Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ಮತ್ತೆ ಬೀದಿಗೆ ಬಂತು ಪ್ರಸಿದ್ಧ ವೈದ್ಯ ದಂಪತಿ ಜಗಳ.. ಹೈಪ್ರೊಫೈಲ್​ ಕೇಸ್​ನಿಂದ ಖಾಕಿ ಫುಲ್ ಟೆನ್ಶನ್

ಅವರಿಬ್ಬರೂ ಪ್ರಸಿದ್ಧ ವೈದ್ಯ ದಂಪತಿ. ಚಿಕಿತ್ಸೆ ನೀಡೋಕೆ ಅಂತಾನೇ ಪ್ರತಿಷ್ಠಿತ ಆಸ್ಪತ್ರೆಯನ್ನೂ ತೆರದಿದ್ದಾರೆ. ಆದ್ರೆ ಸದ್ಯ ಪತ್ನಿ ವಿರುದ್ಧವೇ ಪತಿ ಮಾಹಾಶಯ ₹17 ಲಕ್ಷ ವಂಚನೆಯ ದೂರು ದಾಖಲಿಸಿದ್ರೆ, ಮತ್ತೊಂದ್ಕಡೆ ಪ್ರಾಣ ಬೇದರಿಕೆ ಇದೆ ಅಂತಾ ಪತ್ನಿ ಕೂಡ ದೂರು ದಾಖಲಿಸಿದ್ದಾರೆ.

ಹುಬ್ಬಳ್ಳಿ: ಮತ್ತೆ ಬೀದಿಗೆ ಬಂತು ಪ್ರಸಿದ್ಧ ವೈದ್ಯ ದಂಪತಿ ಜಗಳ.. ಹೈಪ್ರೊಫೈಲ್​ ಕೇಸ್​ನಿಂದ ಖಾಕಿ ಫುಲ್ ಟೆನ್ಶನ್
ಡಾ.ಕ್ರಾಂತಿಕಿರಣ್ (ಬಲ) ಡಾ.ಶೋಭಾ (ಎಡ)
Follow us
ಆಯೇಷಾ ಬಾನು
| Updated By: shruti hegde

Updated on:Feb 25, 2021 | 12:00 PM

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಡಾ. ಕ್ರಾಂತಿಕಿರಣ್ ಅನ್ನೋ ಹೆಸರು ಸಿಕ್ಕಾಪಟ್ಟೆ ಫೇಮಸ್. ನರರೋಗಕ್ಕೆ ಇವರ ಚಿಕಿತ್ಸೆ ಅದ್ಭುತ ಅಂತಾರೆ ಜನ. ಹೀಗೆ ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಕ್ರಾಂತಿಕಿರಣ್, ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಆದರೆ ವೈಯಕ್ತಿಕ ಬದುಕು ಮಾತ್ರ ನುಚ್ಚುನೂರಾಗಿದೆ.

ಮತ್ತೆ ಬೀದಿಗೆ ಬಂತು ಪ್ರಸಿದ್ಧ ವೈದ್ಯ ದಂಪತಿ ಜಗಳ ಕ್ರಾಂತಿಕಿರಣ್ ಪತ್ನಿ ಹಾಗೂ ಅಸ್ಪತ್ರೆಯ ನಿರ್ದೇಶಕಿಯಾಗಿರೋ ಡಾ.ಶೋಭಾ ಪತಿ ವಿರುದ್ಧವೇ ದೂರು ದಾಖಲಿಸಿದ್ದಾರೆ. ಪತಿಯಿಂದ ಜೀವ ಬೆದರಿಕೆ ಇದ್ದು, ಹಲ್ಲೆ ಮಾಡಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗೇ ಚೀಟಿಂಗ್ ಕೇಸ್ ಕೂಡ ದಾಖಲಿಸಿದ್ದಾರೆ. ಮತ್ತೊಂದ್ಕಡೆ ಪತಿ ಕ್ರಾಂತಿಕಿರಣ್ ಆಸ್ಪತ್ರೆ ಬೋಡ್೯ ಮೀಟಿಂಗ್ ನಡೆಸದೇ ಬ್ಯಾಂಕ್ ಅಕೌಂಟ್ ಚೇಂಜ್ ಮಾಡಿಸಲು ಹುನ್ನಾರ ನಡೆಸಿದ್ದಾರೆಂದು ಡಾ.ಶೋಭಾ ತಮ್ಮ ಈ ದೂರಿನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಡಾ. ಕ್ರಾಂತಿಕಿರಣ್ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಡಾ. ಶೋಭಾ 17 ಲಕ್ಷ ರೂಪಾಯಿ ಬೇರೆಯವರಿಗೆ ವರ್ಗಾಯಿಸಿದ್ದಾರೆಂದು ದೂರು ನೀಡಿದ್ದಾರೆ. ಹೀಗೆ ದಂಪತಿ ಪರಸ್ಪರ ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ಕಂಪ್ಲೆಂಟ್ ಕೊಟ್ಟಿದ್ದಾರೆ.

ಕಳೆದ ವರ್ಷವೇ ಕ್ರಾಂತಿ ಕಿರಣ್ ಸಂಸಾಸರದಲ್ಲಿ ಬಹುದೊಡ್ಡ ಕ್ರಾಂತಿ ಎದ್ದಿತ್ತು ಕಳೆದ ವರ್ಷವೇ ಕ್ರಾಂತಿ ಕಿರಣ್ ಸಂಸಾಸರದಲ್ಲಿ ಬಹುದೊಡ್ಡ ಕ್ರಾಂತಿ ಎದ್ದಿತ್ತು. ಅಲ್ಲದೇ ಅಂದೇ ತನ್ನ ಪತ್ನಿಯ ವಿರುದ್ಧ, ಪ್ರಾಣ ಬೆದರಿಕೆ ದೂರು ದಾಖಲಿಸಿದ್ದರು‌. ತನ್ನ ಪತ್ನಿಗೆ ಓರ್ವ ಪರಪುರುಷನ ಜೊತೆ ಅನೈತಿಕ ಸಂಬಂಧವಿದೆ. ಅದನ್ನ ಪ್ರಶ್ನಿಸಿದ್ದಕ್ಕೆ ಪತ್ನಿ ಹಾಗೂ ಪ್ರಿಯಕರ ಪ್ರಾಣ ಬೆದರಿಕೆಯನ್ನ ಹಾಕುತ್ತಿದ್ದಾರೆಂದು ಇದೇ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಸಿದ್ದರು. ಅಂದಿನಿಂದ ಇಂದಿನವರೆಗೂ ಇಬ್ಬರ ಮಧ್ಯೆ ಮುನಿಸು ಮಂದುವರೆಯುತ್ತಿದೆ. ತಾನು ಕಟ್ಟಿಸಿದ ಆಸ್ಪತ್ರೆಯಿಂದಲೇ ಆಕೆ ಲಕ್ಷಾಂತರ ರೂಪಾಯಿ ಹಣ ಎಗರಿಸಿದ್ದಲ್ಲದೇ, ನಿತ್ಯವೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪ ಮಾಡಿದ್ದರು. ಅಲ್ಲದೆ ತಮ್ಮ ಪತ್ನಿ ಬೇರೆ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ತನಗೆ ಪ್ರಾಣ ಬೆದರಿಕೆ ಇದೆ ಎಂದಿದ್ದರು. ಅಲ್ಲದೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಕೊನೆಗಳಿಗೆಯಲ್ಲಿ ಟಿಕೆಟ್ ಮಿಸ್ಸಾಗಿತ್ತು. ಆದರೂ ಕ್ರಾಂತಿಕಿರಣ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ, ಬಿಜೆಪಿಯಲ್ಲಿ ಉನ್ನತ ಸ್ಥಾನ ಹೊಂದಿರುವ ವೈದ್ಯರು ಆಸ್ಪತ್ರೆಯನ್ನ ಕೂಡಾ ನಡೆಸುತ್ತಿದ್ದಾರೆ. ಆದರೆ ಮನೆಯ ಸಮಸ್ಯೆಯೇ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಬಗ್ಗೆ ಮಾಧ್ಯಮ ವೈದ್ಯರನ್ನ ಸಂರ್ಪಕಿಸಿದ್ರೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋಲ್ಲ ಎನ್ನುತ್ತಿದ್ದಾರೆ.

ಒಟ್ನಲ್ಲಿ ವಿದ್ಯಾನಗರ ಪೊಲೀಸ್ರು ದೂರು ಪ್ರತಿದೂರು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಹೈಪ್ರೊಫೈಲ್ ಕೇಸ್​ನಿಂದ ಖಾಕಿ ಪಡೆಗೂ ಫುಲ್ ಟೆನ್ಶನ್ ಆಗಿದೆ. ಈ ಕಿತ್ತಾಟ ಮುಂದೆ ಯಾವ ಹಂತ ತಲುಪಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

doctor couple filed case against each

ವೈದ್ಯ ದಂಪತಿ ಡಾ.ಕ್ರಾಂತಿಕಿರಣ್ ಮತ್ತು ಡಾ.ಶೋಭಾ (ಎಡ)

ಇದನ್ನೂ ಓದಿ: ಚಾಕುವಿನಿಂದ ಚುಚ್ಚಿ ಚುಚ್ಚಿ.. ಪತ್ನಿಯನ್ನು ಕೊಂದ ಪತಿರಾಯ ನೇಣಿಗೆ ಶರಣು

Published On - 7:15 am, Thu, 25 February 21

ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ