ಧಾರವಾಡದಲ್ಲಿ ಬೌದ್ಧ ಸನ್ಯಾಸಿಯ ನಿಗೂಢ ಸಾವು: ಮೃತದೇಹ ಪತ್ತೆ

ಧಾರವಾಡ ಬೈಪಾಸ್ ಬಳಿ ಟಿಬೆಟಿಯನ್ ಮೂಲದ ಬೌದ್ಧ ಸನ್ಯಾಸಿಯ ಮೃತದೇಹ ಪತ್ತೆ ಆಗಿದೆ. ಮುಖದ ಮೇಲೆ ಗಾಯಗಳಿದ್ದು, ಬೇರೆಡೆ ಕೊಲೆಗೈದು ಶವ ತಂದು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಧಾರವಾಡ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಧಾರವಾಡದಲ್ಲಿ ಬೌದ್ಧ ಸನ್ಯಾಸಿಯ ನಿಗೂಢ ಸಾವು: ಮೃತದೇಹ ಪತ್ತೆ
ಸನ್ಯಾಸಿ ಥಾಶಿದೊಂಡು
Image Credit source: tv9 kannada
Edited By:

Updated on: Apr 30, 2026 | 3:09 PM

ಧಾರವಾಡ, ಏಪ್ರಿಲ್​ 30: ಧಾರವಾಡ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ (Buddhist monk) ಮೃತದೇಹ (dead body) ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಟಿಬೆಟಿಯನ್ ಮೂಲದ ಥಾಶಿದೊಂಡು(39) ಮೃತ ಬೌದ್ಧ ಸನ್ಯಾಸಿ. ಮುಖದ ಮೇಲೆ ಗಾಯಗಳಾಗಿದ್ದು, ಬೇರೆಡೆ ಕೊಲೆಗೈದು ಶವ ತಂದು ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಸೆಮಣೆ ಏರಬೇಕಿದ್ದ ಯುವಕ ಭೀಕರ ಅಪಘಾತದಲ್ಲಿ ಸಾವು 

ಹಸೆಮಣೆ ಏರಬೇಕಿದ್ದ ಯುವಕ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವಂತಹ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಬಳಿ ನಡೆದಿದೆ. ಮರಕ್ಕೆ ಕಾರು ಡಿಕ್ಕಿಯಾಗಿ ಎಲ್‌.ಎನ್.ಮನು(29) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೀದರ್‌: ಭಾಲ್ಕಿಯಲ್ಲಿ ಭೀಕರ ಅಪಘಾತ, ಬೈಕ್-ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರ ದುರ್ಮರಣ

ಎಲ್‌.ಎನ್.ಮನು ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ದರ್ಬಾರ್​​ಪೇಟೆ ನಿವಾಸಿ. ಮೇ 10ರಂದು ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಪ್ರೀವೆಡ್ಡಿಂಗ್ ಶೂಟ್​ಗೆ ವಧು ಕರೆತರಲು ತೆರಳಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ​ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಎಲ್‌.ಎನ್.ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ರಜೆಗೆ ಆಗಮಿಸಿದ್ದ ಯೋಧ ಹೃದಯಾಘಾತದಿಂದ ಸಾವು

ರಜೆಗೆ ಸ್ವಗ್ರಾಮಕ್ಕೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಯೋಧ ಮಾರುತಿ ಯಮನಪ್ಪ ದಳವಾಯಿ(38) ಮೃತ ದುರ್ದೈವಿ. ಇವರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮಿಲಿಟರಿ/ಝಾನ್ಸಿ/UP/ ಹವಾಲ್ದಾರ್ ಮೆಕ್ಯಾನಿಕಲ್ ಪುನಾ ರೆಜಿಮೆಂಟ್​​ದಲ್ಲಿ ಸೇವೆ ಸಲ್ಲಿಸುತ್ತಿದ್ದರು.‌

ಇದನ್ನೂ ಓದಿ: ಜೆಪಿ ನಗರದಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ; 12 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು

ಸುಮಾರು 10 ದಿನದ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು.‌ ಶನಿವಾರ ರಾತ್ರಿ 11.45 ಗಂಟೆಗೆ ಮನೆಯಲ್ಲಿ ಮಲಗಿಕೊಂಡಾಗ ಹೃದಯಘಾತವಾಗಿ ಆಕಸ್ಮಿಕವಾಗಿ ಮರಣ ಹೊಂದಿರುವುದಾಗಿ ತಿಳಿದುಬಂದಿದೆ. ರವಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಶಾಸಕರ ತಾಯಿ ರತ್ನಾಬಾಯಿ‌ ಚಿಮ್ಮನಕಟ್ಟಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.‌

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us