ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ ಹತ್ಯೆ ಪ್ರಕರಣ: ಪತಿಯ ಸಾವಿನ ನ್ಯಾಯ ಕೇಳಿ ಅಲೆದಾಡುತ್ತಿದ್ದ ದೀಪಕ್ ಪತ್ನಿ ಆತ್ಮಹತ್ಯೆ
ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ಸಾವಿಗೆ ನ್ಯಾಯ ಕೇಳುತ್ತಾ ಅಲೆದಾಡುತ್ತಿದ್ದ ದೀಪಕ್ ಪತ್ನಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಧಾರವಾಡ: ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ (Deepak Pathadari) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ (Husband) ಸಾವಿಗೆ ನ್ಯಾಯ ಕೇಳುತ್ತಾ ಅಲೆದಾಡುತ್ತಿದ್ದ ದೀಪಕ್ ಪತ್ನಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ದೀಪಕ್ ಹತ್ಯೆ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಪತಿಯ ಸಾವಿಗೆ ನ್ಯಾಯಕ್ಕಾಗಿ ಅಲೆದಾಡುತ್ತಿದ್ದ ಪುಷ್ಪಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಷ್ಪ ನವನಗರದ ಸಂಬಂಧಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿದ್ದಾರೆ. ಪುಷ್ಪಾ ಆತ್ಮಹತ್ಯೆ ಹಲವು ಅನುಮಾನಕ್ಕೆ ಕಾರಣವಾಗಿದೆ.+
ಗ್ರಾ.ಪಂ ಸದಸ್ಯನ ಕೊಲೆ ಪ್ರಕರಣ: ಸೈಲೆಂಟಾಗಿ ಇದ್ದಷ್ಟು ನಿನಗೆ ಒಳ್ಳೆಯದು ಅಂತ ಪೊಲೀಸರು ವಾರ್ನಿಂಗ್ ಕೊಟ್ಟ ಆಡಿಯೋ ಬಿಡುಗಡೆ
ಗ್ರಾಮ ಪಂಚಾಯಿತಿ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ, ಕೊಲೆ ನಡೆದ ಮೂರು ತಿಂಗಳ ಬಳಿಕ ಆಡಿಯೋವೊಂದು ಹೊರಬಿದ್ದಿದೆ. ಈ ಆಡಿಯೋ ಪೊಲೀಸರತ್ತಲೇ ಅನೇಕ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.ಹುಬ್ಬಳ್ಳಿ ತಾಲೂಕಿನ ಗಂಗಿನಾಳ ನಿವಾಸಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ದೀಪಕ್ ಪಟದಾರಿ, ರಾಜಕೀಯ ನಾಯಕರ ಜೊತೆ ಸಂಪರ್ಕ ಹೊಂದಿದ್ರು. ಆದ್ರೆ, ಕೆಲ ಹಂತಕರು ಕಳೆದ ಜುಲೈನಲ್ಲಿ ದೀಪಕ್ನನ್ನ ಭೀಕರವಾಗಿ ಹತ್ಯೆ ಮಾಡಿದ್ರು. ರಾತ್ರಿ ಹೊತ್ತಲ್ಲಿ ಆಯುಧದಿಂದ ಕೊಚ್ಚಿಕೊಂದಿದ್ರು. ಇದೀಗ, ದೀಪಕ್ ಸಾವಿನ ಹತ್ಯೆ ಹತ್ತಾರು ಸಂಶಯಗಳು ಮೂಡಿವೆ. ಅದ್ರಲ್ಲೂ, ಪೊಲೀಸರತ್ತಲೇ ನೇರಾನೇರಾ ಆರೋಪ ಕೇಳಿ ಬಂದಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪರಶುರಾಮ್ ಕಾಳೆ ಹಾಗೂ ನಾಗರಾಜ್ ಕೆಂಚಮ್ಮನ್ನವರ ಎಂಬ ಸಿಬ್ಬಂದಿ ಮೇಲೆ, ದೀಪಕ್ ಕುಟುಂಬಸ್ಥರು ಹತ್ತಾರು ಆರೋಪ ಮಾಡಿದ್ದಾರೆ. ರಾಜಕೀಯವಾಗಿ ದೀಪಕ್ ಬೆಳೆಯುತ್ತಿದ್ದ ಅಂತಲೇ ಅವರ ಹತ್ಯೆ ನಡೆದಿದೆ. ಆದ್ರೆ, ಪೊಲೀಸ್ ಅಧಿಕಾರಿಗಳು ಆರೋಪಿಗಳ ಬೆನ್ನಲುಬಾಗಿ ನಿಂತಿದ್ದು, ಸಾಕ್ಷಿ ನಾಶ ಮಾಡಿದ್ದಾರೆ ಅಂತ, ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇನ್ನು, ಪತಿಯ ಹತ್ಯೆಯಿಂದ ಕಂಗಾಲಾಗಿರುವ ಗರ್ಭಿಣಿ ಪತ್ನಿ, ನ್ಯಾಯಕ್ಕಾಗಿ ಕಣ್ಣೀರು ಹಾಕ್ತೀದಾರೆ.
ಒಟ್ಟಾರೆ ಗ್ರಾಪಂ ಸದಸ್ಯನ ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಆಡಿಯೋ ಹಾಗೂ ವಾಟ್ಸಪ್ ಮೆಸೆಜ್ ನೋಡಿದ್ರೆ ಪೊಲೀಸರ ಕೈವಾಡದ ಶಂಕೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಗಳು ಇದ್ರತ್ತ ಯಾವ ರೀತಿ ಗಮನ ವಹಿಸ್ತಾರೆ ನೋಡ್ಬೆಕು.
ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಹುಬ್ಬಳ್ಳಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 pm, Wed, 28 September 22