ಹಾಸನದಲ್ಲಿ ಗ್ರಾಮೀಣ ಕ್ರೀಡೆಗಳ ರಂಗು, ಹುಬ್ಬಳ್ಳಿಯಲ್ಲಿ ಮಿಸೆಸ್ ಇಂಡಿಯಾ ಸೊಬಗು
ಬಿಂದಿಗೆ ಹೊತ್ಕೊಂಡು ಓಡೋದೇನು… ಗೋಣಿಚೀಲದಲ್ಲಿ ಜಂಪ್ ಮಾಡ್ಕೊಂಡು ನುಗ್ಗೋದೇನು.. ಮೂರು ಕಾಲಲ್ಲಿ ಓಡೋಕೂ ಸೈ… ಹೂ ಕಟ್ಟೋಕೂ ಜೈ… ಮಡಿಕೆ ಒಡೆಯೋದ್ರಲ್ಲಿ ಕಮ್ಮಿಯಿಲ್ಲ… ನಿಂಬೆಹಣ್ಣಿನ ಆಟದಲ್ಲೂ ಹಿಂದೆ ಉಳೀತಿಲ್ಲ… ಒಬ್ಬರಿಗಿಂತ ಒಬ್ಬರು ಸೂಪರೋ ಸೂಪರ್. ಹಾಸನ: ಸರ್ಕಾರಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜಲ್ಲಿಂದು ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಳ್ಳಿ ಕ್ರೀಡೆಗಳನ್ನ ಉಳಿಸೋ ಸಲುವಾಗಿ ಗ್ರಾಮೀಣ ಕಲರವ ಅನ್ನೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸದಾ ಕ್ಲಾಸ್, ಇಂಟರ್ನಲ್ಸ್ ಅಂತಾ ಬ್ಯುಸಿ ಇರ್ತಿದ್ದ ಹುಡುಗಿಯರೆಲ್ಲಾ ಗ್ರಾಮೀಣ ಕ್ರೀಡೆಗಳಲ್ಲಿ ಭಾಗಿಯಾಗಿ ಖುಷಿಪಟ್ರು. […]
ಬಿಂದಿಗೆ ಹೊತ್ಕೊಂಡು ಓಡೋದೇನು… ಗೋಣಿಚೀಲದಲ್ಲಿ ಜಂಪ್ ಮಾಡ್ಕೊಂಡು ನುಗ್ಗೋದೇನು.. ಮೂರು ಕಾಲಲ್ಲಿ ಓಡೋಕೂ ಸೈ… ಹೂ ಕಟ್ಟೋಕೂ ಜೈ… ಮಡಿಕೆ ಒಡೆಯೋದ್ರಲ್ಲಿ ಕಮ್ಮಿಯಿಲ್ಲ… ನಿಂಬೆಹಣ್ಣಿನ ಆಟದಲ್ಲೂ ಹಿಂದೆ ಉಳೀತಿಲ್ಲ… ಒಬ್ಬರಿಗಿಂತ ಒಬ್ಬರು ಸೂಪರೋ ಸೂಪರ್.
ಹಾಸನ: ಸರ್ಕಾರಿ ಮಹಿಳೆಯರ ಪ್ರಥಮ ದರ್ಜೆ ಕಾಲೇಜಲ್ಲಿಂದು ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಳ್ಳಿ ಕ್ರೀಡೆಗಳನ್ನ ಉಳಿಸೋ ಸಲುವಾಗಿ ಗ್ರಾಮೀಣ ಕಲರವ ಅನ್ನೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸದಾ ಕ್ಲಾಸ್, ಇಂಟರ್ನಲ್ಸ್ ಅಂತಾ ಬ್ಯುಸಿ ಇರ್ತಿದ್ದ ಹುಡುಗಿಯರೆಲ್ಲಾ ಗ್ರಾಮೀಣ ಕ್ರೀಡೆಗಳಲ್ಲಿ ಭಾಗಿಯಾಗಿ ಖುಷಿಪಟ್ರು.
ತಲೆ ಮೇಲೊಂದು ಸೊಂಟದ ಮೇಲೊಂದು ಬಿಂದಿಗೆ ಹೊತ್ಕೊಂಡು ಓಡೋದು ನೋಡೋಕೆ ಸಖತ್ ಆಗಿತ್ತು. ಇನ್ನು ಕುಂಟೆಬಿಲ್ಲೆ, ಚಮಚ-ನಿಂಬೆಹಣ್ಣು, ನಡೀತಾನೆ ಸೂಜಿಗೆ ದಾರ ಪೋಣಿಸೋದು, ಕಾಳು ಬೇರ್ಪಡಿಸೋದು ಹೀಗೆ ಹಲವು ಆಟಗಳನ್ನ ಆಡಿ ಹಳ್ಳಿ ಗಮ್ಮತ್ತಲ್ಲಿ ತೇಲಾಡಿದ್ರು. ಅದ್ರಲ್ಲೂ ಇಡೀ ಕಾಲೇಜು ಹುಡುಗಿಯರೆಲ್ಲಾ ರೆಡ್ ರೆಡ್ ಕಲರ್ ಡ್ರೆಸ್ ಹಾಕಿದ್ದು ಗ್ರಾಮೀಣ ಕಲರವವನ್ನ ಕಲರ್ಫುಲ್ ಮಾಡಿತ್ತು.
ಹುಬ್ಬಳ್ಳಿ: ಇಲ್ಲೂ ಸಹ ಬ್ಯೂಟಿಗಳ ಫ್ಯಾಷನ್ ಶೋ ಕಿಕ್ಕೇರಿಸಿತ್ತು. ಮಿಸೆಸ್ ಇಂಡಿಯಾ ಕರ್ನಾಟಕ ಫ್ಯಾಷನ್ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ನಾರಿಯರು ಕ್ಯಾಟ್ ವಾಕ್ ಮಾಡಿ ಸೈ ಎನ್ನಿಸಿಕೊಂಡ್ರು. ಮದ್ವೆಯಾದ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡೋ ನಿಟ್ಟಿನಲ್ಲಿ ಶೋ ನಡೆಸಲಾಗಿತ್ತು. ರಾಜ್ಯದ ಹಲವೆಡೆ ಆಡಿಷನ್ ನಡೆಸಿ 38 ಸ್ಪರ್ಧಿಗಳನ್ನ ಫಿನಾಲೆಗೆ ಆಯ್ಕೆ ಮಾಡಲಾಗಿತ್ತು. ಇವರೆಲ್ಲರೂ ಱಂಪ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಹುಬ್ಬೇರಿಸಿದ್ರು.
ಒಟ್ನಲ್ಲಿ ಒಂದ್ಕಡೆ ಕಾಲೇಜು ಹುಡುಗಿಯರೆಲ್ಲಾ ಗ್ರಾಮೀಣ ಕಲರವದಲ್ಲಿ ಮಿಂದೆದ್ರೆ, ಮತ್ತೊಂದೆಡೆ ಸದಾ ಮನೇಲಿ ಇರ್ತಿದ್ದ ಮಹಿಳೆಯರೆಲ್ಲಾ ಮಾಡೆಲ್ಗಳ ರೇಂಜ್ಗೆ ಕ್ಯಾಟ್ ವಾಕ್ ಮಾಡಿ ಟ್ಯಾಲೆಂಟ್ ಪ್ರದರ್ಶಿಸಿದ್ರು.
Published On - 12:15 pm, Tue, 11 February 20