ಧಾರವಾಡ: ವ್ಯಾಪಿಯಲ್ಲಿ ಬರುವ 110/11 ಕೆ.ವಿ ತಡಸಿನಕೊಪ್ಪ ವಿದ್ಯುತ್ (Power supply) ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳಲಿರುವುದರಿಂದ ಮೇ. 26 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಳಿಸಿದೆ. ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಮೇ.26 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ತಡಸಿನಕೊಪ್ಪ, ಜೋಗೆಲ್ಲಾಪುರ, ಇಟ್ಟಿಗಟ್ಟಿ, ಕೆ.ಹೆಚ್.ಬಿ, ಉದಯಗಿರಿ, ವನಸಿರಿ ನಗರ, ರಾಜಾಜಿ ನಗರ, ಸತ್ತೂರ ವಿಲೇಜ್, ಸತ್ತೂರ, ಆಶ್ರಯ ಕಾಲೋನಿ, ಎನ್.ಜಿ.ಇ.ಎಫ್, ಎಸ್.ಡಿ.ಎಮ್ ಮೆಡಿಕಲ್ ಕಾಲೇಜ್, ಎಸ್.ಡಿ.ಎಮ್ ಡೆಂಟಲ್ ಕಾಲೇಜ್, 2ಟಿಜ ಕೆ.ಹೆಚ್.ಬಿ ಹಂತ, ಐಐಐಟಿ, ಕೆ.ಐ.ಏ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾ ಸತ್ತೂರ, ರಾಶಿಫಾರ್ಮ, ಏರ್, ನವಲೂರ ರೇಲ್ವೆ ಸ್ಟೇಶನ್, ಸಂಜೀವಿನಿ ಪಾರ್ಕ್, ಹುಬ್ಬಳ್ಳಿ-ಧಾರವಾಡ ಡ್ಯೂರೆಬಲ್ ಗೂಡ್ಸ್ (ಏಕಸ್), ಕೆಎಂಎಫ್ ರಾಯಾಪುರ, ಲೋಕಲ್ ರಾಯಾಪುರ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇದನ್ನೂ ಓದಿ: Hubballi-Dharwad: ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯುವ ನೀರಿಗೆ ತತ್ವಾರ, ಶಾಶ್ವತ ಪರಿಹಾರಕ್ಕೆ ನಿವಾಸಿಗಳ ಆಗ್ರಹ
ಅದರಂತೆ, ಧಾರವಾಡ ಗ್ರಾಮೀಣ ಉಪವಿಭಾಗ ವ್ಯಾಪಿಯಲ್ಲಿ ಬರುವ 33/11 ಕೆ.ವಿ ಅರವಟಗಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ.
ಇದನ್ನೂ ಓದಿ: Karnataka Assembly Election 2023: ನಿಜವಾಯಿತೆ ಮಣ್ಣಿನ ಗೊಂಬೆಗಳು ನುಡಿದ ಆ ಭವಿಷ್ಯ?
ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ಮೇ.25 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಎಫ್ 2 ಅಂಬೊಲಿ, ಎಫ್ 3 ಹೊನ್ನಾಪುರ, ಎಫ್ 5 ಅರವಟಗಿ, ಎಫ್ 6 ಕುಂಬಾರಕೊಪ್ಪ, ಎಫ್ 7 ಶಿವನಾಗನೂರ್ ಪಿಡರ್ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:39 pm, Wed, 24 May 23