ಚಾಕುವಿನಿಂದ ಚುಚ್ಚಿ ಚುಚ್ಚಿ.. ಪತ್ನಿಯನ್ನು ಕೊಂದ ಪತಿರಾಯ ನೇಣಿಗೆ ಶರಣು

ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದು ಪತಿರಾಯ ಬಳಿಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಶಾಂತಿಗ್ರಾಮದ ಮನೆಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಅನ್ನಪೂರ್ಣ(23) ಎಂಬ ಮಹಿಳೆಯನ್ನ ಆಕೆಯ ಪತಿ ತುಳಸಿದಾಸ್(40) ಬರ್ಬರವಾಗಿ ಕೊಲೆಮಾಡಿದ್ದಾನೆ.

  • TV9 Web Team
  • Published On - 19:52 PM, 18 Feb 2021
ಚಾಕುವಿನಿಂದ ಚುಚ್ಚಿ ಚುಚ್ಚಿ.. ಪತ್ನಿಯನ್ನು ಕೊಂದ ಪತಿರಾಯ ನೇಣಿಗೆ ಶರಣು
ಪತ್ನಿಯನ್ನು ಕೊಂದ ಪತಿರಾಯ ನೇಣಿಗೆ ಶರಣು

ಹಾಸನ: ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದು ಪತಿರಾಯ ಬಳಿಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಶಾಂತಿಗ್ರಾಮದ ಮನೆಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಅನ್ನಪೂರ್ಣ(23) ಎಂಬ ಮಹಿಳೆಯನ್ನ ಆಕೆಯ ಪತಿ ತುಳಸಿದಾಸ್(40) ಬರ್ಬರವಾಗಿ ಕೊಲೆಮಾಡಿದ್ದಾನೆ. ಇನ್ನು, ಘಟನೆ ನಡೆದ ಬಳಿಕ ತುಳಸಿದಾಸ್​ ನೇಣಿಗೆ ಶರಣಾಗಿದ್ದಾನೆ. 3 ತಿಂಗಳ ಹಿಂದೆ ಅನ್ನಪೂರ್ಣ, ತುಳಸಿದಾಸ್​ ವಿವಾಹವಾಗಿದ್ರು. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಕ್​ಗೆ ಲಾರಿ ಡಿಕ್ಕಿ:​ ಸವಾರ ದುರ್ಮರಣ
ಬೈಕ್​ಗೆ ಲಾರಿ ಡಿಕ್ಕಿಯಾಗಿ ಬೈಕ್​ ಸವಾರ ದುರ್ಮರಣ ಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬರಗೇನಹಳ್ಳಿ ಬಳಿ ನಡೆದಿದೆ. ರಾಮನಗರ ಮೂಲದ ಮುನಿಸ್ವಾಮಿ (52) ಘಟನೆಯಲ್ಲಿ ಸಾವನ್ನಪ್ಪಿದ್ದಾನೆ.

ಅಪಘಾತದ ನಂತರ ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಿದ್ದಾನೆ. ದಾಬಸ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮದುವೆ ದಿಬ್ಬಣದ ಖಾಸಗಿ ಬಸ್‌ ಅಪಘಾತ, ಇಬ್ಬರ ಸಾವು
ಮದುವೆ ದಿಬ್ಬಣದ ಖಾಸಗಿ ಬಸ್‌ ಅಪಘಾತಕ್ಕೆ ಈಡಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮೇಕೆರಹಳ್ಳಿ ಬಳಿ ನಡೆದಿದೆ. ಇನ್ನು, ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ.

ಗಾಯಾಳುಗಳಿಗೆ ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಶಂಬೋನಹಳ್ಳಿಯಿಂದ ಬುಕ್ಕಾಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಇದನ್ನೂ ಓದಿ: Rains ಕುಂದಾನಗರಿಯಲ್ಲಿ ಅಕಾಲಿಕ ಮಳೆ: ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ