ಈರುಳ್ಳಿ ದರ ಕುಸಿತಕ್ಕೆ ರೈತರು ಕಿಡಿ: ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹ
ಈರುಳ್ಳಿ ಪ್ರತಿ ಕ್ವಿಂಟಲ್ಗೆ ಮೂರರಿಂದ ಐದು ಸಾವಿರ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಈರುಳ್ಳಿ(Onion) ಬೆಳೆಗಾರರ ಸಂಘದವರು ಕೊರಳಲ್ಲಿ ಈರುಳ್ಳಿ ಸರ ಹಾಕಿಕೊಂಡು ವಿಭಿನ್ನವಾಗಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ, ಜ.27: ಈರುಳ್ಳಿ ದರ ಕುಸಿತಕ್ಕೆ ರೈತರು ಕಿಡಿಕಾರಿದ್ದಾರೆ. ಈ ಹಿನ್ನಲೆ ಕೂಡಲೇ ಪ್ರತಿ ಕ್ವಿಂಟಲ್ಗೆ ಮೂರರಿಂದ ಐದು ಸಾವಿರ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಈರುಳ್ಳಿ(Onion) ಬೆಳೆಗಾರರ ಸಂಘದವರು ಕೊರಳಲ್ಲಿ ಈರುಳ್ಳಿ ಸರ ಹಾಕಿಕೊಂಡು ವಿಭಿನ್ನವಾಗಿ ಆಗ್ರಹಿಸಿದ್ದಾರೆ. ಈಗಾಗಲೇ ರಾಜ್ಯದ್ಯಂತ 30 ಲಕ್ಷ ಈರುಳ್ಳಿ ಬೆಳೆಗಾರರಿದ್ದಾರೆ. ಆದರೆ, ಈರುಳ್ಳಿ ದರ ದಿಢೀರ್ 1200 ಕ್ಕೆ ಕುಸಿತವಾಗಿದೆ ಎಂದು ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಮಾಡಿದ್ದರಿಂದ ದರ ಕುಸಿತ
ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿಷೇಧ ಮಾಡಿದ್ದರಿಂದ ದರ ಕುಸಿತವಾಗಿದೆ. ಅದಕ್ಕೋಸ್ಕರ ಕೂಡಲೇ ರಫ್ತು ನಿಷೇಧ ವಾಪಸ್ ಪಡೆಯಬೇಕು. ಜೊತೆಗೆ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು. ಹುಬ್ಬಳ್ಳಿ, ಗದಗ್ ಹಾಗೂ ಬೆಂಗಳೂರಿನಲ್ಲಿ ತರಕಾರಿ ಖರೀದಿ ಕೇಂದ್ರ ತೆರೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jan 27, 2024 02:54 PM
Latest Videos