ಧಾರವಾಡ: ಆಧುನಿಕ ಜಗತ್ತಿನಲ್ಲಿ ಮೊಬೈಲ್ ಸಾಧನ ಕ್ರಾಂತಿಕಾರಕ ಬದಲಾಣೆಗೆ ನಾಂದಿ ಹಾಡಿದೆ. ಯುವಕರು ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ನಾಗರಿಕರಾಗಬೇಕೆಂದು ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅಭಿಪ್ರಾಯಪಟ್ಟರು. ಅವರು ಧಾರವಾಡ ಮೊಬೈಲ್ ವಿತರಕರ ಸಂಘದವರು ಇಂದಿನಿಂದ 10 ದಿನಗಳ ಕಾಲ ಆಯೋಜಿಸಲಾದ ಧಾರವಾಡ ಮೊಬೈಲ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ದೀಪಾವಳಿ ಹಬ್ಬ ಹಿನ್ನೆಲೆ ಧಾರವಾಡದ ಟಿಕಾರೆ ರಸ್ತೆಯಲ್ಲಿ ಮೊಬೈಲ್ ಉತ್ಸವ ಆಯೋಜಿಸಲಾಗಿದೆ. ಸ್ಥಳೀಯ ಮೊಬೈಲ್ ಮಾರಾಟಗಾರರ ಸಂಘದಿಂದ ಅ. 17 ರಿಂದ ಅ. 26 ವರೆಗೆ ಉತ್ಸವ ಆಯೋಜಿಸಲಾಗಿದೆ. ಉತ್ಸವಕ್ಕೆ ವಿವಿಧ ಮೊಬೈಲ್ ಕಂಪನಿಗಳು ಸಾಥ್ ನೀಡಿವೆ. ಉತ್ಸವಕ್ಕೆ ಹು-ಧಾ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಚಾಲನೆ ನೀಡಿದ್ದಾರೆ. ಇನ್ನು ಸಂಘದ ಅಧ್ಯಕ್ಷ ಸುದೀಪ್ ಸಾಂಗ್ಲಿಕರ್ ಮಾತನಾಡಿ, ಗ್ರಾಹಕರೊಂದಿಗೆ ನೇರ ಸಂವಾದವನ್ನು ಹೊಂದುವುದು, ಉತ್ಪನ್ನಗಳ ಅನುಭವವನ್ನು ಮತ್ತು ಮಾರಾಟದ ನಂತರದ ಸೇವೆಗಳನ್ನು ಒಳಗೊಂಡಿರುವ ಮೊಬೈಲ್ಗಳ ಆನ್ಲೈನ್ ಮತ್ತು ಆಫ್ಲೈನ್ ಖರೀದಿಯ ನಡುವಿನ ವ್ಯತ್ಯಾಸವನ್ನು ಸಹ ನಾವು ತಿಳಿಸಲು ಹಾಗೂ ದೇಶಿಯ ಮೊಬೈಲನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶದಿಂದ ಈ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ದಾವಣಗೆರೆ ಬೆಣ್ಣೆ ದೋಸೆ ಸವಿದ ನಟಿ ರಮ್ಯಾ; ಲೋಕಲ್ ಹೋಟೆಲ್ನಲ್ಲಿ ಸ್ಯಾಂಡಲ್ವುಡ್ ಕ್ವೀನ್
ವಿವಿಧ ಬ್ರಾಂಡ್ ಕಂಪನಿಗಳ ಸಹಯೋಗದೊಂದಿಗೆ ಈ ಉತ್ಸವವನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಶಂಭು ಸಾಲಿಮನಿ, ಮೋಹನ್ ಹೂಗಾರ, ಪ್ರವೀಣ ಕಠಾರೆ, ಸುರೇಶ ಬಾಂಢಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇನ್ನು ಉತ್ಸವದ ಅಂಗವಾಗಿ ಟಿಕಾರೆ ರಸ್ತೆಯನ್ನು ಶೃಂಗಾರಗೊಳಿಸಲಾಗಿದೆ. ಬಗೆ ಬಗೆಯ ವಸ್ತುಗಳೊಂದಿಗೆ ಇಡೀ ರಸ್ತೆ ಅಂದ ಕಾಣುವ ಹಾಗೆ ಮಾಡಲಾಗಿದ್ದು, ಇದು ಜನರನ್ನು ಆಕರ್ಷಿಸುತ್ತಿದೆ. ಇದೇ ವೇಳೆ ಹಳೆಯ ಮೊಬೈಲ್ ಗಳನ್ನು ಎಕ್ಸೇಂಜ್ ಮಾಡಿ, ಹೊಸ ಮೊಬೈಲ್ ಖರೀದಿಸಲು ಕೂಡ ಅವಕಾಶವಿದೆ. ಈ ಅವಕಾಶವನ್ನು ಗ್ರಾಹಕರು ಉಪಯೋಗಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ