ಹುಬ್ಬಳ್ಳಿ-ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ವಿರುದ್ಧ ಪೇ ಮೇಯರ್ ಅಭಿಯಾನ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್
ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ವಿರುದ್ದ ಕೈ ನಾಯಕರಿಂದ ಪೇ ಮೇಯರ್ ಅಭಿಯಾನ ಆರಂಭಿಸಿದ್ದಾರೆ.
ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ನ ಪೇ ಸಿಎಂ ಅಭಿಯಾನ ಬೆನ್ನಲ್ಲೆ, ಹುಬ್ಬಳ್ಳಿಯಲ್ಲೂ ಪೇ ಮೇಯರ್ (Pay Mayor) ಅಭಿಯಾನ ಶುರುವಾಗಿದ್ದು, ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ವಿರುದ್ದ ಕೈ ನಾಯಕರಿಂದ ಪೇ ಮೇಯರ್ ಅಭಿಯಾನ ಆರಂಭಿಸಿದ್ದಾರೆ. ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಸುಮಾರು 1.5 ಕೋಟಿ ದುಂದು ವೆಚ್ಚ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಲಾಗುತ್ತಿದೆ. ಪೆಂಡಾಲ್ ಹಾಕಿದ ನಂತ್ರ ನೀವು ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ನೀವು ತಕ್ಷಣ ರಾಜೀನಾಮೆ ಕೊಡಿ ಎಂದು ಹೇಳಲಾಗುತ್ತಿದೆ.
ಮಂಡ್ಯ ರೈತರಿಂದ PAY FARMER ಅಭಿಯಾನ
ಇನ್ನೂ ಮಂಡ್ಯ ರೈತರಿಂದ PAY FARMER ಅಭಿಯಾನ’ ಶುರುಮಾಡಲಾಗಿತ್ತು. ಜಿಲ್ಲೆಯ ಸಂಜಯ್ ವೃತ್ತದಲ್ಲಿ ರೈತರು ಅಭಿಯಾನ ಕೈಗೊಂಡಿದ್ದು, ಒಂದು ಟನ್ ಕಬ್ಬಿಗೆ 4500 ರೂ ನಿಗದಿ ಮಾಡುವಂತೆ ರೈತರು ಒತ್ತಾಯಿಸಿದ್ದರು. ಇಲ್ಲದಿದ್ದರೆ ದಸರಾದಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅಭಿಯಾನ ಮಾಡಿದ್ದು, ಸಕ್ಕರೆನಾಡಲ್ಲಿ ಅಭಿಯಾನ ತೀವ್ರ ಕಾವು ಪಡೆದುಕೊಂಡಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೈತರು ಪೋಸ್ಟ್ ಹಿಡಿದು ನಿಂತ್ತಿದ್ದು, KSRTC, ಐರಾವತ, ರಾಜಹಂಸ ಬಸ್ಗಳನ್ನು ತಡೆದು PAY FARMER ಪೋಸ್ಟ್ ಅಂಟಿಸಿದ್ದರು. ಜೊತೆಗೆ ಸರ್ಕಾರದ ವಿರುದ್ದ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮಧುಚಂದನ್, ಪ್ರಸನ್ನಗೌಡ, ಸೇರಿದಂತೆ ಹಲವರು ಭಾಗಿಯಾಗಿದ್ದರು.
ರಾಜಕಾರಣಿಗಳ ವಿರುದ್ಧ ಆಕ್ರೋಶ:
ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳ ವಿರುದ್ದ ರೈತ ಪರ ಸಂಘಟನೆಗಳು ಸಿಡಿದೆದಿದ್ದು, ಕೈ ಕಮಲ ಗದ್ದಲ ಆರೋಪ ಪ್ರತ್ಯಾರೋಪದಿಂದ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಸೆಷನ್ನಲ್ಲಿ ಬರಿ ಪೇ ಸಿಎಂ, ಪೇ ಫಾರ್ ಕಾಂಗ್ರೆಸ್ ಮೇಡಂದೆ ಸದ್ದು ಗದ್ದಲ ಹಿನ್ನಲೆ ಬರಿ ಆರೋಪಗಳನ್ನ ಮಾಡುತ್ತಿರುವ ರಾಜಕಾರಣಿಗಳಿಗೆ ರೈತರು ಧಿಕ್ಕಾರ ಕೂಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸದೆ ಸಮಯ ವ್ಯರ್ಥ ಮಾಡುತ್ತಿರೊ ರಾಜಕಾರಣಿಗಳು ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ರೈತರ ಬಗ್ಗೆ ಕಾಳಜಿ ಹೊಂದಿರದ ರಾಜಕೀಯ ಪಕ್ಷ ಹಾಗೂ ರಾಜಕಾರಣಿಗಳಿಗೆ ಚೀಮಾರಿ ಹಾಕಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.