ಸಕ್ರಿಯಗೊಳಿಸಿರಲಿಲ್ಲ. ಅದರಿಂದ ತನ್ನ ದೈನಂದಿನ ಜೀವನ ನಿರ್ವಹಣೆ ಮತ್ತು ಬ್ಯಾಂಕ್ ಇತ್ಯಾದಿ ಕೆಲಸಕ್ಕೆ ತೊಂದರೆಯಾಗಿದ್ದು, ಎದುರುದಾರರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಲಕ್ಕಪ್ಪ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

ಇದನ್ನೂ ಓದಿ: ಕಾಶಿ-ಅಯೋಧ್ಯೆ ಯಾತ್ರೆ ರದ್ದುಗೊಳಿಸಿದ ಸ್ಟಾರ್‌ ಏರ್‌ಲೈನ್ಸ್‌: ಪ್ರಯಾಣಿಕರಿಗೆ ದಂಡ ಸಮೇತ ಪರಿಹಾರಿ ನೀಡುವಂತೆ ಧಾರವಾಡ ಗ್ರಾಹಕರ ಆಯೋಗ ಆದೇಶ

ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಕಳೆದುಕೊಂಡ ಸಿಮ್‌ ಅನ್ನು ಮರು ಸಕ್ರಿಯಗೊಳಿಸಲು ಕೇಳಿಕೊಂಡರೂ ಕೋರಿಕೆಯನ್ನು ಪರಿಗಣಿಸಲು ಸಂಸ್ಥೆಯು ವಿಫಲರಾಗಿದ್ದು, ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಅದೇ ನಂಬರ್‌ಗೆ ಸಿಮ್‌ ಅನ್ನು ಸಕ್ರಿಯಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಅಲ್ಲದೆ, ಸೇವಾ ನ್ಯೂನ್ಯತೆಗಾಗಿ 10 ಸಾವಿರ ರೂಪಾಯಿ ಪರಿಹಾರ ಮತ್ತು 5 ಸಾವಿರ ರೂಪಾಯಿ ಪ್ರಕರಣದ ಖರ್ಚನ್ನು ನೀಡುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More