
ಹುಬ್ಬಳ್ಳಿ, ಮಾ.28: ನಾಳೆ(ಮಾ.29) ಹುಬ್ಬಳ್ಳಿ(Hubballi)ಯಲ್ಲಿ ಹೋಳಿ ಹುಣ್ಣಿಮೆ(Holi Hunnime) ಹಿನ್ನಲೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಹೋಳಿ ಹುಣ್ಣಿಮೆ ಮುಂಜಾಗ್ರತೆ ಕುರಿತು ಮಾತನಾಡಿದ ಅವರು, ‘ಕಾಮಣ್ಣನ ಪ್ರತಿಷ್ಠಾಪನೆ ಮಾಡಿದ ಸುತ್ತಮುತ್ತಲ ವಿವಿಧ ಪ್ರದೇಶದಲ್ಲಿ 250 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಈ ಕುರಿತು ಕಳೆದ ಒಂದು ತಿಂಗಳಿಂದ ನಾವು ಮುಂಜಾಗ್ರತೆ ವಹಿಸಿದ್ದೇವೆ ಎಂದರು.
ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 3000 ಕ್ಕೂ ಅಧಿಕ ಪೊಲೀಸರಿದ್ದಾರೆ. ನಾಳೆ ಹೋಳಿ ಹಿನ್ನಲೆ 15 ಕೆಎಸ್ಆರ್ಪಿ ತುಕಡಿ ಜೊತೆಗೆ ಸಿಐಎಸ್ಎಫ್ ತುಕುಡಿ ಕೂಡ ನಿಯೋಜನೆ ಮಾಡಲಾಗಿದೆ. ಹಬ್ಬ ಎನ್ನುವುದು ಸಂತೋಷವಾಗಿ ಆಚರಣೆ ಮಾಡಬೇಕು. ಪೊಲೀಸರು ಕೂಡ ಹಬ್ಬ ಆಚರಣೆ ಮಾಡಲು ಸಹಕಾರ ಕೊಡುತ್ತೇವೆ. ಆದರೆ. ಈಗ ಎಸ್ಎಸ್ಎಲ್ಸಿ ಪರೀಕ್ಷಾ ಸಮಯವಾದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಹೋಳಿ ಆಚರಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಹುಬ್ಬಳ್ಳಿಯ ಹಲವು ಕಡೆಗಳಲ್ಲಿ ಪ್ರತಿಷ್ಠಾಪಿಸುವ ಕಾಮಣ್ಣನ ಮೂರ್ತಿಗಳದ್ದು ಹಲವು ವಿಶೇಷಗಳಿವೆ. ಅದರಲ್ಲೂ ಹಳೇ ಮೇದಾರ ಓಣಿಯ ಕಾಮಣ್ಣನು ಅತೀ ಹೆಚ್ಚು ಪ್ರಸಿದ್ಧಿ ಹೊಂದಿದ್ದು, 18 ಅಡಿ ಎತ್ತರ ಹಾಗೂ 17 ಅಡಿ ಅಗಲದ ಕಾಮಣ್ಣನನ್ನು ಬಿದಿರಿನಿಂದ ತಯಾರಿಸಿ ಪೂಜಿಸಲಾಗುತ್ತದೆ.ಇನ್ನು ತಾಡಪತ್ರಿ ಓಣಿಯ ಮೂರ್ತಿಗಳು 100 ವರ್ಷಕ್ಕೂ ಅಧಿಕ ಹಳೆಯ ಮೂರ್ತಿಗಳಾಗಿವೆ. ಈ ಕಾಮಣ್ಣನಿಗೆ ನಿತ್ಯ ವಿಶೇಷ ಪೂಜೆ ನೆರವೇರುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Thu, 28 March 24