ಇನ್ನು ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ: ಹುಬ್ಬಳ್ಳಿ-ಧಾರವಾಡ ಜನತೆಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ಪ್ರಲ್ಹಾದ್ ಜೋಶಿ

| Updated By: ಸಾಧು ಶ್ರೀನಾಥ್​

Updated on: Oct 12, 2022 | 2:17 PM

Hubballi to Delhi flight: ಹುಬ್ಬಳ್ಳಿಯಿಂದ ದೆಹಲಿಗೆ ನೇರ ರೈಲು ವ್ಯವಸ್ಥೆ ಕಲ್ಪಿಸಿದ ಬೆನ್ನಲ್ಲೇ ಹುಬ್ಬಳ್ಳಿಯಿಂದ ದೆಹಲಿಗೆ ಪ್ರತಿ ನಿತ್ಯ ಇಂಡಿಗೋ ಏರ್ ಲೈನ್ಸ್ ಸಂಚಾರದ ಸಿಹಿ ಸುದ್ದಿಯನ್ನ ಪ್ರಲ್ಹಾದ್ ಜೋಶಿಯವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಜನತೆಯ ಬಹುದಿನಗಳ ಬೇಡಿಕೆ ಈಡೇರಿದೆ.

ಇನ್ನು ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ: ಹುಬ್ಬಳ್ಳಿ-ಧಾರವಾಡ ಜನತೆಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ಪ್ರಲ್ಹಾದ್ ಜೋಶಿ
IndiGo flight
Follow us on

ಹುಬ್ಬಳ್ಳಿ ಧಾರವಾಡ ಜನತೆಗೆ ದೆಹಲಿಯನ್ನು ಹತ್ತಿರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿಯಿಂದ ದೆಹಲಿಗೆ ನೇರವಾಗಿ ಅಗತ್ಯ ಸಾರಿಗೆ ಸಂಪರ್ಕ ಕಲ್ಪಿಸುವಲ್ಲಿ ಪ್ರಲ್ಹಾದ ಜೋಶಿಯವರು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿಯಿಂದ ದೆಹಲಿಗೆ ನೇರವಾಗಿ ರೈಲು ಸಂಚಾರದ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯಿಂದ ದೆಹಲಿಗೆ ನೇರವಾಗಿ ಪ್ರತಿನಿತ್ಯ ವಿಮಾನ ಸೇವೆಯನ್ನೂ ಪ್ರಲ್ಹಾದ ಜೋಶಿಯವರು (Pralhad Joshi) ಸಾಧ್ಯವಾಗಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಿಂದ ದೆಹಲಿಗೆ ಪ್ರತಿನಿತ್ಯ ವಿಮಾನ ಸೇವೆ ಕಲ್ಪಿಸಲು (Hubballi to Delhi flight) ಇಂಡಿಗೋ ಏರ್ ಲೈನ್ಸ್ (IndiGo Flight) ಜೋಶಿಯವರು ಮಾತುಕತೆ ನಡೆಸಿದ್ದು ಒಪ್ಪಿಗೆ ಕೂಡ ಸಿಕ್ಕಿದೆ. ಇದರಿಂದಾಗಿ ಇನ್ಮುಂದೆ ಪ್ರತಿನಿತ್ಯ ಹುಬ್ಬಳ್ಳಿಯಿಂದ ದೆಹಲಿಗೆ ಇಂಡಿಗೋ ಏರ್ ಲೈನ್ಸ್ ನಲ್ಲಿ ಪ್ರಯಾಣ ಸಾಧ್ಯವಾಗಲಿದೆ.

ನಿನ್ನಯಷ್ಟೇ ಹುಬ್ಬಳ್ಳಿಯಿಂದ ದೆಹಲಿಗೆ ಸಂಚರಿಸುವ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು ಸೇವೆಗೆ ಚಾಲನೆ ನೀಡಲಾಗಿತ್ತು. ಈ ಹಿಂದೆ ವಾರಕ್ಕೆ ಒಂದು ದಿನ ಮಾತ್ರ ನಿಜಾಮುದ್ದೀನ್ ಲಿಂಕ್ ಟ್ರೇನ್ ವ್ಯವಸ್ಥೆಯಿತ್ತು. ಅದರ ಬದಲಿಗೆ ಹುಬ್ಬಳ್ಳಿಯಿಂದ ನೇರವಾಗಿ ದೆಹಲಿಗೆ ನಿಜಾಮುದ್ದೀನ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು.

ಹುಬ್ಬಳ್ಳಿಯಿಂದ ದೆಹಲಿಗೆ ನೇರ ರೈಲು ವ್ಯವಸ್ಥೆ ಕಲ್ಪಿಸಿದ ಬೆನ್ನಲ್ಲೇ ಹುಬ್ಬಳ್ಳಿಯಿಂದ ದೆಹಲಿಗೆ ಪ್ರತಿ ನಿತ್ಯ ಇಂಡಿಗೋ ಏರ್ ಲೈನ್ಸ್ ಸಂಚಾರದ ಸಿಹಿ ಸುದ್ದಿಯನ್ನ ಪ್ರಲ್ಹಾದ್ ಜೋಶಿಯವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಜನತೆಯ ಬಹುದಿನಗಳ ಬೇಡಿಕೆ ಈಡೇರಿದೆ. ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಒದಗಿಸಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಂಡಿಗೋ ಅಧಿಕಾರಿಗಳಿಗೆ ಕೋರಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಇಂಡಿಗೋ ಏರ್ ಲೈನ್ಸ್ ಅಧಿಕಾರಿಗಳು, ನವೆಂಬರ್ 14 ರಿಂದ ಪ್ರತಿದಿನ ವಿಮಾನ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಟಿಕೆಟ್‌ ಬುಕ್ಕಿಂಗ್‌ ಕೂಡ ಈಗಾಗಲೇ ಪ್ರಾರಂಭವಾಗಿದೆ.

ಸೇವೆ ಪ್ರಾರಂಭಿಸಿದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಂಡಿಗೋ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರತಿ ದಿನ ದೆಹಲಿಯಿಂದ ಬೆಳಗ್ಗೆ 10 ಗಂಟೆಗೆ ವಿಮಾನ ಸೇವೆಯ ವೇಳಾಪಟ್ಟಿ ನಿಗದಿಪಡಿಸಲಾಗಿದ್ದು, 12.45 ಕ್ಕೆ ಹುಬ್ಬಳ್ಳಿ ತಲುಪಲಿದೆ. ಇನ್ನು ಹುಬ್ಬಳ್ಳಿಯಿಂದ ಮಧ್ಯಾಹ್ನ 1.15 ಕ್ಕೆ ಹೊರಡಲಿರುವ ಇಂಡಿಗೋ ಏರ್ ಲೈನ್ಸ್ ವಿಮಾನ 3.45 ಕ್ಕೆ ದೆಹಲಿ ತಲುಪಲಿದೆ.

ವೇಳಾಪಟ್ಟಿ :
ದೆಹಲಿ – ಹುಬ್ಬಳ್ಳಿ 10:00 – 12:45
ಹುಬ್ಬಳ್ಳಿ – ದೆಹಲಿ 13:15 – 15:45