AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಟಲ್ ಮಿಷನ್ ನೀರು ಸರಬರಾಜು ಯೋಜನೆಗೆ ಅನುಮೋದನೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕೇಂದ್ರ ಸರ್ಕಾರದ ಅಟಲ್ ಮಿಷನ್ ಫಾರ್ ರಿಜುವಿನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್ಫಾರ್ಮೇಶನ್ 2.0 ಯೋಜನೆಯಡಿ ರಾಜ್ಯದ ಒಟ್ಟು 22 ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಟಲ್ ಮಿಷನ್ ನೀರು ಸರಬರಾಜು ಯೋಜನೆಗೆ ಅನುಮೋದನೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
TV9 Web
| Edited By: |

Updated on: Dec 18, 2022 | 6:44 PM

Share

ಹುಬ್ಬಳ್ಳಿ: ಅಟಲ್ ಮಿಷನ್ ಫಾರ್ ರಿಜುವಿನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್ಫಾರ್ಮೇಶನ್ 2.0 ಕೇಂದ್ರ ಸರ್ಕಾರದ ಯೋಜನೆಯಡಿ ರಾಜ್ಯದ ಒಟ್ಟು 22 ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad joshi) ಹೇಳಿದ್ದಾರೆ.

ಒಟ್ಟು ರೂ. 161.60 ಕೋಟಿ ವೆಚ್ಚದಲ್ಲಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು ಇವುಗಳಲ್ಲಿ ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿನ ನವಲಗುಂದ, ಕಲಘಟಗಿ, ಶಿಗ್ಗಾಂವ, ಬಂಕಾಪೂರ ಪಟ್ಟಣಗಳಲ್ಲಿ ನೀರು ಸರಬರಾಜು ಕಾಮಗಾರಿಗಳು ಸೇರಿವೆ. ನವಲಗುಂದಕ್ಕೆ 48.31 ಕೋಟಿ, ಶಿಗ್ಗಾಂವ 65.30 ಕೋಟಿ, ಕಲಘಟಗಿ 38.78 ಕೋಟಿ ಹಾಗೂ ಬಂಕಾಪೂರ 44.53 ಕೋಟಿ ವೆಚ್ಚದಲ್ಲಿ ನೀರು ಸರಬರಾಜು ಹಾಗೂ ಪೂರೈಕೆಯ ಮೂಲ ಸೌಲಭ್ಯ ನಿರ್ಮಾಣ ಯೋಜನೆಗಳು ಕಾರ್ಯಗತಗೊಳ್ಳಲಿವೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:  ಹುಬ್ಬಳ್ಳಿ: ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಗು; ಸವಾಲಾಗಿ ಸ್ವೀಕರಿಸಿದ ವೈದ್ಯರು

ಈ ಪಟ್ಟಣಗಳ ಜನರ ಬಹುದಿನಗಳ ನೀರಿನ ಬವಣೆ ತಪ್ಪಲಿದೆ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ಇಲಾಖೆ ನಿರ್ದೇಶನಾಲಯಕ್ಕೆ ಈ ಅನುಮೋದಿತ ಯೋಜನೆಗಳ ಅನುಷ್ಠಾನಕ್ಕೆ ಸೂಚಿಸಲಾಗಿದೆ. “ಅಮೃತ’ ಯೋಜನೆಯ ಮಾರ್ಗದರ್ಶಕ ಸೂತ್ರಗಳನ್ವಯ ತ್ವರಿತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕೂಡಲೇ ಈ ಪ್ರಾಧಿಕಾರಗಳು ಕಾರ್ಯೋನ್ಮುಖವಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಯೋಜನೆಯನ್ನು ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಹರದೀಪಸಿಂಗ್ ಪುರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಲ್ಹಾದ್ ಜೋಶಿ ಧನ್ಯವಾದ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು