AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pink Line Metro: ಪಿಂಕ್‌ ಲೈನ್ ಆರು ಸ್ಟೇಷನ್​​ಗಳಲ್ಲಿ ಈ ವರ್ಷವೇ ಮೆಟ್ರೋ ರೈಲು ಸಂಚಾರ

ಅದು ಬನ್ನೇರುಘಟ್ಟ ಭಾಗದಿಂದ ಐಟಿ-ಬಿಟಿ ಟೆಕ್ ಪಾರ್ಕ್​ಗಳಿಗೆ ಸಂಪರ್ಕ ಕಲ್ಪಿಸುವ ಪಿಂಕ್‌ ಲೈನ್ ಮೆಟ್ರೋ ಮಾರ್ಗ. ಬರೋಬ್ಬರಿ 16,000 ಕೋಟಿ ರುಪಾಯಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಈ ವರ್ಷ ಎಲಿವೇಟೆಡ್ ಮೆಟ್ರೋ ಸ್ಟೇಷನ್​ಗಳಿಗೆ ಚಾಲನೆ ಸಿಕ್ಕರೆ ಅಂಡರ್ ಗ್ರೌಂಡ್​​ನಲ್ಲಿ ಕಾಮಗಾರಿ ವಿಳಂಬವಾಗಿರುವುದರಿಂದ ಮುಂದಿನ ವರ್ಷ ರೈಲು ಸಂಚಾರ ಮಾಡಲಿದೆ ಎನ್ನಲಾಗಿದೆ.

Pink Line Metro: ಪಿಂಕ್‌ ಲೈನ್ ಆರು ಸ್ಟೇಷನ್​​ಗಳಲ್ಲಿ ಈ ವರ್ಷವೇ ಮೆಟ್ರೋ ರೈಲು ಸಂಚಾರ
ಕಾಳೇನ ಅಗ್ರಹಾರ ದಿಂದ ನಾಗಾವರ ವರೆಗಿನ ಪಿಂಕ್‌ ಲೈನ್ ಮೆಟ್ರೋ ಮಾರ್ಗ
Kiran Surya
| Edited By: |

Updated on:Jun 27, 2025 | 7:59 AM

Share

ಬೆಂಗಳೂರು, ಜೂನ್ 27: ಕಾಳೇನ ಅಗ್ರಹಾರ ದಿಂದ ನಾಗಾವರ ವರೆಗಿನ ಪಿಂಕ್‌ ಲೈನ್ ಮೆಟ್ರೋದಲ್ಲಿ (Pink Line Metro) ಒಟ್ಟು 18 ಸ್ಟೇಷನ್​ಗಳಿದ್ದು, ಆ ಪೈಕಿ ಈ ಡಿಸೆಂಬರ್ ವೇಳೆಗೆ 6 ಮೆಟ್ರೋ ಸ್ಟೇಷನ್​ಗಳಲ್ಲಿ ಚಾಲಕರಹಿತ ರೈಲು ಸಂಚಾರ ಮಾಡಲಿದೆ. 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್​ಗಳಿಗೆ ಮುಂದಿನ ವರ್ಷ ಡಿಸೆಂಬರ್​​ನಲ್ಲಿ ಚಾಲನೆ ಸಿಗಲಿದೆ. ಸದ್ಯ ಹಳದಿ ಲೈನ್​ನಲ್ಲಿ ಈಗಾಗಲೇ ಡ್ರೈವರ್ಲೆಸ್ ರೈಲು (Driverless Metro Train) ಪ್ರಾಯೋಗಿಕ ಸಂಚಾರ ಮಾಡುತ್ತಿದೆ. ಡಿಸೆಂಬರ್ ವೇಳೆಗೆ ಪಿಂಕ್‌ ಲೈನ್ ಮಾರ್ಗದಲ್ಲಿಯೂ ಸಂಚಾರ ಮಾಡಲಿದೆ ಎಂದು ಬಿಎಂಆರ್​ಸಿಎಲ್ ಮೂಲಗಳು ತಿಳಿಸಿವೆ.

ಕಾಳೇನ ಅಗ್ರಹಾರ ದಿಂದ ನಾಗವಾರ ಮಾರ್ಗ 21.25 ಕಿಮೀ ವಿಸ್ತೀರ್ಣವಿದ್ದು, ಒಟ್ಟು 18 ಮೆಟ್ರೋ ಸ್ಟೇಷನ್​ಗಳು ಇರಲಿವೆ. ಅದರಲ್ಲಿ 6 ಎಲಿವೇಟೆಡ್ ಸ್ಟೇಷನ್​ಗಳು, 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್​ಗಳಾಗಿವೆ.

ಕಾಳೇನ ಅಗ್ರಹಾರ ದಿಂದ ಸ್ವಾಗತ್ ಕ್ರಾಸ್ ವರೆಗೆ ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳಿದ್ದು, ಅವುಗಳ ಕಾಮಗಾರಿ ಈಗಾಗಲೇ ಮುಗಿಯುವ ಹಂತದಲ್ಲಿದೆ. ಹೀಗಾಗಿ ಮೊದಲ ಹಂತದಲ್ಲಿ ಈ ಸ್ಟೇಷನ್​ಗಳ ಮಧ್ಯೆ ಡ್ರೈವರ್ಲೆಸ್ ರೈಲುಗಳನ್ನು ಓಡಿಸಲು ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಂಡಿದೆ. ಸ್ವಾಗತ್ ಕ್ರಾಸ್ ದಿಂದ ನಾಗವಾರ 12 ಅಂಡರ್ ಗ್ರೌಂಡ್ ಸ್ಟೇಷನ್ ಇದ್ದು, ಅವುಗಳ ಕಾಮಗಾರಿ ಇನ್ನೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್ ಗಳ ವ್ಯಾಪ್ತಿಯಲ್ಲಿ ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ.

ಇದನ್ನೂ ಓದಿ
Image
ಕರ್ನಾಟಕದ ಪರೀಕ್ಷಾ ಮಾದರಿ ಅನುಸರಿಸಲು ನಿರ್ಧರಿಸಿದ ಸಿಬಿಎಸ್​ಇ!
Image
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ: ಮುಂಚೂಣಿಯಲ್ಲಿ ಈ ನಾಯಕರ ಹೆಸರು!
Image
ಕಾಂಗ್ರೆಸ್ ಶಾಸಕರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದ ಕೆಎನ್ ರಾಜಣ್ಣ
Image
ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ

ಸಿದ್ಧವಾಗ್ತಿವೆ 16 ಚಾಲಕರಹಿತ ಮೆಟ್ರೋ ರೈಲುಗಳು

ಈಗಾಗಲೇ ಈ ಮಾರ್ಗಕ್ಕಾಗಿ ಬೆಮಲ್​ನಲ್ಲಿ 16 ಚಾಲಕರಹಿತ ರೈಲುಗಳು ಸಿದ್ದವಾಗುತ್ತಿವೆ. ಮೊದಲ ರೈಲು ಸೆಪ್ಟೆಂಬರ್​ಗೆ ಬರಲಿದೆ. ಪ್ರತಿ ತಿಂಗಳು ಎರಡು ಚಾಲಕರಹಿತ ರೈಲುಗಳು ಪೂರೈಕೆಯಾಗಲಿವೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು, ಈ ಬನ್ನೇರುಘಟ್ಟ ರೋಡ್​​ನಲ್ಲಿ ವಿಪರೀತವಾದ ಟ್ರಾಫಿಕ್ ಇರುತ್ತದ. ಮೆಟ್ರೋ ಸಂಚಾರ ಆರಂಭವಾದರೆ ತುಂಬಾ ಉಪಯೋಗವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: Yellow Line Metro: ನಮ್ಮ ಮೆಟ್ರೋ ಯೆಲ್ಲೋ ಮಾರ್ಗ ಕಾರ್ಯಾರಂಭ ಮತ್ತೆ ವಿಳಂಬ

ಒಟ್ಟಿನಲ್ಲಿ ಈ ವರ್ಷ ಪಿಂಕ್‌ ಲೈನ್ ಮೆಟ್ರೋದ 6 ಮೆಟ್ರೋ ಸ್ಟೇಷನ್​​ಗಳ ವ್ಯಾಪ್ತಿಯಲ್ಲಿ ಡ್ರೈವರ್ಲೆಸ್ ರೈಲುಗಳು ಸಂಚಾರ ಮಾಡಲಿದ್ದು, ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ಮಾಡಲು ಕಾತರದಿಂದ ಕಾಯುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:59 am, Fri, 27 June 25

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?