ಧಾರವಾಡ: ಸೌಹಾರ್ದವಾಗಿದ್ದ ಹಿಂದೂ ಮುಸ್ಲಿಮರು, ಅನಗತ್ಯವಾಗಿ ಅರೆಸ್ಟ್​ ಆದವರಿಗೆ ಸಿಕ್ತು ಜಾಮೀನು, ಗರಗ ಪೊಲೀಸರ ಕೈವಾಡವೇನು?

| Updated By: ಸಾಧು ಶ್ರೀನಾಥ್​

Updated on: Feb 06, 2024 | 12:31 PM

ಈ ಮಧ್ಯೆ ಗಲಾಟೆಗೆ ಸಂಬಂಧಿಸಿದಂತೆ ಗರಗ್ ಠಾಣೆ ಪಿಎಸ್ಐ ತಲೆದಂಡವೂ ಆಗಿತ್ತು. ಗಲಾಟೆ ನಡೆದಾದ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಅನ್ನೋ ಕಾರಣಕ್ಕೆ ಗರಗ್ ಪಿಎಸ್ಐ ಪ್ರಕಾಶ ಅಮಾನತ್ತಾಗಿದ್ದರು. ಹಿಂದೂ ಯುವಕರ ವಿರುದ್ಧ ದೂರು ನೀಡುವಂತೆ ಮುಸ್ಲಿಂ ಸಮುದಾಯದವರನ್ನು ಗರಗ ಪೊಲೀಸರೇ ಒತ್ತಾಯಿಸಿದ್ದಾರೆ. ಆದರೆ ದೂರು ನೀಡಲು ನಿರಾಕರಿಸಿದ್ದರಿಂದ ಪೊಲೀಸರೇ ಹಿಂದೂ ಯುವಕರನ್ನು ಬಂಧಿಸಿದ್ದರು. ಇದೀಗ ಅವರೆಲ್ಲ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ತಿಳಿಸಿದ್ದಾರೆ.

ಧಾರವಾಡ: ಸೌಹಾರ್ದವಾಗಿದ್ದ ಹಿಂದೂ ಮುಸ್ಲಿಮರು, ಅನಗತ್ಯವಾಗಿ ಅರೆಸ್ಟ್​ ಆದವರಿಗೆ ಸಿಕ್ತು ಜಾಮೀನು, ಗರಗ ಪೊಲೀಸರ ಕೈವಾಡವೇನು?
ಧಾರವಾಡ: ಅನಗತ್ಯವಾಗಿ ಅರೆಸ್ಟ್​ ಆದವರಿಗೆ ಸಿಕ್ತು ಜಾಮೀನು, ಯಾಕೆ ಹೀಗಾಯಿತು?
Follow us on

ಕಳೆದ ತಿಂಗಳಷ್ಟೇ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದಿದ್ದ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 15 ಜನರನ್ನು ಬಂಧಿಸಿ, ಜೈಲಿಗಟ್ಟಿದ್ದರು. ಬಳಿಕ ಈ ಘಟನೆ ರಾಜಕೀಯ ತಿರುವು ಕೂಡ ಪಡೆದುಕೊಂಡಿತ್ತು. ಘಟನೆಯಲ್ಲಿ ಪಾಲ್ಗೊಂಡಿದ್ದ ಅನೇಕ ಕಾಂಗ್ರೆಸ್ ಯುವಕರನ್ನು ಪೊಲೀಸರು ಬಂಧಿಸಿಲ್ಲ. ಕೇವಲ ಬಿಜೆಪಿ ಕಾರ್ಯಕರ್ತರನ್ನಷ್ಟೇ ಬಂಧಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಇಂಥ ಪ್ರಕರಣದಲ್ಲಿ ಜೈಲು ಸೇರಿದ್ದ ಹಿಂದೂ ಯುವಕರಿಗೆ (hindu, muslim) ಇದೀಗ ಜಾಮೀನು (bail) ಸಿಕ್ಕಿದೆ. ಅವರೆಲ್ಲ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಉದ್ಘಾಟಿಸೋ ಮುನ್ನಾದಿನ ಅಂದರೆ, ಜನವರಿ 21 ರಂದು ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಸದ್ದಾಂ ಹುಸೇನ್ ಅನ್ನೊ ಯುವಕ ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿದ್ದ ಚಿತ್ರವನ್ನು ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದ. ಅಲ್ಲದೇ ಪವರ್ ಆಫ್ ಇಸ್ಲಾಂ ಅನ್ನೋ ಸ್ಲೋಗನ್ ಕೂಡ ಹಾಕಿಕೊಂಡಿದ್ದ. ಅಲ್ಲದೇ ಆ ಚಿತ್ರದಲ್ಲಿ ಓವೈಸಿ ಫೋಟೋ ಕೂಡ ಇತ್ತು. ಇದನ್ನು ನೋಡಿದ ಕೂಡಲೇ ಎಚ್ಚೆತ್ತುಕೊಂಡಿದ್ದ ಗರಗ ಠಾಣೆ ಪೊಲೀಸರು (Dharwad garaga police) ಆತನ ಮೇಲೆ ಸ್ವಯಂ ಪ್ರೇರಿತ ಕೇಸನ್ನು ದಾಖಲಿಸಿಕೊಂಡು ಯುವಕನನ್ನು ಬಂಧಿಸಿ ಜೈಲಿಗಟ್ಟಿದ್ದರು.

ಈ ಘಟನೆ ನಡೆದ ಬಳಿಕ ಜ. 24 ರಂದು ಗ್ರಾಮದಲ್ಲಿ ಹಿಂದೂ ಯುವಕರು ಸದ್ದಾಂ ಹುಸೇನ್ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ಜ. 25 ರಂದು 15 ಜನರನ್ನು ಬಂಧಿಸಿ, ಜೈಲಿಗೆ ಕಳಿಸಿದ್ದರು. ಹೀಗೆ ಬಂಧಿತರಾದ ಯುವಕರ ಪೈಕಿ ಹೆಚ್ಚಿನವರು ಬಿಜೆಪಿ ಕಾರ್ಯಕರ್ತರೇ ಆಗಿದ್ದು, ಘಟನೆಯಲ್ಲಿ ಕಾಂಗ್ರೆಸ್ ಯುವಕರು ಇದ್ದರೂ ಅವರನ್ನು ಬಂಧಿಸಿಲ್ಲ ಅಂತಾ ಬಿಜೆಪಿ ನಾಯಕರು ಆರೋಪಿಸಿದ್ದರು. ಅಲ್ಲದೇ ಕಾಂಗ್ರೆಸ್ ಮುಖಂಡರು ಪೊಲೀಸರ ಮೇಲೆ ಒತ್ತಡ ಹೇರಿ ತಮ್ಮ ಕಾರ್ಯಕರ್ತರನ್ನು ಬಂಧಿಸದಂತೆ ತಡೆದಿದ್ದಾರೆ ಅಂತಾ ಬಿಜೆಪಿ ಮುಖಂಡರು ಆರೋಪಿಸಿದ್ದರು. ಪೊಲೀಸರು ನ್ಯಾಯಯುತವಾಗಿ ವರ್ತಿಸಲಿ ಅಂತಾನೂ ಆಗ್ರಹಿಸಿದ್ದರು. ಇದೇ ವೇಳೆ ಮಾಜಿ ಶಾಸಕ ಅಮೃತ ದೇಸಾಯಿ ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಅವರಿಗೆ ಮನವಿ ಪತ್ರವನ್ನು ನೀಡಿ, ಸರಿಯಾದ ತನಿಖೆ ಮಾಡುವಂತೆಯೂ ಕೋರಿದ್ದರು.

ಇದೆಲ್ಲ ಒಂದು ಕಡೆಯಾಗಿದ್ದರೆ ಯುವಕನ ಕೃತ್ಯದಿಂದ ಆಕ್ರೋಶಗೊಂಡಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ನಾಯಕರು, ಸದ್ದಾ ಹುಸೇನ್​ಗೆ ಒಂದು ಚಾಲೆಂಜ್ ಕೂಡ ನೀಡಿದ್ದರು. ಆತನನ್ನು ತಮ್ಮದೇ ಖರ್ಚಿನಲ್ಲಿ ಅಯೋಧ್ಯೆಗೆ ಕರೆದೊಯ್ಯೋದಾಗಿಯೂ ಮತ್ತು ತಾಕತ್ತಿದ್ದರೆ ಮಂದಿರದ ಮೇಲೆ ಹಸಿರು ಧ್ವಜ ಹಾರಿಸು ಅಂತಾ ಸವಾಲು ನೀಡಿದ್ದರು. ಅಲ್ಲದೇ ಆತನ ಮನೆಗೆ ಹೋಗಿ ಆತನಿಗೆ ಆಹ್ವಾನ ನೀಡಲು ನಿರ್ಧರಿಸಿದ್ದರು. ಇದೇ ಕಾರಣಕ್ಕೆ ಶ್ರೀರಾಮ ಸೇನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರಿಗೆ ಪೊಲೀಸರು ನೋಟಿಸ್ ನೀಡಿ, ಠಾಣೆಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಸ್ಟೇಶನ್​​ಗೆ ಹೋಗಿ ತಮ್ಮ ಸ್ಪಷ್ಟನೆಯನ್ನೂ ನೀಡಿ ಬಂದಿದ್ದರು.

Also Read: ದೇವನಹಳ್ಳಿ ಏರ್​​ಪೋರ್ಟ್​​​ ಮಂಡಳಿಯಿಂದ ದತ್ತು – ಮುಗಿಲೆತ್ತರಕ್ಕೆ ಚಿಮ್ಮಿದ ಸರ್ಕಾರಿ ಶಾಲೆಯ ಸವಲತ್ತು

ಈ ಮಧ್ಯೆ ಗಲಾಟೆಗೆ ಸಂಬಂಧಿಸಿದಂತೆ ಗರಗ್ ಠಾಣೆ ಪಿಎಸ್ಐ ತಲೆದಂಡವೂ ಆಗಿತ್ತು. ಗಲಾಟೆ ನಡೆದಾದ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಅನ್ನೋ ಕಾರಣಕ್ಕೆ ಗರಗ್ ಪಿಎಸ್ಐ ಡಿ.ಪ್ರಕಾಶ ಅವರನ್ನು ಉತ್ತರ ವಲಯ ಐಜಿ ವಿಕಾಸ್ ಕುಮಾರ್ ಅಮಾನತ್ತು ಮಾಡಿದ್ದರು. ಘಟನೆ ಬಗ್ಗೆ ವರದಿ ನೀಡುವಂತೆ ಧಾರವಾಡ ಎಸ್ಪಿ ಡಾ. ಗೋಪಾಲ ಬ್ಯಾಕೋಡ ಅವರಿಗೆ ಸೂಚಿಸಿದ್ದರು. ಎಸ್ಪಿ ನೀಡಿದ ವರದಿಯ ಹಿನ್ನೆಲೆಯಲ್ಲಿ ಪ್ರಕಾಶ ಅವರನ್ನು ಅಮಾನತ್ತುಗೊಳಿಸಲಾಗಿತ್ತು. ಇದೆಲ್ಲ ಮುಗಿದ ಬಳಿಕ ಇದೀಗ ಗಲಭೆ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದ 15 ಕಾರ್ಯಕರ್ತರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಧಾರವಾಡ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಕಾರ್ಯಕರ್ತರನ್ನು ಮಾಜಿ ಶಾಸಕ ಅಮೃತ ದೇಸಾಯಿ ಸಿಹಿ ಹಂಚಿ ಸ್ವಾಗತಿಸಿಕೊಂಡರು.

 ಗರಗ್ ಗ್ರಾಮದಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಇದ್ದಾರೆ : ಮಾಜಿ ಶಾಸಕ ಅಮೃತ ದೇಸಾಯಿ

ಇದೇ ವೇಳೆ ಟಿವಿ 9 ಡಿಜಿಟಲ್ ಜೊತೆಗೆ ಮಾತನಾಡಿದ ಅಮೃತ ದೇಸಾಯಿ, ಘಟನೆ ನಡೆದ ದಿನ ನಾನು ಊರಲ್ಲಿ ಇರಲಿಲ್ಲ. ಅವತ್ತು ಪೊಲೀಸರು ಬಂಧಿಸಿದ್ದ ಎಲ್ಲರೂ ಅಮಾಯಕರು. ಆ ಗ್ರಾಮದಲ್ಲಿ ಎಲ್ಲರೂ ಸೌಹೌರ್ದಯುತವಾಗಿ ಇದ್ದಾರೆ. ಸದ್ದಾಂ ಹುಸೇನ್ ಹೀಗೇಕೆ ಮಾಡಿದ ಅಂತಾ ಕೇಳಲು ಆತನ ಮನೆಗೆ ಹೋಗಿದ್ದಾರೆ. ಅಲ್ಲದೇ ಅಲ್ಲಿನ ಮುಸ್ಲಿಂ ಸಮುದಾಯದವರು ಕೂಡ ಯುವಕನ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ ಆ ಸಮುದಾಯದವರಿಗೆ ಯುವಕರ ವಿರುದ್ಧ ದೂರು ನೀಡುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಆದರೆ ಅವರು ದೂರು ನೀಡಲು ನಿರಾಕರಿಸಿದ್ದರಿಂದ ಪೊಲೀಸರೇ ಹಿಂದೂ ಯುವಕರ ವಿರುದ್ಧ ದೂರು ದಾಖಲಿಸಿಕೊಂಡು, ಬಂಧಿಸಿದ್ದರು. ಇದೀಗ ಅವರೆಲ್ಲ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಅಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ