36 ಜನರ ರೇಸ್​ನಲ್ಲಿ ಡಾ. ಪಿ.ಎಲ್. ಪಾಟೀಲ ಧಾರವಾಡ ಕೃಷಿ ವಿವಿ ಕುಲಪತಿಯಾಗಿ ನೇಮಕ

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕಳೆದ ನಾಲ್ಕು ತಿಂಗಳಿಂದ ತೆರವಾಗಿದ್ದ ಕುಲಪತಿ ಸ್ಥಾನಕ್ಕೆ ಡಾ. ಪಿ.ಎಲ್. ಪಾಟೀಲರನ್ನು ನೂತನ ಕುಲಪತಿಯಾಗಿ ನೇಮಿಸಲಾಗಿದೆ.

36 ಜನರ ರೇಸ್​ನಲ್ಲಿ ಡಾ. ಪಿ.ಎಲ್. ಪಾಟೀಲ ಧಾರವಾಡ ಕೃಷಿ ವಿವಿ ಕುಲಪತಿಯಾಗಿ ನೇಮಕ
ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ. ಪಿ.ಎಲ್. ಪಾಟೀಲ
Updated By: ವಿವೇಕ ಬಿರಾದಾರ

Updated on: Oct 28, 2022 | 10:18 PM

ಧಾರವಾಡ: ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯ, ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ (Agriculture University Dharwad) ನೂತನ ಕುಲಪತಿ ನೇಮಕವಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ತೆರವಾಗಿದ್ದ ಕುಲಪತಿ ಸ್ಥಾನಕ್ಕೆ ಡಾ. ಪಿ.ಎಲ್. ಪಾಟೀಲರನ್ನು ನೂತನ ಕುಲಪತಿಯಾಗಿ ನೇಮಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಆದೇಶ ಹೊರಡಿಸಿದ್ದಾರೆ. ಕುಲಪತಿ ಹುದ್ದೆಗೆ ಒಟ್ಟು 36 ಜನರಿಂದ ಸಲ್ಲಿಕೆಯಾಗಿದ್ದು, 36 ಜನರಲ್ಲಿ ಕೃಷಿ ವಿವಿ ಸಂಶೋಧನಾ ನಿರ್ದೇಶಕರಾಗಿದ್ದ ಡಾ. ಪಿ.ಎಲ್.‌ಪಾಟೀಲರನ್ನು ನೇಮಕ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ