ಧಾರವಾಡ: ಗಣೇಶ ವಿಸರ್ಜನೆ ವೇಳೆ ಯುವಕನ ಕಣ್ಣಿಗೆ ಚಾಕು ಇರಿದ ಭಯಾನಕ ಘಟನೆ ಧಾರವಾಡದ ಕೆಲಗೇರಿ ಆಂಜನೇಯ ನಗರದಲ್ಲಿ ನಡೆದಿದೆ. ಪ್ರಜ್ವಲ್ ಜಾಧವ್‌ಗೆ ಚಾಕು ಇರಿಯಲಾಗಿದ್ದು, ಚಾಕು ಹುಬ್ಬಿನ ಒಳ ಹೋಗಿದೆ. ಗಾಯಾಳುವಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವೈಯಕ್ತಿಕ ದ್ವೇಷದಿಂದ ಪರಿಚಯಸ್ಥ ಯುವಕರೇ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಒಣಹುಲ್ಲು ತರಲು ಹೋದ ರೈತನ ಮೇಲೆ ಕಾಡುಹಂದಿ ದಾಳಿ
ಕಾರವಾರ: ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾ.ಪಂ ವ್ಯಾಪ್ತಿಯ ದಾನಗೇರಿಯಲ್ಲಿ ಒಣಹುಲ್ಲು ತರಲು ಹೋಗಿದ್ದಾಗ ಕಾಡುಹಂದಿ ದಾಳಿಯಿಂದ ರೈತ ದಯಾನಂದ ದಾನಗೇರಿ ಕಾಲಿಗೆ ಗಾಯವಾಗಿದೆ. ಗಾಯಾಳನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿಯ ಮಗು ಸಾವು
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿಯ ಮಗು ಮೃತಪಟ್ಟ ಘಟನೆ ನಡೆದಿದೆ. ಭಾಗ್ಯಶ್ರೀ ಲಾಯಪ್ಪ ಹೂವಣ್ಣನವರ (5) ಮೃತ ಬಾಲಕಿ. ತೆನ್ನಿಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಕುರಿ ಮೇಯಿಸಲು ತಂದೆ ಲಾಯಪ್ಪನೊಂದಿಗೆ ಮೃತ ಬಾಲಕಿ ಹೋಗಿದ್ದಳು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಕಂಬದ ತಂತಿ ಸ್ಪರ್ಶಿಸಿ ಬಾಲಕಿ ಮೃತಪಟ್ಟಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:02 pm, Sat, 10 September 22