ಜೂಜು ಅಡ್ಡ ಮೇಲೆ ದಾಳಿ ವೇಳೆ ಪೊಲೀಸರ ಮೇಲೆಯೇ ಹಲ್ಲೆ, ಬಿಜೆಪಿ ಮುಖಂಡ ಸೇರಿ 8 ಜನರ ಬಂಧನ

ಧಾರವಾಡದ ನರೇಂದ್ರ ಶಾಲೆಯ ಬಳಿ ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜೂಜುಕೋರರು ಪೊಲೀಸರ ಮೇಲೆ ದಾಳಿ ನಡೆಸಿದ್ದು ಇಬ್ಬರಿಗೆ ಗಾಯಗಳಾಗಿವೆ. ಜೂಜಾಡುವ ಸಂಬಂಧ ಇದುವರೆಗೆ ಎಂಟು ಜನರನ್ನು ಬಂಧಿಸಲಾಗಿದೆ ಮತ್ತು ಪೊಲೀಸರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಇತರ 10 ಜನರನ್ನು ಹುಡುಕಲಾಗುತ್ತಿದೆ.

ಜೂಜು ಅಡ್ಡ ಮೇಲೆ ದಾಳಿ ವೇಳೆ ಪೊಲೀಸರ ಮೇಲೆಯೇ ಹಲ್ಲೆ, ಬಿಜೆಪಿ ಮುಖಂಡ ಸೇರಿ 8 ಜನರ ಬಂಧನ
ಪ್ರಾತಿನಿಧಿಕ ಚಿತ್ರ
ಆಯೇಷಾ ಬಾನು

Updated on: Nov 15, 2023 | 7:51 AM

ಧಾರವಾಡ, ನ.15: ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಜೂಜು ಅಡ್ಡೆ (Gambling) ಮೇಲೆ ನವೆಂಬರ್ 13 ರಂದು ಮಧ್ಯರಾತ್ರಿ ದಾಳಿ ನಡೆಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಅವರ ಪ್ರಕಾರ, ನರೇಂದ್ರ ಶಾಲೆಯ ಬಳಿ ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜೂಜುಕೋರರು ಪೊಲೀಸರ ಮೇಲೆ ದಾಳಿ ನಡೆಸಿದ್ದು ಇಬ್ಬರಿಗೆ ಗಾಯಗಳಾಗಿವೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಸನಗೌಡ ಅವರಿಗೆ ಕುತ್ತಿಗೆ ಮತ್ತು ಕೈಗೆ ಗಾಯಗಳಾಗಿದ್ದರೆ, ಕಾನ್‌ಸ್ಟೆಬಲ್ ನಾಗರಾಜ್ ಅವರ ತಲೆಗೆ ಗಾಯವಾಗಿದೆ. ಇಬ್ಬರನ್ನೂ ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಎಂಟು ಜನರನ್ನು ಬಂಧಿಸಲಾಗಿದೆ ಮತ್ತು ಪೊಲೀಸರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಇತರ 10 ಜನರನ್ನು ಹುಡುಕುತ್ತಿದ್ದೇವೆ ಎಂದು ಬೈಕೋಡ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾ ಅಕ್ರಮ; ಭೋವಿ ನಿಗಮದ ಮಾಜಿ ಎಂಡಿ, ಸಿಬ್ಬಂದಿ ಸೇರಿಕೊಂಡು 97 ಕೋಟಿ ರೂಪಾಯಿ ದುರ್ಬಳಕೆ

ಕಳೆದ ಮೂರು ದಿನಗಳಲ್ಲಿ ಜೂಜಾಟದ 27 ಪ್ರಕರಣಗಳು ದಾಖಲಾಗಿದ್ದು, 236 ಮಂದಿಯನ್ನು ಬಂಧಿಸಿ ₹3.38 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಬಿಜೆಪಿ ಮುಖಂಡ ಚನ್ನವೀರಗೌಡ ಪಾಟೀಲ್, ನಾಗಪ್ಪ ಸೋಗಿ, ವಿನಾಯಕ ಪಾಟೀಲ್, ಗಣೇಶ್ ಶೆಲವಾಡೆ, ಮಲ್ಲಪ್ಪ ಖಾನನ್ನವರ್, ಮಡಿವಾಳಪ್ಪ, ಐಗಾರ, ಚೆನ್ನಪ್ಪಗೌಡ ಪಾಟೀಲ್ ಮತ್ತು ಶ್ರೀಶೈಲ್ ಪಾಟೀಲ್ ಎಂಬುವವರು ಸೇರಿದ್ದಾರೆ. ಇನ್ನು ಜೂಜು ಕೃತ್ಯದಲ್ಲಿ ಬಿಜೆಪಿ ಮುಖಂಡ ಭಾಗಿಯಾಗಿರುವುದರ ಬಗ್ಗೆ ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ, ಪೊಲೀಸರ ವಿರುದ್ಧ ಯಾರನ್ನಾದರೂ ಪ್ರಚೋದಿಸುವ ಅಥವಾ ಅಂತಹ ಕೃತ್ಯಗಳನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು. ಯಾವುದೇ ಅಪರಾಧ ಕೃತ್ಯ ಎಸಗುವುದನ್ನು ಪಕ್ಷ ವಿರೋಧಿಸುತ್ತದೆ ಮತ್ತು ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸುವುದಾಗಿ ಹೇಳಿದರು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us