AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರ ಲೋಕಾಯುಕ್ತಕ್ಕೆ ಬರೀ ಅಧಿಕಾರ ನೀಡಿದರೆ ಸಾಲದು ಸೂಕ್ತ ಸಿಬ್ಬಂದಿ ನೀಡಬೇಕು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ಸರ್ಕಾರ ಲೋಕಾಯುಕ್ತಕ್ಕೆ (Lokayukta) ಬರೀ ಅಧಿಕಾರ ನೀಡಿದರೆ ಸಾಲದು ಸೂಕ್ತ ಸಿಬ್ಬಂದಿ ನೀಡಬೇಕು ಎಂದು ನಿವೃತ್ತ ಲೋಕಾಯುತ್ತ ನ್ಯಾ. ಸಂತೋಷ್ ಹೆಗ್ಡೆ (Santosh Hegade) ಧಾರವಾಡದಲ್ಲಿ ಹೇಳಿದ್ದಾರೆ.

ಸರ್ಕಾರ ಲೋಕಾಯುಕ್ತಕ್ಕೆ ಬರೀ ಅಧಿಕಾರ ನೀಡಿದರೆ ಸಾಲದು ಸೂಕ್ತ ಸಿಬ್ಬಂದಿ ನೀಡಬೇಕು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ
TV9 Web
| Updated By: ವಿವೇಕ ಬಿರಾದಾರ|

Updated on: Sep 11, 2022 | 7:19 PM

Share

ಧಾರವಾಡ: ಸರ್ಕಾರ ಲೋಕಾಯುಕ್ತಕ್ಕೆ (Lokayukta) ಬರೀ ಅಧಿಕಾರ ನೀಡಿದರೆ ಸಾಲದು ಸೂಕ್ತ ಸಿಬ್ಬಂದಿ ನೀಡಬೇಕು ಎಂದು ನಿವೃತ್ತ ಲೋಕಾಯುತ್ತ ನ್ಯಾ. ಸಂತೋಷ್ ಹೆಗ್ಡೆ (Santosh Hegde) ಧಾರವಾಡದಲ್ಲಿ (Dharwad) ಹೇಳಿದ್ದಾರೆ. ರಾಜ್ಯ ಸರ್ಕಾರ ಎಸಿಬಿ ಸಂಸ್ಥೆಯನ್ನು ರದ್ದುಗೊಳಿಸಿ ಲೋಕಾಯುಕ್ಕೆ ಸಂಪೂರ್ಣ ಅಧಿಕಾರ ನೀಡಿದ ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿದ ಅವರು ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸಬೇಕಿದೆ. ಲೋಕಾಯುಕ್ತಕ್ಕೆ ಈ ಹಿಂದೆ ಇದ್ದ ಅಧಿಕಾರ ಮತ್ತೆ ನೀಡಬೇಕು ಎಂದು ಒತ್ತಾಯಿಸಿದರು.

ಲೋಕಾಯುಕ್ತ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳು ಆಗಬೇಕಿದೆ. ಲೋಕಾಯುಕ್ತ ತಿದ್ದುಪಡಿಗೆ ಸಲಹೆ ಕೇಳಿದರೆ ಕೊಡುವೆ. ನಾನು ಲೋಕಾಯುಕ್ತದಲ್ಲಿ 5 ವರ್ಷ ಕೆಲಸ ಮಾಡಿದ್ದೇನೆ. ನನಗೆ ಈಗ 83 ವರ್ಷ ವಯಸ್ಸಾಯಿತು ಹೀಗಾಗಿ ನನಗೆ ಯಾವುದೇ ಅಧಿಕಾರ ಬೇಡ ಎಂದು ಹೇಳಿದರು.

1983ರಲ್ಲಿ ಜನತಾ ಪಕ್ಷ ಲೋಕಾಯುಕ್ತವನ್ನು ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಬಲಿಷ್ಠವಾದ ಲೋಕಾಯುಕ್ತ ಸಂಸ್ಥೆ ಕಟ್ಟಿದ್ದರು. ಆದರೆ ಮೊದಲಿನ ಹತ್ತು ವರ್ಷ ಏನೂ ನಡೆದಿರಲಿಲ್ಲ. ಎನ್‌. ವೆಂಕಟಾಚಲಯ್ಯ ಲೋಕಾಯುಕ್ತದ ಶಕ್ತಿ ತೋರಿಸಿದರು. ಆ ಬಳಿಕ ನಾನು ಅವರ ಕೆಲಸ ಮುಂದುವರೆಸಿಕೊಂಡು ಹೋಗಿದ್ದೆ. ಅದರ ಪರಿಣಾಮ ಬಹಳ ಆಯ್ತು ಎಂದು ತಿಳಿಸಿದರು.

ಹೀಗಾಗಿ ಲೋಕಾಯುಕ್ತ ಅಧಿಕಾರ ಕಿತ್ತುಕೊಂಡರು. ದುರ್ಬಲಗೊಳಿಸು ಪ್ರಯತ್ನ ಮಾಡಿದರು. ಯಾಕೆಂದರೆ ಲೋಕಾಯುಕ್ತವನ್ನು ಮುಚ್ಚುವ ಧೈರ್ಯ ಸರ್ಕಾರಕ್ಕೆ ಇರಲಿಲ್ಲ. ಹೀಗಾಗಿ ದುರ್ಬಲಗೊಳಿಸುವ ಯತ್ನ ಮಾಡಿದರು. ಆದರೆ ಅದು ಸಫಲವಾಗಲಿಲ್ಲ ಎಂದು ತಿಳಿಸಿದ್ದಾರೆ.

ಆಗ ಭ್ರಷ್ಟ ಅಧಿಕಾರಿಗಳನ್ನೆ ತಂದಿಟ್ಟಿದ್ದರು. ಆದೂ ಆಗದೇ ಇದ್ದಾಗ ಎಸಿಬಿ ಕಟ್ಟಿದ್ದರು. ಎಸಿಬಿ ಸೃಷ್ಟಿ ಮಾಡಿದ್ದೆ ಭ್ರಷ್ಟಾಚಾರ ವಿರುದ್ಧ ಹೋರಾಟ ಅಂತ್ಯ ಹಾಡಲು. ಆದರೆ ಈಗ ಎಸಿಬಿ ಹೋಗಿ ಪುನಃ ಲೋಕಾಯುಕ್ತ ಬಂತು. ಲೋಕಾಯುಕ್ತಕ್ಕೆ ಬೇಕಾದ ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ಸಲಾಂ ಹೇಳುವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ