ಈರುಳ್ಳಿ ದರ ಕುಸಿತಕ್ಕೆ ರೈತರು ಕಿಡಿ: ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹ

Edited By: ಕಿರಣ್ ಹನುಮಂತ್​ ಮಾದಾರ್

Updated on: Jan 27, 2024 | 2:56 PM

ಈರುಳ್ಳಿ ಪ್ರತಿ ಕ್ವಿಂಟಲ್​ಗೆ ಮೂರರಿಂದ ಐದು ಸಾವಿರ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಈರುಳ್ಳಿ(Onion) ಬೆಳೆಗಾರರ ಸಂಘದವರು ಕೊರಳಲ್ಲಿ ಈರುಳ್ಳಿ ಸರ ಹಾಕಿಕೊಂಡು ವಿಭಿನ್ನವಾಗಿ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ, ಜ.27: ಈರುಳ್ಳಿ ದರ ಕುಸಿತಕ್ಕೆ ರೈತರು ಕಿಡಿಕಾರಿದ್ದಾರೆ. ಈ ಹಿನ್ನಲೆ ಕೂಡಲೇ ಪ್ರತಿ ಕ್ವಿಂಟಲ್​ಗೆ ಮೂರರಿಂದ ಐದು ಸಾವಿರ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಈರುಳ್ಳಿ(Onion) ಬೆಳೆಗಾರರ ಸಂಘದವರು ಕೊರಳಲ್ಲಿ ಈರುಳ್ಳಿ ಸರ ಹಾಕಿಕೊಂಡು ವಿಭಿನ್ನವಾಗಿ ಆಗ್ರಹಿಸಿದ್ದಾರೆ. ಈಗಾಗಲೇ ರಾಜ್ಯದ್ಯಂತ 30 ಲಕ್ಷ ಈರುಳ್ಳಿ ಬೆಳೆಗಾರರಿದ್ದಾರೆ. ಆದರೆ, ಈರುಳ್ಳಿ ದರ ದಿಢೀರ್ 1200 ಕ್ಕೆ ಕುಸಿತವಾಗಿದೆ ಎಂದು  ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಮಾಡಿದ್ದರಿಂದ ದರ ಕುಸಿತ

ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿಷೇಧ ಮಾಡಿದ್ದರಿಂದ ದರ ಕುಸಿತವಾಗಿದೆ. ಅದಕ್ಕೋಸ್ಕರ ಕೂಡಲೇ ರಫ್ತು ನಿಷೇಧ ವಾಪಸ್ ಪಡೆಯಬೇಕು. ಜೊತೆಗೆ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು. ಹುಬ್ಬಳ್ಳಿ, ಗದಗ್ ಹಾಗೂ ಬೆಂಗಳೂರಿನಲ್ಲಿ ತರಕಾರಿ ಖರೀದಿ ಕೇಂದ್ರ ತೆರೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 27, 2024 02:54 PM
Follow Us
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More