ಸುಟ್ಟು ಹೋದ ಬೈಕ್​ಗೆ ಖಾಯಂ ನೊಂದಣಿ ಇಲ್ಲ ಎಂದು ಪರಿಹಾರ ನೀಡಲು ನಿರಾಕರಿಸಿದ ಕಂಪನಿಗೆ 15 ಲಕ್ಷ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ

ಖಾಯಂ ರಜಿಸ್ಟ್ರೇಶನ್ ಮಾಡಿಸದ ಕಾರಣ ಸುಟ್ಟ ಬೈಕ್​ಗೆ ಪರಿಹಾರದ ಹಣ ನೀಡಲು ನ್ಯೂ ಇಂಡಿಯಾ ಅಶುರೆನ್ಸ್ ವಿಮಾ ಕಂಪನಿ ನಿರಾಕರಿಸಿತ್ತು. ಸದ್ಯ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಭಾರೀ ದಂಡ ವಿಧಿಸಿದೆ.

ಸುಟ್ಟು ಹೋದ ಬೈಕ್​ಗೆ ಖಾಯಂ ನೊಂದಣಿ ಇಲ್ಲ ಎಂದು ಪರಿಹಾರ ನೀಡಲು ನಿರಾಕರಿಸಿದ ಕಂಪನಿಗೆ 15 ಲಕ್ಷ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
Follow us
ಆಯೇಷಾ ಬಾನು
|

Updated on: Mar 02, 2023 | 3:50 PM

ಧಾರವಾಡ: ಪರಿಹಾರದ ಹಣ ನೀಡದ ನ್ಯೂ ಇಂಡಿಯಾ ಅಶುರೆನ್ಸ್ ವಿಮಾ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಭಾರೀ ದಂಡ ವಿಧಿಸಿದೆ. 15,59,000 ರೂ ದಂಡ ಮತ್ತು ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ತುಷಾರ್ ಪವಾರ್ ಎಂಬುವವರು ಮುಂಬೈ ಶೋ ರೂಮ್‌ನಿಂದ ಬೈಕ್ ಖರೀದಿಸಿದ್ದರು. 2021 ಮೇ ತಿಂಗಳಲ್ಲಿ 14,99,000 ರೂ. ಹಣವನ್ನು ನೀಡಿ ಕವಾಸಾಕಿ ಕಂಪನಿಯ ಕವಾಸಾಕಿ-900 ಸುಪರ್ ಬೈಕ್ ಖರೀದಿಸಿದ್ದರು. ವಿಮಾ ಹಣ ರೂ.39,006/- ಪ್ರೀಮಿಯಮ್ ಕಟ್ಟಿದ್ದರು. ಬಳಿಕ ಆರ್.ಟಿ.ಓ ಕಚೇರಿಯಿಂದ ತಾತ್ಕಾಲಿಕ ನೋಂದಣಿ ಮಾಡಿಸಲಾಗಿತ್ತು. ಆದ್ರೆ ತಿಂಗಳೊಳಗಾಗಿ ಖಾಯಂ ರಜಿಸ್ಟ್ರೇಶನ್ ಮಾಡಿಸಬೇಕಿತ್ತು. ಅದೇ ಸಮಯಕ್ಕೆ ಲಾಕ್‌ಡೌನ್ ಘೋಷಣೆಯಾಗಿತ್ತು. ಆಗ ಆರ್.ಟಿ. ಓ. ಕಚೇರಿ ಬಂದ್ ಆಗಿತ್ತು. ಕೆಲ ದಿನಗಳ ಬಳಿಕ ಆಕಸ್ಮಿಕ ಬೆಂಕಿಗೆ ಬೈಕ್ ಸುಟ್ಟು ಹೋಗಿತ್ತು. ವಿಮೆ ಚಾಲ್ತಿಯಿದ್ದುದರಿಂದ 14,99,000 ನೀಡುವಂತೆ ಕ್ಲೇಮ್ ಮಾಡಲಾಗಿದೆ. ಆಗ ವಿಮಾ ಕಂಪನಿ ವಾಹನಕ್ಕೆ ಖಾಯಂ ನೋಂದಣಿ ಆಗಿರಲಿಲ್ಲ. ಹೀಗಾಗಿ ವಿಮೆ ನೀಡಲು ಸಾಧ್ಯವಿಲ್ಲ ಎಂದಿದೆ.

ಆಗ ತುಷಾರ್ ಕಂಪನಿ ವಿರುದ್ಧ ಆಯೋಗದ ಮೊರೆ ಹೋಗಿದ್ದು ಆಯೋಗದಿಂದ ತುಷಾರ್ ಪರ ತೀರ್ಪು ಬಂದಿದೆ. ಬೈಕಿನ ಪೂರ್ತಿ ಮೌಲ್ಯ ರೂ.14,99,000ಗಳ ಪರಿಹಾರ, ದೂರುದಾರರಿಗೆ ಮಾನಸಿಕ ತೊಂದರೆಗಾಗಿ ರೂ.50,000 ಪರಿಹಾರ, ಪ್ರಕರಣದ ಖರ್ಚು ವೆಚ್ಚ ರೂ.10,000 ಸೇರಿದಂತೆ ಒಟ್ಟು ರೂ. 15,59,000/- ದಂಡ ಮತ್ತು ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ