ಸೇವಾ ನ್ಯೂನ್ಯತೆ: ಬಿಲ್ಡರ್‌ಗೆ ದಂಡ ವಿಧಿಸಿ, ಪರಿಹಾರ ನೀಡಲು ಆದೇಶಿಸಿದ ಧಾರವಾಡ ಗ್ರಾಹಕರ ಆಯೋಗ
ಸೇವಾ ನ್ಯೂನ್ಯತೆ ಎಸಗಿದ ಸಿಲ್ವರ್ ಬ್ರಿಕ್ ಬಿಲ್ಡರ್‌ಗೆ ದಂಡ ಮತ್ತು ಪರಿಹಾರ ನೀಡಲು ಧಾರವಾಡದ ಗ್ರಾಹಕರ ಆಯೋಗ ಆದೇಶಿಸಿದೆ. ದೂರುದಾರರು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಹುಬ್ಬಳ್ಳಿಯ ಕೇಶ್ವಾಪುರ ನಗರದ ನೂತನ್ ಜೈನ್ ಹಾಗೂ ಕಮಲೇಶ ಬಗ್ರೆಚಾ ಸಿಲ್ವರ್ ಬ್ರಿಕ್ ಬಿಲ್ಡರ್ ಮಾಲೀಕ ಅವಿನಾಶ ಸವಣೂರ ಹುಬ್ಬಳ್ಳಿಯ ಬೆಂಗೇರಿ ಗ್ರಾಮದಲ್ಲಿ ನಿರ್ಮಿಸುತ್ತಿದ್ದ ಲಕ್ಸೋ ಎನ್‌ಟಿಗೊ ಅಪಾರ್ಟ್ಮೆಂಟ್ ನಲ್ಲಿ ತಲಾ ಒಂದೊಂದು ಮನೆಯನ್ನು ಖರೀದಿಸಿದ್ದರು. ಇಬ್ಬರೂ ಮುಂಗಡವಾಗಿ ರೂ. 28 ಲಕ್ಷ ಹಾಗೂ ರೂ. 23 ಲಕ್ಷ ಸಂದಾಯ ಮಾಡಿದ್ದರು. ಆದರೆ, ಬಿಲ್ಡರ್ ಅವಿನಾಶ ಸವಣೂರ ಮನೆಗಳನ್ನು ದೂರುದಾರರ ಗಮನಕ್ಕೆ ತರದೇ ಬೇರೆಯವರಿಗೆ ಮಾರಾಟ ಮಾಡಿದ್ದರು.
ಆ ಸಂಗತಿ ಗಮನಕ್ಕೆ ಬಂದ ಮೇಲೆ ದೂರುದಾರರು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಎದುರುದಾರರು ದೂರುದಾರರಿಂದ ದೊಡ್ಡ ಮೊತ್ತದ ಹಣ ಪಡೆದುಕೊಂಡು ಅವರಿಗೆ ಬುಕ್ ಮಾಡಿದ ಮನೆಗಳನ್ನು ನೀಡದೆ ಮೋಸ ಮಾಡಿದ್ದಾರೆ ಎಂದು ಗ್ರಾಹಕರ ಆಯೋಗಕ್ಕೂ ಹೋಗಿದ್ದರು.
Also Read: ಫ್ಯ್ಲಾಟ್ ನಿರ್ಮಿಸಿಕೊಡದ ಬಿಲ್ಡರ್! ಧಾರವಾಡ ಗ್ರಾಹಕರ ಆಯೋಗದ ಆದೇಶವೇನು?
ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಇಬ್ಬರೂ ದೂರುದಾರರಿಂದ ರೂ. 51 ಲಕ್ಷ ಪಡೆದುಕೊಂಡು ಅವರು ಬುಕ್ ಮಾಡಿದ ಮನೆಗಳನ್ನು ಕೊಟ್ಟಿಲ್ಲ. ದೂರುದಾರರು ಸಂದಾಯ ಮಾಡಿದ ಒಟ್ಟು ಹಣ ಸಂದಾಯ ಮಾಡಿ ಆ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದೆ.
ಇದನ್ನೂ ಓದಿ: ಠೇವಣಿ ವಾಪಸ್ ಕೊಡದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ 97 ಸಾವಿರ ರೂ ದಂಡ ವಿಧಿಸಿದ ಧಾರವಾಡ ಗ್ರಾಹಕ ವೇದಿಕೆ
ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 30 ಸಾವಿರ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚವೆಂದು ರೂ. 10 ಸಾವಿರ ನೀಡುವಂತೆ ಸಿಲ್ವರ್ ಬ್ರಿಕ್ ಬಿಲ್ಡರ್ ಮಾಲೀಕ ಅವಿನಾಶ ಸವಣೂರಗೆ ಆಯೋಗ ನಿರ್ದೇಶಿಸಿದೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




