AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿವೈಡರ್​ಗೆ ಡಿಕ್ಕಿಯಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು: ಲೋಕಾಯುಕ್ತ ಇನ್ಸ್​ಪೆಕ್ಟರ್ ಸಜೀವ ದಹನ

ರಸ್ತೆ ಅಪಘಾತದಲ್ಲಿ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಸಾವನ್ನಪ್ಪಿದ್ದ ಸುದ್ದಿ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘಟನೆ ಧಾರವಾಡದಲ್ಲಿ ನಡೆದಿದೆ. ಹೌದು.ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಡಿವೈಡರ್​ಗೆ ಡಿಕ್ಕಿಯಾಗಿ ಬಳಿಕ ನಡುರಸ್ತೆಯಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್​ಪೆಕ್ಟರ್​​​ ಸಜೀವ ದಹನವಾಗಿರುವ ದಾರೂಣ ಘಟನೆ ನಡೆದಿದೆ. ಹಾಗಾದ್ರೆ, ಈ ದುರ್ಘಟನೆ ಸಂಭವಿಸಿದ್ದೆಲ್ಲಿ? ಹೇಗಾಯ್ತು ಎನ್ನುವ ವಿವರ ಈ ಕೆಳಗಿನಂತಿದೆ.

ಡಿವೈಡರ್​ಗೆ ಡಿಕ್ಕಿಯಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು: ಲೋಕಾಯುಕ್ತ ಇನ್ಸ್​ಪೆಕ್ಟರ್ ಸಜೀವ ದಹನ
Sp Salimath
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:Dec 05, 2025 | 11:02 PM

Share

ಧಾರವಾಡ, (ಡಿಸೆಂಬರ್ 04):  ಕಾರೊಂದು ಡಿವೈಡರ್​ಗೆ ಡಿಕ್ಕಿಯಾಗಿ ಬಳಿಕ ನಡುರಸ್ತೆಯಲ್ಲೇ ಹೊತ್ತಿ ಉರಿದಿದ್ದು, ಇದರಲ್ಲಿ ಲೋಕಾಯುಕ್ತ ಇನ್ಸ್​​ಪೆಕ್ಟರ್ (Lokayukta Inspector)  ಸಜೀವ ದಹನವಾಗಿದ್ದಾರೆ. ಧಾರವಾಡ (Dharwad) ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಾವೇರಿ ಲೋಕಾಯುಕ್ತ ಇನ್ಸ್​​ಪೆಕ್ಟರ್​​​ ಆಗಿದ್ದ ಪಂಚಾಕ್ಷರಿ ಸಾಲಿಮಠ ಅವರು ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಸಾಲಿಮಠ ಅವರು ಇಂದು (ಡಿಸೆಂಬರ್ 05) ಐ20 ಕಾರಿನಲ್ಲಿ ಗದಗ ಕಡೆ ಹೊರಟ್ಟಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬಳಿಕ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.

ಡಿವೈಡರ್​​ಗೆ ಡಿಕ್ಕಿಯಾಗಿ ಬಳಿಕ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಧಗಧಗ ಹೊತ್ತಿ ಉರಿದಿದೆ. ಇದರಿಂದ ಇನ್ಸ್​ಪೆಕ್ಟರ್ PS ಸಾಲಿಮಠ ಅವರಿಗೆ ​​ ಲಾಕ್ ತೆಗೆದು ಹೊರಬರಲಾಗದೇ ಕಾರಿನೊಳಗೆ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಬೆಂಕಿ ಹೊತ್ತಿಕೊಂಡು ನೋಡುತ್ತಿದ್ದಂತೆಯೇ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದ್ರೆ, ಅಷ್ಟರೊಳಗೆ ಇನ್ಸ್​ಪೆಕ್ಟರ್​ ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ.

ಇದನ್ನೂ ಓದಿ: ಕಾರು ಅಪಘಾತ: ಕರ್ನಾಟಕ ಹಿರಿಯ IAS ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಾವು!

PS ಸಾಲಿಮಠ ಅವರು ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು. ಗದಗದಲ್ಲಿ ಇರುವ ಕುಟುಂಬವನ್ನು ಭೇಟಿ ಮಾಡುಲು ಹೋಗುತ್ತಿದ್ದರು. ಆದ್ರೆ, ವಿಧಿ ಅವರನ್ನು ಅರ್ಧ ಹಾದಿಯಲ್ಲೇ ಈ ರೀತಿ ಬಲಿಪಡೆದುಕೊಂಡಿದೆ.

ಮೊನ್ನೆ ಅಷ್ಟೇ  ಕರ್ನಾಟಕ ಹಿರಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಪ್ರಕಣ ಮಾಸುವ ಮುನ್ನೇ ಕಾರು ಅಪಘಾತದಲ್ಲಿ ಲೋಕಾಯುಕ್ತ ಇನ್ಸ್​ಪೆಕ್ಟರ್​​ ಬಲಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:42 pm, Fri, 5 December 25