ಧಾರವಾಡ ಸರ್ಕಾರಿ ಶಾಲಾ ಕಾಲೇಜುಗಳಿಗೆ ಪ್ರಲ್ಹಾದ್ ಜೋಶಿ ಬಂಪರ್ ಗಿಫ್ಟ್: 100 ಕೋಟಿ ವೆಚ್ಚದ ಪಂಚ ಕಾರ್ಯಕ್ರಮಗಳ ಘೋಷಣೆ

Pralhad Joshi: ಶಾಲೆಗೊಂದು ಸ್ಮಾರ್ಟ್ ಕ್ಲಾಸ್ ರೂಮ್, 50 ಸಾವಿರ ಡೆಸ್ಕ್, 100 ಹೈಟೆಕ್ ಅಂಗನವಾಡಿಗಳ ನಿರ್ಮಾಣದ ಗುರಿಯನ್ನ 2 ವರ್ಷದಲ್ಲಿ ಪೂರ್ಣಗೊಳಿಸಲು ನಿಶ್ಚಯಿಸಲಾಗಿದೆ. ಸಿ.ಎಸ್.ಆರ್ ಫಂಡ್ ಮೂಲಕ ತಮ್ಮ ಕ್ಷಮತಾ ಸೇವಾ ಸಂಸ್ಥೆ ಮೂಲಕ ಪಂಚ ಯೋಜನೆ ಜಾರಿಗೊಳಿಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಧಾರವಾಡ ಸರ್ಕಾರಿ ಶಾಲಾ ಕಾಲೇಜುಗಳಿಗೆ ಪ್ರಲ್ಹಾದ್ ಜೋಶಿ ಬಂಪರ್ ಗಿಫ್ಟ್: 100 ಕೋಟಿ ವೆಚ್ಚದ ಪಂಚ ಕಾರ್ಯಕ್ರಮಗಳ ಘೋಷಣೆ
ಸರ್ಕಾರಿ ಶಾಲಾ ಕಾಲೇಜುಗಳಿಗೆ ಪ್ರಲ್ಹಾದ್ ಜೋಶಿ ಬಂಪರ್ ಗಿಫ್ಟ್: 100 ಕೋಟಿ ವೆಚ್ಚದ ಪಂಚ ಕಾರ್ಯಕ್ರಮಗಳ ಘೋಷಣೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 28, 2022 | 4:21 PM

ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ದೀಪಾವಳಿ ಬಂಪರ್ ಗಿಫ್ಟ್ ನೀಡಿದ್ದಾರೆ. 1,177 ಶಾಲಾ ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ಚುವ ಬಣ್ಣದರ್ಪಣೆ ಕಾರ್ಯಕ್ರಮದ ಜೊತೆಗೆ, 320 ಹೊಸ ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಘೋಷಿಸಿದ್ದಾರೆ. ಧಾರವಾಡದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡುತ್ತಿದ್ದರು.

ಶಾಲೆಗೊಂದು ಸ್ಮಾರ್ಟ್ ಕ್ಲಾಸ್ ರೂಮ್, 50 ಸಾವಿರ ಡೆಸ್ಕ್, 100 ಹೈಟೆಕ್ ಅಂಗನವಾಡಿಗಳ ನಿರ್ಮಾಣದ ಗುರಿಯನ್ನ ಮುಂಬರುವ ಎರಡು ವರ್ಷದಲ್ಲಿ ಪೂರ್ಣಗೊಳಿಸಲು ನಿಶ್ಚಯಿಸಲಾಗಿದೆ. ಸಿ.ಎಸ್.ಆರ್ ಫಂಡ್ ಮೂಲಕ ತಮ್ಮ ಕ್ಷಮತಾ ಸೇವಾ ಸಂಸ್ಥೆ ಮೂಲಕ ಪಂಚ ಯೋಜನೆಗಳನ್ನ ಜಾರಿಗೊಳಿಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಧಾರವಾಡದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆಯಿಂದ ಆರಂಭವಾಗುವ ಬಣ್ಣದರ್ಪಣೆ ಕಾರ್ಯಕ್ರಮ ಮುಂದಿನ ವರ್ಷದ ದೀಪಾವಳಿ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರತಿ ತಿಂಗಳು 100 ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯ ನಡೆಯಲಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1177 ಶಾಲಾ ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ಚಲು ನಿರ್ಧರಿಸಲಾಗಿದೆ.

ಪ್ರಲ್ಹಾದ್ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆಯಿಂದ ಉಚಿತವಾಗಿ ಬಣ್ಣವನ್ನ ನೀಡಲಾಗುವುದು. ಕ್ಲಾಸ್ ರೂಮ್ ಗಳಿಗೆ ಬಣ್ಣ ಹಚ್ಚಲು 20 ಲೀಟರ್ ಪೇಂಟ್ ಅನ್ನ ಉಚಿತವಾಗಿ ನೀಡಲಾಗುವುದು ಎಂದು ಜೋಶಿ ಹೇಳಿದರು. ಶಾಲೆಯ ಹೊರ ಗೋಡೆಗಳಿಗೂ ಪ್ರತ್ಯೇಕವಾಗಿ ಬಣ್ಣ ವಿತರಿಸಲಾಗುವುದು. ಶಾಲೆಗಳಿಗೆ ಬಣ್ಣ ಹಚ್ಚಲು ಶ್ರಮದಾನದ ಕಾರ್ಯಕ್ಕೆ ವಿದ್ಯಾರ್ಥಿ ಸಂಘಟನೆಗಳು, ಸೇವಾ ಸಂಘಸಂಸ್ಥೆಗಳು, ಶಿಕ್ಷಕರು ಮುಂದೆ ಬರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದರು. 20 ರೂಪಾಯಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿ ಶಾಲೆಗೆ ಬಣ್ಣ ಹಚ್ಚುವ ಒಪ್ಪಂದದೊಂದಿಗೆ ಸಂಘ ಸಂಸ್ಥೆಗಳು ಉಚಿತವಾಗಿ ಬಣ್ಣ ಪಡೆಯಬಹುದಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಕ್ಲಾಸ್ ರೂಮ್

ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಿಗೆ 480 ಹೊಸ ಕ್ಲಾಸ್ ರೂಮ್ ಗಳ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ವರದಿ ಪಡೆದಿರುವ ಪ್ರಲ್ಜಾದ್ ಜೋಶಿಯವರು, ಮುಂದಿನ ಎರಡು ವರ್ಷದ ಒಳಗೆ ಹೊಸ ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡಲು ತೀರ್ಮಾನಿಸಿದ್ದಾರೆ. 480 ಕ್ಲಾಸ್ ರೂಂಗಳ ಪೈಕಿ ರಾಜ್ಯ ಸರ್ಕಾರವೇ ತನ್ನ ಯೋಜನೆ ಅನ್ವಯ 160 ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡಲಿದೆ. ಉಳಿದ 320 ಹೊಸ ಕ್ಲಾಸ್ ರೂಮ್ ಗಳನ್ನ ಸಿ.ಎಸ್.ಆರ್ ಫಂಡ್ ನ ಸಹಾಯದೊಂದಿಗೆ ಕಟ್ಟಿಸಿಕೊಡುವುದಾಗಿ ಸಚಿವ ಪ್ರಲ್ಹಾದ್ ಜೋಶಿ ಅವರು ಘೋಷಿಸಿದ್ದಾರೆ.

ಅಷ್ಟೇ ಅಲ್ಲದೇ ಪ್ರತಿ ಶಾಲೆಗೊಂದು ಸ್ಮಾರ್ಟ್ ಕ್ಲಾಸ್, ಹಾಗೂ 100 ಹೈಟೆಕ್ ಅಂಗನವಾಡಿ ನಿರ್ಮಿಸಿಕೊಡುವುದಾಗಿಯೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಈಗಾಗಲೇ 10 ಸಾವಿರ ಡೆಸ್ಕ್ ಗಳನ್ನ ಸರ್ಕಾರಿ ಶಾಲಾ ಕಾಲೇಜುಗಳಿಗೆ ಪೂರೈಸಲಾಗಿದ್ದು, ಇನ್ನೂ 50 ಸಾವಿರ ಡೆಸ್ಕ್ ಗಳು ಅಗತ್ಯವಿದೆ. ಹಂತ ಹಂತವಾಗಿ 50 ಸಾವಿರ ಡೆಸ್ಕ್ ಗಳನ್ನು ಪೂರೈಸುವುದಾಗಿಯೂ ಇದೇ ವೇಳೆ ಪ್ರಲ್ಹಾದ್ ಜೋಶಿ ಭರವಸೆ ನೀಡಿದರು.

ಒಟ್ಟಾರೆ, ಶಿಗ್ಗಾವಿ – ಸವಣೂರು ಕ್ಷೇತ್ರಗಳು ಸೇರಿದಂತೆ ಸಂಪೂರ್ಣ ಧಾರವಾಡ ಲೋಕಸಭಾ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ದಿಗೆ 100 ಕೋಟಿ ವೆಚ್ಚದ ಮಹತ್ವದ 5 ಯೋಜನೆಗಳನ್ನ ಪ್ರಲ್ಹಾದ್ ಜೋಶಿ ಇಂದು ಘೋಷಿಸುವ ಮೂಲಕ ಕ್ಷೇತ್ರದ ಜನರಿಗೆ ಹಬ್ಬದ ಕೊಡುಗೆ ನೀಡಿದ್ದಾರೆ.

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ