ಕೀರ್ತಿವೆತ್ತ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮತ್ತೆ ನಿರ್ಲಕ್ಷ್ಯ, 15 ಸಾವಿರ ಅಂಕಪಟ್ಟಿಗಳಲ್ಲಿ ಯಡವಟ್ಟು

ಮಕ್ಕಳ ಭವಿಷ್ಯ ರೂಪಿಸಬೇಕಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಅವರ ಭವಿಷ್ಯಕ್ಕೆ ಮೂಲ ಆಧಾರವಾಗಿರೋ ಅಂಕಪಟ್ಟಿಯಲ್ಲಿಯೇ ಎಡವಟ್ಟು ಮಾಡಿರೋದು ಚರ್ಚೆಗೆ ಕಾರಣವಾಗಿದೆ.

ಕೀರ್ತಿವೆತ್ತ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮತ್ತೆ ನಿರ್ಲಕ್ಷ್ಯ, 15 ಸಾವಿರ ಅಂಕಪಟ್ಟಿಗಳಲ್ಲಿ ಯಡವಟ್ಟು
ಕೀರ್ತಿವೆತ್ತ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮತ್ತೆ ನಿರ್ಲಕ್ಷ್ಯ
Edited By:

Updated on: Dec 19, 2022 | 3:01 PM

ಪರೀಕ್ಷೆಯಲ್ಲಿ ಸರಿಯಾಗಿ ಬರೆದರೆ ಮಾತ್ರ ಒಳ್ಳೆ ಅಂಕ ಕೊಡ್ತಾರೆ. ಆ ಆಂಕಗಳ ಮೇಲೆಯೇ ವಿದ್ಯಾರ್ಥಿಗಳ (students) ಭವಿಷ್ಯ ನಿಂತಿರುತ್ತೆ. ಆದ್ರೆ ಹಾಗೇ ಕೊಡೋ ಅಂಕಪಟ್ಟಿಯಲ್ಲೇ (marks card) ಎಡವಟ್ಟಾದ್ರೆ ಹೇಗಿರಬೇಕು. ಅಂತಹ ಒಂದು ಎಡವಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (Dharwad Karnataka University) ನಡೆದಿದೆ.

ಇಡೀ ರಾಜ್ಯದಲ್ಲಿಯೇ‌ ಮೊಟ್ಟ ಮೊದಲಿಗೆ ಎನ್‌ಇಪಿ ಶಿಕ್ಷಣ ನೀತಿ ಅಳವಡಿಸಿಕೊಂಡು ಯಶಸ್ವಿಯಾದ ಕೀರ್ತಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಇದೆ. ಆದರೆ ಈ ಯಶಸ್ಸಿನ ಮೇಲೆ ಸುದ್ದಿಯಾಗಬೇಕಿದ್ದ ಈ ವಿಶ್ವವಿದ್ಯಾಲಯ ಎಡವಟ್ಟುಗಳಿಂದಲೇ ಸುದ್ದಿ ಆಗೋದು ಹೆಚ್ಚು. ಈಗ ವಿದ್ಯಾರ್ಥಿಗಳಿಗೆ ಕೊಡಬೇಕಾದ ಅಂಕಪಟ್ಟಿಯಲ್ಲೇ ಮಹಾ ಎಡವಟ್ಟು ನಡೆದು ಹೋಗಿದೆ. ವಾಣಿಜ್ಯ ವಿಭಾಗದ ಅಂತಿಮ ವರ್ಷದ ಪರೀಕ್ಷಾ ಅಂಕಪಟ್ಟಿಯಲ್ಲಿ ಕವಿವಿ ಎಡವಟ್ಟು ಮಾಡಿಕೊಂಡಿದೆ.

ಕಡ್ಡಾಯ ಕನ್ನಡ ವಿಷಯದಲ್ಲಿ ಬಂದ ಅಂಕಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಸೇರ್ಪಡೆ ಮಾಡಲಾಗಿದೆ. ಮೊದಲು ಕನ್ನಡ ಕಲಿ ಎಂಬ ವಿಷಯ ಇತ್ತು. ಈಗ ಕಡ್ಡಾಯ ಕನ್ನಡ ಎಂದು ಮಾಡಲಾಗಿದೆ. ಕಡ್ಡಾಯ ಕನ್ನಡ ಕೋರ್ಸ್ ಸಬ್ಜೆಕ್ಟ್ ಅಲ್ಲದೇ ಇದ್ದರೂ ಆ ಅಂಕಗಳನ್ನು ಒಟ್ಟಾರೆ ಫಲಿತಾಂಶಕ್ಕೆ ಸೇರ್ಪಡೆ ಮಾಡಿ ಕವಿವಿ ಎಡವಟ್ಟು ಮಾಡಿಕೊಂಡಿದೆ. ಈ ರೀತಿ ರೀತಿ ಒಟ್ಟು 15 ಸಾವಿರ ಅಂಕಪಟ್ಟಿ ಸಿದ್ಧಪಡಿಸಿರುವ ಕವಿವಿಗೆ ತಪ್ಪು ಗಮನಕ್ಕೆ ಬಂದ ನಂತರ ಅಂಕಪಟ್ಟಿಯ ಮರು ಮುದ್ರಣಕ್ಕೆ ಮುಂದಾಗಿದೆ. ಇದು ತಾಂತ್ರಿಕ ತೊಂದರೆಯಿಂದ ಆಗಿದ್ದು ಸರಿಪಡಿಸುತ್ತೇವೆ ಅಂತಾ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳುತ್ತಿದ್ದಾರೆ.

ಸದ್ಯ ಈ ಯಡವಟ್ಟಿನಿಂದ ಪಾಸಿಂಗ್ ಸರ್ಟಿಫಿಕೇಟ್‌ನಲ್ಲೂ ವ್ಯತ್ಯಾಸ ಉಂಟಾಗಿದೆ. ಪಾಸಿಂಗ್ ಸರ್ಟಿಫಿಕೇಟ್‌ನಲ್ಲಿ ಶೇ. 5 ರಷ್ಟು ವ್ಯತ್ಯಾಸ ಕಂಡುಬಂದಿದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಒಂದು ಸಲ ಅಂಕ ಪಟ್ಟಿ ತೆಗೆದುಕೊಳ್ಳಬೇಕಾದರೆ ಶುಲ್ಕ ಕೊಡಬೇಕು. ಮತ್ತೊಂದು ಸಲ ಕೇಳಿದ್ರೂ ಅದಕ್ಕೆ ಮತ್ತೆ ಶುಲ್ಕ ಕೊಡಬೇಕಾಗುತ್ತೆ. ಹೀಗಾಗಿ ಈಗ ಹೊಸ ಅಂಕಪಟ್ಟಿಗೆ ಮತ್ತೆ ವಿದ್ಯಾರ್ಥಿಗಳಿಂದಲೇ ಶುಲ್ಕ ಪಡೆದರೂ ಅಚ್ಚರಿ ಇಲ್ಲ. ಹೀಗಾಗಿ ಇದರಲ್ಲಿ ಯಾರು ತಪ್ಪು ಮಾಡಿದ್ದಾರೆಯೋ ಅವರಿಂದಲೇ ದಂಡದ ರೂಪದಲ್ಲಿ ವೆಚ್ಚ ಆಕರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಒಟ್ಟಾರೆಯಾಗಿ ಮಕ್ಕಳ ಭವಿಷ್ಯ ರೂಪಿಸಬೇಕಾದ ವಿಶ್ವವಿದ್ಯಾಲಯ ಅವರ ಭವಿಷ್ಯಕ್ಕೆ ಮೂಲ ಆಧಾರವಾಗಿರೋ ಅಂಕಪಟ್ಟಿಯಲ್ಲಿಯೇ ಎಡವಟ್ಟು ಮಾಡಿರೋದು ಚರ್ಚೆಗೆ ಕಾರಣವಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಆಡುತ್ತಿರೋ ಚೆಲ್ಲಾಟವಲ್ಲದೇ ಮತ್ತೇನು? ಇಂಥ ವಿಷಯಗಳ ಬಗ್ಗೆ ಸರಕಾರ ನಿಗಾ ಇಡಬೇಕಿದೆ.

(ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ