AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕ ಚುನಾವಣೆ ಮಧ್ಯೆ ಗಂಡು ಮೆಟ್ಟಿದ ನಾಡಿನಲ್ಲಿ ಜಗ್ಗಲಗಿ ಹಬ್ಬದ ಸಂಭ್ರಮ ಏನಿದರ ವಿಶೇಷ?

ಇಂತಹ ಸಂಭ್ರಮದಲ್ಲಿ ಹಲಗೆ ಬಾರಿಸೋದರ ಮೂಲಕ ಕೇಂದ್ರ ಸಚಿವ ಜೋಶಿ ಹಬ್ಬಕ್ಕೆ ಚಾಲನೆ ನೀಡಿದರು. ಇನ್ನೊಂದು ಕಡೆ ಎಲ್ಲಿ ನೋಡಿದರೂ ಹಲಗೆ ವಾದ್ಯಗಳ ಸದ್ದು.. ಇನ್ನು ಸುತ್ತಲುತ್ತಲೂ ಜಗ್ಗಲಗಿ ಹಬ್ಬವನ್ನು ಕಣ್ತುಂಬಿಕೊಳ್ಳಲು ಬಂದ ಜನ. ಇವೆಲ್ಲ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ನಿನ್ನೆ ಗುರುವಾರ 12 ನೇ ವರ್ಷದ ಜಗ್ಗಲಗಿ ಹಬ್ಬಕ್ಕೆ ಚಾಲನೆ ನೀಡಲಾಯ್ತು.

ಲೋಕ ಚುನಾವಣೆ ಮಧ್ಯೆ ಗಂಡು ಮೆಟ್ಟಿದ ನಾಡಿನಲ್ಲಿ ಜಗ್ಗಲಗಿ ಹಬ್ಬದ ಸಂಭ್ರಮ ಏನಿದರ ವಿಶೇಷ?
ಗಂಡು ಮೆಟ್ಟಿದ ನಾಡಿನಲ್ಲಿ ಜಗ್ಗಲಗಿ ಹಬ್ಬದ ಸಂಭ್ರಮ ಏನಿದರ ವಿಶೇಷ?
Follow us
ಸಾಧು ಶ್ರೀನಾಥ್​
|

Updated on: Mar 29, 2024 | 3:39 PM

ಯಾವುದೇ ಹಬ್ಬ ಹರಿದಿನ ಬಂದರೂ ಹುಬ್ಬಳ್ಳಿಯಲ್ಲಿ ಮಾತ್ರ ವಿನೂತನ ರೀತಿಯಲ್ಲಿ ಆಚರಣೆ ಮಾಡುವುದು ವಿಶೇಷ. ಅದರಲ್ಲೂ ಗಂಡು ಮೆಟ್ಟಿದ ನಾಡಿನಲ್ಲಿ ಗಂಡುಮಕ್ಕಳ ಪ್ರಿಯವಾದ ಹೋಳಿ ಹಬ್ಬದ ಆಚರಣೆ ಅಂದರೆ ಅದರ ಝಲಕ್ ಬೇರೆಯದ್ದೇ ಆಗಿರುತ್ತದೆ. ಈ ನಿಟ್ಟಿನಲ್ಲಿ ಹೋಳಿ ಹಬ್ಬದ ಪ್ರಯುಕ್ತವಾಗಿ ಹಮ್ಮಿಕೊಳ್ಳಲಾಗಿದ್ದ ಜಗ್ಗಲಗಿ ಹಬ್ಬ (Hubballi Jaggalagi Habba-2024) ವಿಶಿಷ್ಟ ಹಾಗೂ ವಿನೂತನ ರೀತಿಯಲ್ಲಿ ನಡೆಯಿತು. ಹುಬ್ಬಳ್ಳಿಯ‌ (Hubballi) ಜಗ್ಗಲಗಿ ಹಬ್ಬದ ಝಲಕ್‌ ಇಲ್ಲಿದೆ ನೋಡಿ.. ಇಂತಹ ಸಂಭ್ರಮದಲ್ಲಿ ಹಲಗೆ ಬಾರಿಸೋದರ ಮೂಲಕ ಕೇಂದ್ರ ಸಚಿವ ಜೋಶಿ (Pralhad joshi) ಹಬ್ಬಕ್ಕೆ ಚಾಲನೆ ನೀಡಿದರು. ಇನ್ನೊಂದು ಕಡೆ ಎಲ್ಲಿ ನೋಡಿದರೂ ಹಲಗೆ ವಾದ್ಯಗಳ ಸದ್ದು.. ಇನ್ನು ಸುತ್ತಲುತ್ತಲೂ ಜಗ್ಗಲಗಿ ಹಬ್ಬವನ್ನು ಕಣ್ತುಂಬಿಕೊಳ್ಳಲು ಬಂದ ಜನ. ಇವೆಲ್ಲ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ನಿನ್ನೆ ಗುರುವಾರ 12 ನೇ ವರ್ಷದ ಜಗ್ಗಲಗಿ ಹಬ್ಬಕ್ಕೆ ಚಾಲನೆ ನೀಡಲಾಯ್ತು (Holi 2024).

ಮೂರುಸಾವಿರಮಠದ (Moorusavir Math) ಗುರು ಸಿದ್ದ ರಾಜಯೋಗಿಂದ್ರ ಸ್ವಾಮೀಜಿ ಸೇರಿ ಗಂಡು ಮೆಟ್ಟಿದ ನಾಡಿನಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು ಜಗ್ಗಲಗಿ ಹಬ್ಬದಲ್ಲಿ ಸಾಕ್ಷಿಯಾಗಿದ್ರು. ಹೌದು.. ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಹೋಳಿ ಹಬ್ಬದ ಅಂಗವಾಗಿ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ಮೂರು ಸಾವಿರ ಮಠದ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು.

ಜಗ್ಗಲಗಿ ಹಬ್ಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಆಯೋಜಕರಾದ ಮಹೇಶ ಟೆಂಗಿನಕಾಯಿ ಹಾಗೂ ಮೂಜಗು ಸ್ವಾಮೀಜಿ ನೇತೃತ್ವದಲ್ಲಿ ಹಲಗೆ ಬಾರಿಸೋದರ ಮೂಲಕ ಚಾಲನೆ ನೀಡಿದರು. ನಾಡಿನ ಮೂಲೆ ಮೂಲೆಯಿಂದ ಹಲಗೆ ವಾದ್ಯಗಳ ತಂಡದವರು ಇಂದು ಹುಬ್ಬಳ್ಳಿಗೆ ಆಗಮಿಸಿದ್ರು. ದೊಡ್ಡ ದೊಡ್ಡ ಹಲಗೆಗಳ ಮೂಲಕ ಜಗ್ಗಲಗಿ ಹಬ್ಬದ ಕಳೆ ಹೆಚ್ಚಿಸಿದ್ರು. ಇನ್ನು ಶಾಸಕ ಮಹೇಶ್ ಟೆಂಗಿನಕಾಯಿ ವಾದ್ಯದ ಸದ್ದಿಗೆ ಸಖತ್ ಸ್ಟೆಪ್ಸ್​​ ಹಾಕಿದ್ರು. ಇನ್ನು ನಿನ್ನೆ ದಿಂಗಾಲೇಶ್ವರ ಶ್ರೀಗಳು ಜೋಶಿ ವಿರುದ್ದ ಮಾತಾನಾಡಿದ ಹಿನ್ನಲೆ ಜೋಶಿ ಹೆಚ್ಚು ಹೊತ್ತು ಸ್ವಾಮೀಜಿ ಜೊತೆ ಕಳೆದರು.

ಈಗಾಗಲೇ ಕಳೆದ 11 ವರ್ಷಗಳಿಂದ ವಿವಿಧ ಗ್ರಾಮಗಳ ಹಾಗೂ ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳ ಜಗ್ಗಲಗಿ ತಂಡಗಳ ಸಹಾಯ, ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜಗ್ಗಲಗಿ ಹಬ್ಬವನ್ನು ಆಚರಿಸುತ್ತಾ ಬರಲಾಗಿದೆ. ಅದರಂತೆ ಈ ವರ್ಷವೂ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ನೂರಾರು ಜಗ್ಗಲಗಿ, ವಿವಿಧ ಚರ್ಮವಾದ್ಯಗಳ ಇಂಪಾದ ನಾದದೊಂದಿಗೆ, ಜಾನಪದ ಕಲಾವಿದರ ಸಾರಥ್ಯದಲ್ಲಿ ಮೂರುಸಾವಿರಮಠದ ಮೈದಾನದಿಂದ ಮೆರವಣಿಗೆ ಆರಂಭಗೊಂಡು ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬ್ರಾಡ್ ವೇ, ದುರ್ಗಲ ಬಯಲು ವೃತ್ತ, ರಾಧಾಕೃಷ್ಣ ಗಲ್ಲಿ, ಬಾರದಾನ ಸಾಲ, ಜವಳಿ ಸಾಲ, ಬೆಳಗಾಂವ್ ಗಲ್ಲಿ, ಪೆಂಡಾರ್ ಗಲ್ಲಿ, ಶ್ರೀ ತುಳಜಾಭವಾನಿ ವೃತ್ತ, ದಾಜಿಬಾನಪೇಟ ಮಾರ್ಗವಾಗಿ ಪುನಃ ಮೂರುಸಾವಿರಮಠವನ್ನು ತಲುಪಿತು.

Akshaya Tritiya: ಅಕ್ಷಯ ತೃತೀಯ ಆಚರಣೆ ಹೇಗೆ ಮಾಡಬೇಕು ತಿಳಿಯಿರಿ
Akshaya Tritiya: ಅಕ್ಷಯ ತೃತೀಯ ಆಚರಣೆ ಹೇಗೆ ಮಾಡಬೇಕು ತಿಳಿಯಿರಿ
ಅಕ್ಷಯ ತೃತೀಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಅಕ್ಷಯ ತೃತೀಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು