
ಹುಬ್ಬಳ್ಳಿ, ಜೂನ್ 27: ಆಷಾಢ ಏಕಾದಶಿಯಂದು (Ashada Ekadashi) ಪಂಡರಪುರಕ್ಕೆ (Pandharpur) ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯದಿಂದ ಭಕ್ತರು ತೆರಳುತ್ತಾರೆ. ಆಷಾಢ ಏಕಾದಶಿಯಂದು ಪಂಡರಪುರ ವಿಠ್ಠಲ ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು (South Western Railway) ಎರಡು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಪಂಡರಪುರದವರೆಗೆ ವಿಸ್ತರಿಸಿದೆ ಹಾಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಎಕ್ಸ್‌ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ಪಂಡರಪುರದವರೆಗೆ ವಿಸ್ತರಿಸಲಾಗಿದೆ. ಈ ರೈಲು ಜುಲೈ 4 ರಿಂದ ಜುಲೈ 9 ರವರೆಗೆ ಕ್ಯಾಸಲ್ ರಾಕ್ ಮತ್ತು ಪಂಡರಪುರದ ನಡುವೆ ಸಂಚರಿಸಲಿದೆ. ಕ್ಯಾಸಲ್ ರಾಕ್‌ನಿಂದ ವಿಜಯನಗರದವರೆಗಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿಸ್ತ್ರತ ಮಾರ್ಗದಲ್ಲಿ, ರೈಲು ಮೀರಜ್‌ಗೆ ಮಧ್ಯರಾತ್ರಿ 12:20 ಕ್ಕೆ ಆಗಮಿಸಿ, 12:50 ಕ್ಕೆ ಹೊರಟು, ಬೆಳಗಿನ ಜಾವ 03:00 ಕ್ಕೆ ಪಂಡರಪುರ ತಲುಪಲಿದೆ.
ಅದೇ ರೀತಿ, ರೈಲು ಸಂಖ್ಯೆ 17331 ಮೀರಜ್ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಮೀರಜ್ ಬದಲು ಪಂಡರಪುರದಿಂದ ಹೊರಡುವಂತೆ ತಾತ್ಕಾಲಿಕವಾಗಿ ವಿಸ್ತರಿಸಲಾಗಿದೆ. ಈ ರೈಲು ಜುಲೈ 5 ರಿಂದ ಜುಲೈ 10 ರವರೆಗೆ ಪಂಡರಪುರದಿಂದ ಎಸ್‌ಎಸ್ಎಸ್ ಹುಬ್ಬಳ್ಳಿಗೆ ಸಂಚರಿಸಲಿದೆ. ಈ ರೈಲು ಪಂಡರಪುರದಿಂದ ಬೆಳಗಿನ ಜಾವ 04:00 ಕ್ಕೆ ಹೊರಟು, 06:45 ಕ್ಕೆ ಮೀರಜ್ ತಲುಪಿ, 07:15 ಕ್ಕೆ ಅಲ್ಲಿಂದ ಹೊರಡಲಿದೆ. ವಿಜಯನಗರದಿಂದ ಹುಬ್ಬಳ್ಳಿಯವರೆಗಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ರೈಲು ಸಂಖ್ಯೆ 07313/07314 ಎಸ್ಎಸ್ಎಸ್ ಹುಬ್ಬಳ್ಳಿ-ಪಂಡರಪುರ-ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ರೈಲುಗಳು ಜುಲೈ 1, 2025 ರಿಂದ ಜುಲೈ 8, 2025 ರವರೆಗೆ (04.07.2025 ಹೊರತುಪಡಿಸಿ) ಪ್ರತಿ ದಿಕ್ಕಿನಲ್ಲಿ ಏಳು ಟ್ರಿಪ್‌ಗಳನ್ನು ಸಂಚರಿಸಲಿವೆ.
ರೈಲು ಸಂಖ್ಯೆ 07313 ಎಸ್ಎಸ್ಎಸ್ ಹುಬ್ಬಳ್ಳಿ-ಪಂಡರಪುರ ಕಾಯ್ದಿರಿಸದ ವಿಶೇಷ ರೈಲು ಹುಬ್ಬಳ್ಳಿಯಿಂದ ಬೆಳಿಗ್ಗೆ 05:10 ಗಂಟೆಗೆ ಹೊರಟು ಅದೇ ದಿನ ಸಂಜೆ 04:00 ಗಂಟೆಗೆ ಪಂಡರಪುರ ತಲುಪಲಿದೆ. ಇದು ಧಾರವಾಡ, ಅಳ್ಳಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್. ರಾಯಬಾಗ್. ಚೆಂಚಳಿ, ಕುಡಚಿ, ಉಗಾರ ಖುರ್ದ್, ಶೇಡಬಾಳ, ವಿಜಯನಗರ, ಮಿರಜ್, ಅರಗ, ಧಲಗಾಂವ, ಜತ್ ರೋಡ್, ವಾಸುದ, ಮತ್ತು ಸಂಗೋಲಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
Kindly note:
South Western Railway will operate special unreserved train services between Shri Siddharoodha Swamiji, Hubballi and Pandharpur to facilitate the travel of devotees during the Ashada Ekadashi festival.
ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಭಕ್ತರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ… pic.twitter.com/RscNo4RYJh— South Western Railway (@SWRRLY) June 27, 2025
ರೈಲು ಸಂಖ್ಯೆ 07314 ಪಂಡರಪುರ-ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ರೈಲು ಪಂಢರಪುರದಿಂದ ಸಂಜೆ 06:00 ಗಂಟೆಗೆ ಹೊರಟು ಮರುದಿನ ಬೆಳಿಗೆ, 04:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ಹಿಂದಿನ ರೈಲು ನಿಲುಗಡೆ ಮಾಡಿದ ನಿಲ್ದಾಣಗಳಲ್ಲೇ ಹಿಮ್ಮುಖ ಕ್ರಮದಲ್ಲಿ ನಿಲುಗಡೆ ನೀಡಲಿದೆ.
ಇದನ್ನೂ ಓದಿ: ಪಿಂಕ್ ಲೈನ್ ಆರು ಸ್ಟೇಷನ್ಗಳಲ್ಲಿ ಈ ವರ್ಷವೇ ಮೆಟ್ರೋ ರೈಲು ಸಂಚಾರ
ಈ ವಿಶೇಷ ರೈಲು 10 ಬೋಗಿಗಳನ್ನು (8 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು/ಅಂಗವಿಕಲ ಬೋಗಿಗಳು) ಒಳಗೊಂಡಿರುತ್ತದೆ.
ಈ ವಿಶೇಷ ಸೇವೆಗಳು ಪ್ರಯಾಣಿಕರಿಗೆ, ವಿಶೇಷವಾಗಿ ಆಷಾಢ ಏಕಾದಶಿ ಉತ್ಸವಗಳಿಗಾಗಿ ಪಂಡರಪುರಕ್ಕೆ ತೆರಳುವ ವಾರಕರಿಗಳು ಮತ್ತು ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ನಿರೀಕ್ಷೆಯಿದೆ