AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ 270 ವಿವಿಧ ಬ್ಯಾಂಕ್​ಗಳಲ್ಲಿ ನಕಲಿ‌ ಖಾತೆ ಸೃಷ್ಟಿಸಿ ಅವ್ಯವಹಾರ; ಮೂವರ ಬಂಧನ

ದೇಶಾದ್ಯಂತ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಹಿನ್ನಲೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಬ್ಯಾಂಕ್‌ಗಳು ಮತ್ತು ಟೆಲಿಕಾಂ ಕಂಪನಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಇದರಿಂದ ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬಹುದಾಗಿತ್ತು. ಇದೀಗ ದೇಶದ 270 ವಿವಿಧ ಬ್ಯಾಂಕ್​ಗಳಲ್ಲಿ ನಕಲಿ‌ ಖಾತೆ ಸೃಷ್ಟಿಸಿ ಅವ್ಯವಹಾರ ನಡೆಸಿದ್ದ ಮೂವರು ಸೈಬರ್​ ವಂಚಕರನ್ನು ಇಂದು(ಶುಕ್ರವಾರ) ಹುಬ್ಬಳ್ಳಿ ಸೈಬರ್ ಕ್ರೈಮ್ ಠಾಣೆ ಪೊಲೀಸರು(Hubli Cyber Crime police) ಅರೆಸ್ಟ್ ಮಾಡಿದ್ದಾರೆ.

ದೇಶದ 270 ವಿವಿಧ ಬ್ಯಾಂಕ್​ಗಳಲ್ಲಿ ನಕಲಿ‌ ಖಾತೆ ಸೃಷ್ಟಿಸಿ ಅವ್ಯವಹಾರ; ಮೂವರ ಬಂಧನ
ಬಂಧಿತ ಆರೋಪಿಗಳು
ಶಿವಕುಮಾರ್ ಪತ್ತಾರ್
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 19, 2024 | 4:35 PM

Share

ಹುಬ್ಬಳ್ಳಿ, ಜು.19: ದೇಶದ 270 ವಿವಿಧ ಬ್ಯಾಂಕ್​ಗಳಲ್ಲಿ ನಕಲಿ‌ ಖಾತೆ ಸೃಷ್ಟಿಸಿ ಅವ್ಯವಹಾರ ನಡೆಸಿದ್ದ ಮೂವರು ಸೈಬರ್​ ವಂಚಕರನ್ನು ಇಂದು(ಶುಕ್ರವಾರ) ಹುಬ್ಬಳ್ಳಿ ಸೈಬರ್ ಕ್ರೈಮ್ ಠಾಣೆ ಪೊಲೀಸರು(Hubli Cyber Crime police) ಅರೆಸ್ಟ್ ಮಾಡಿದ್ದಾರೆ. ಹೌದು, ದೆಹಲಿ ಹಾಗೂ ಮುಂಬೈನಲ್ಲಿ ಮೂವರನ್ನು ಬಂಧಿಸಲಾಗಿದೆ. ದೆಹಲಿ ಮೂಲದ ನಿಖಿಲ್ ಕುಮಾರ್ ರೌನಿ, ಸಚಿನ್ ಬೋಲಾ ಮತ್ತು ಮುಂಬೈ ಮೂಲದ ನಿಗಮ್​ ಬಂಧಿತರು. ಇದರಲ್ಲಿ ಇಬ್ಬರು ಸಾಫ್ಟವೇರ್​​ ಇಂಜಿನಿಯರ್​ ಆಗಿದ್ದು, ಓರ್ವ ಬಟ್ಟೆ ವ್ಯಾಪಾರಿಯಾಗಿದ್ದಾನೆ.

ಕರ್ನಾಟಕ, ಮಹಾರಾಷ್ಟ್ರ ಸೇರಿ ಅನೇಕ ಕಡೆ ವಂಚನೆ

ಕೋಡಿಂಗ್, ಡಿಕೋಡಿಂಗ್​ನಲ್ಲಿ ಎಕ್ಸ್​​ಪರ್ಟ್ ಆಗಿದ್ದ ಇಬ್ಬರು ವಂಚಕರು, ಕರ್ನಾಟಕ, ಮಹಾರಾಷ್ಟ್ರ ಸೇರಿ ಅನೇಕ ಕಡೆ ವಂಚಿಸಿದ್ದಾರೆ. ಸಾರ್ವಜನಿಕರಿಗೆ ವಂಚನೆ ಮಾಡಿ ಅವರಿಂದ  ಸರ್ಕಾರಿ, ಖಾಸಗಿ ಬ್ಯಾಂಕ್​ಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಸೈಬರ್ ವಂಚಕರು, ನಕಲಿ‌ ಖಾತೆ ಸೃಷ್ಟಿಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು. ಇದೀಗ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:ಸೈಬರ್ ಕ್ರೈಮ್ ತಡೆಗಟ್ಟಲು ಮಾಸ್ಟರ್ ಪ್ಲಾನ್ ರೂಪಿಸಿದ ಮೋದಿ ಸರ್ಕಾರ: ವಂಚಕರಿಗೆ ಟೆನ್ಶನ್

ಮೊಬೈಲ್ ಸಂಪರ್ಕದ ಜಾಡು ಹಿಡಿದು ಮೂವರ ಅರೆಸ್ಟ್​

ಇನ್ನು ವಂಚನೆ ಕುರಿತು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಸೈಬರ್ ಕ್ರೈಮ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಆಧರಿಸಿ ಬ್ಯಾಂಕ್ ಖಾತೆಯ ವಿವರ, ವಿಳಾಸ ಹಾಗೂ ಮೊಬೈಲ್ ಸಂಪರ್ಕದ ಜಾಡು ಹಿಡಿದು ಹೊರಟ ಪೊಲೀಸರು, ಇದೀಗ ಮೂವರನ್ನು ಒಂದೊಂದು ಕಡೆಗಳಲ್ಲಿ ಬಂಧಿಸಿದ ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸರು, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಸೈಬರ್​ ವಂಚನೆ ತಡೆಗೆ ಹೊಸ ಇಟ್ಟಿದ್ದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಬ್ಯಾಂಕ್‌ಗಳು ಮತ್ತು ಟೆಲಿಕಾಂ ಕಂಪನಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಇದರಿಂದ ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬಹುದಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ