Guinness Record 2023: 4,05,255 ಜನರಿಂದ ಯೋಗ, ಗಿನ್ನೇಸ್ ದಾಖಲೆಗೆ ಸೇರ್ಪಡೆಯಾದ ಯೋಗಾಥಾನ್
ಇಂದು ರಾಜ್ಯದ 4,05,255 ಜನರು ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡುವ ಮೂಲಕ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಗಿನ್ನೇಸ್ ದಾಖಲೆ ಮಾಡಲಾಗಿದೆ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ.ಕೆ.ಸಿ. ನಾರಾಯಣಗೌಡ ಹೇಳಿದ್ದಾರೆ.
ಧಾರವಾಡ: ಕರ್ನಾಟಕ ರಾಜ್ಯವು ಯೋಗಾಥಾನ್‍ದಲ್ಲಿ (Yogathon 2o23 ಗಿನ್ನೇಸ್ ದಾಖಲೆಗೆ ಸೇರ್ಪಡೆಗೊಳಿಸಲು ಯೋಗಾಸನದ ವಿಶೇಷ ಪ್ರದರ್ಶನ ಆಯೋಜಿಸಲು ಕಳೆದ ಎಂಟು ತಿಂಗಳಿಂದ ರಾಜ್ಯ ಯುವ ಜನ ಸೇವಾ ಹಾಗೂ ಕ್ರೀಡಾ ಇಲಾಖೆಯು ನಿರಂತರವಾಗಿ ಶ್ರಮಿಸಿತ್ತು. ಅದರಂತೆ ಇಂದು ರಾಜ್ಯದಲ್ಲಿ ಏಕಕಾಲದಲ್ಲಿ ನಡೆದ ಯೋಗಾಥಾನ್‍ನಲ್ಲಿ 4,05,255 ಜನರು ಭಾಗಿಯಾಗುವ ಮೂಲಕ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಗಿನ್ನೇಸ್ ದಾಖಲೆ (Guinness Record 2023) ಮಾಡಲಾಗಿದೆ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅವರು ತಿಳಿಸಿದ್ದಾರೆ.
ಯೋಗಾಥಾನ್ ಕುರಿತು ಇಂದು ಧಾರವಾಡದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಧಾರವಾಡದಲ್ಲಿ ಆಯೋಜನೆಯಾಗಿರುವ 26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಯೋಗಾಥಾನ ಸಂಘಟಿಸಲಾಗಿತ್ತು. ಯೋಗಾಥಾನದಲ್ಲಿ ಭಾಗವಹಿಸಲು ರಾಜ್ಯದ ಸುಮಾರು 14 ಲಕ್ಷ ಯೋಗಪಟುಗಳು, ಯೋಗಾಸಕ್ತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಇಂದು ಜರುಗಿದ ಯೋಗಾಥಾನದಲ್ಲಿ ಏಕಕಾಲಕ್ಕೆ ರಾಜ್ಯದ 4,05,255 ಜನ ಭಾಗವಹಿಸಿ ಯೋಗಾಥಾನದಲ್ಲಿ ಗಿನ್ನೇಸ್ ದಾಖಲೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಡೆದ ಪ್ರಧಾನಿ ಕಾರ್ಯಕ್ರಮ ಐತಿಹಾಸಿಕ ದಾಖಲೆ: ಧಾರವಾಡ ಜಿಲ್ಲೆ ಜನರಿಗೆ ಧನ್ಯವಾದ ಹೇಳಿದ ಜೋಶಿ
ಇಂದಿನ ಬೃಹತ್ ಯೋಗಾಥಾನ್‍ನಲ್ಲಿ ಧಾರವಾಡ ಜಿಲ್ಲೆಯ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮೈದಾನದಲ್ಲಿ 5904 ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಮೈದಾನದಲ್ಲಿ 3405, ಆರ್ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ 4769 ಹಾಗೂ ವಿದ್ಯಾಗಿರಿಯ ಜೆಎಸ್‍ಎಸ್ ಕಾಲೇಜು ಮೈದಾನದಲ್ಲಿ 3769 ಹಾಗೂ ಹುಬ್ಬಳ್ಳಿಯ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ 6076 ಸೇರಿ ಒಟ್ಟು ಧಾರವಾಡ ಜಿಲ್ಲೆಯ 5 ಸ್ಥಳಗಳಿಂದ 23,923 ಜನ ಏಕಕಾಲದಲ್ಲಿ ಯೋಗಾಸನ ಪ್ರದರ್ಶನ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಿವಿವಿಎಸ್ ಕಾಲೇಜು ಮೈದಾನದಲ್ಲಿ 16,632 ಮತ್ತು ಬೆಳಗಾವಿಯ ಆರ್ಮಿ ಗಾಲ್ಫ್ ಕೋರ್ಸ್ ಮೈದಾನದಲ್ಲಿ 41,914 ಹಾಗೂ ಸುವರ್ಣಸೌಧದ ಮುಂದೆ 17,712 ಮತ್ತು ಬಳಾರಿಯ ಏರ್‍ಪೋರ್ಟ್ ಮೈದಾನಲ್ಲಿ 11,847 ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ 8,446, ರೇವಾ ವಿಶ್ವವಿದ್ಯಾಲಯ ಆವರಣದಲ್ಲಿ 4,798 ಬೀದರದ ಜಿಲ್ಲಾ ಕ್ರೀಡಾಂಗಣದಲ್ಲಿ 1,980, ಚಾಮರಾಜನಗರ ಜಿಲ್ಲಾ ಕ್ರೀಡಾಂಗಣದಲ್ಲಿ 6,843, ಚಿಕ್ಕಬಳ್ಳಾಪುರ ಎಸ್‍ಜೆಸಿಐಟಿ ಕಾಲೇಜು ಮೈದಾನದಲ್ಲಿ 9256, ಚಿತ್ರದುರ್ಗ ಜಿಲ್ಲಾ ಕ್ರೀಡಾಂಗಣದಲ್ಲಿ 8,675 ಮಂದಿ ಯೋಗಾಸನ ಮಾಡಿದರು.
ದಕ್ಷಿಣ ಕನ್ನಡ ಮೂಡಬಿದರೆ ಆಳ್ವಾಸ ಕಾಲೇಜು ಮೈದಾನದಲ್ಲಿ 31,986, ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ 11,808, ಗದಗ ಎಎಸ್‍ಎಸ್ ಆರ್ಟ್ಸ್ ಕಾಲೇಜು ಮೈದಾನದಲ್ಲಿ 7842, ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ 6,544, ಕಲಬುರ್ಗಿಯ ಪೊಲೀಸ್ ಪೆರೆಡ್ ಮೈದಾನದಲ್ಲಿ 16,064 ಮತ್ತು ಎನ್‍ವಿ ಕಾಲೇಜು ಮೈದಾನದಲ್ಲಿ 4,461, ಕೋಲಾರದ ಶ್ರೀ ಎಂ.ವಿ. ಕ್ರೀಡಾಂಗಣದಲ್ಲಿ 16,451, ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 9781, ಮಂಡ್ಯ ಪಿಇಎಸ್ ಕ್ರೀಕೇಟ್ ಮೈದಾನದಲ್ಲಿ 8,892, ಮೈಸೂರು ಗಾಲ್ಫ್ ಕೋರ್ಸ್ ಮೈದಾನದಲ್ಲಿ 41,042 ಮಂದಿ ಯೋಗಾಸನ ಮಾಡಿದರು.
ಇದನ್ನೂ ಓದಿ: National Youth Fest: ಧಾರವಾಡ ಕೆ.ಸಿ.ಡಿ ಕ್ರೀಡಾಂಗಣದಲ್ಲಿ ಆಹಾರ ಮೇಳ, ಒಂದೇ ಸೂರಿನಡಿ ದೇಶದ ಎಲ್ಲಾ ರಾಜ್ಯಗಳ ತಿಂಡಿ ತಿನಿಸು
ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿ 6842, ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ 5654, ಶಿವಮೊಗ್ಗ ನೆಹರು ಮೈದಾನದಲ್ಲಿ 11,743, ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ 10,083, ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯ ಮೈದಾನದಲ್ಲಿ 14,564, ಉತ್ತರ ಕನ್ನಡ ತಾಲೂಕು ಜಿಲ್ಲೆಯ ಭಟ್ಕಳ ತಾಲೂಕಾ ಮೈದಾನದಲ್ಲಿ 3594, ವಿಜಯಪುರ ಸೈನಿಕ ಶಾಲೆಯ ಮೈದಾನದಲ್ಲಿ 36,644 ಹಾಗೂ ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ 9,234 ಜನರು ಇಂದು ಯೋಗಾಸನ ಮಾಡಿದ್ದಾರೆ.
ಒಟ್ಟಾರೆಯಾಗಿ ರಾಜ್ಯದ ವಿವಿಧ ಜಿಲ್ಲೆಗಳ 33 ಸ್ಥಳಗಳಲ್ಲಿ ಏಕಕಾಲಕ್ಕೆ 4,05,255 ಜನ ಯೋಗಾಸನ ಮಾಡಿದ್ದಾರೆ. ಈಗಾಗಲೇ 2018ರಲ್ಲಿ ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ 1,00,984 ಜನ ಯೋಗ ಮಾಡುವ ಮೂಲಕ ಗಿನ್ನೇಸ್ ದಾಖಲೆ ಮಾಡಿದ್ದರು. ಇದಕ್ಕೂ ಮೊದಲು 2017ರಲ್ಲಿ ನಮ್ಮ ರಾಜ್ಯದ ಮೈಸೂರು ನಗರದಲ್ಲಿ ಏಕಕಾಲಕ್ಕೆ 55,524 ಜನ ಯೋಗ ಪ್ರದರ್ಶನ ಮಾಡುವ ಮೂಲಕ ಗಿನ್ನೇಸ್ ದಾಖಲೆ ಬರೆಯಲಾಗಿತ್ತು.
ಆದರೆ ಈಗ ಇಡೀ ಕರ್ನಾಟಕ ರಾಜ್ಯದ 33 ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ 4,05,255 ಜನ ಯೋಗಾಸನ ಪ್ರದರ್ಶಿಸುವ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಅಳಸಿ, ಹೊಸದಾಗಿ ಗಿನ್ನೇಸ್ ದಾಖಲೆ ಬರೆಯಲಾಗಿದೆ. ರಾಜಸ್ಥಾನದಲ್ಲಿ ಯೋಗ ಪ್ರದರ್ಶಿಸಿದವರಿಗಂತ ಹೆಚ್ಚಿನ ಸಂಖ್ಯೆ ಅಂದರೆ ಮೂರುಪಟ್ಟು ಹೆಚ್ಚು ಜನ ಏಕಕಾಲಕ್ಕೆ ಶಿಸ್ತುಬದ್ಧವಾಗಿ, ಶಾಂತವಾಗಿ, ನಿಯಮಾನುಸಾರ ಯೋಗ ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ ಎಂದು ಸಚಿವ ನಾರಾಯಣಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Sun, 15 January 23