ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಕಮಿಷನ್ ಆರೋಪ: ಪ್ರಧಾನಿ ಕಚೇರಿ ಕದ ತಟ್ಟುವ ಎಚ್ಚರಿಕೆ
ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಕಮಿಷನ್ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪ್ರಧಾನಿ ಕಚೇರಿ ಕದ ತಟ್ಟುವ ಎಚ್ಚರಿಕೆ ನೀಡಲಾಗಿದೆ.
ಹುಬ್ಬಳ್ಳಿ: ಈ ಹಿಂದೆ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ 40% ಕಮೀಷನ್ ಆರೋಪ ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬೊಮ್ಮಾಯಿ ಸರ್ಕಾರ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಅಲ್ಲದೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಹೌದು….ಸಿವಿಲ್ ಕಾಂಟ್ರಾಕ್ಟರ್ ಸಂಘ 40 ಪರ್ಸೆಂಟ್ ಆರೋಪ ಮಾಡಿದ್ರೆ, ಇದೀಗ ಚುನಾವಣೆ ಭರಾಟೆ ಮಧ್ಯೆ ಹೆಸ್ಕಾಂ ಗುತ್ತಿಗೆದಾರರಿಂದ ಹೆಸ್ಕಾಂ ಎಂಡಿ ವಿರುದ್ಧ 25% ಕಮಿಷನ್ ಆರೋಪ ಕೇಳಿಬಂದಿದೆ. 25% ಕಮಿಷನ್ ಪಡೆದು ಹೊರರಾಜ್ಯದವರಿಗೆ ಟೆಂಡರ್ ಆರೋಪಿಸಿದ್ದು, ಈ ಸಂಬಂಧ ರಾಜ್ಯ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
ಈ ಬಗ್ಗೆ ಇಂದು(ನವೆಂಬರ್ 24) ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ ಹೆಸ್ಕಾಂ ಗುತ್ತಿಗೆದಾರರು, 25% ಕಮಿಷನ್ ಪಡೆದು ಹೊರ ರಾಜ್ಯದ ಗುತ್ತಿಗೆದಾರರಿಗೆ 472ಕೋಟಿ ರೂ. ಟೆಂಡರ್ ನೀಡಿದ್ದಾರೆ ಎಂದು HESCOM ಎಂಡಿ ಗಂಭೀರ ಆರೋಪ ಮಾಡಿದರು.
472ಕೋಟಿ ಟೆಂಡರ್ ಗೆ 25% ಕಮಿಷನ್ ಪಡೆದುಕೊಂಡಿದ್ದಾರೆ. ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದರೆ ಸುಮಾರು 3000 ಗುತ್ತಿಗೆದಾರರಿಗೆ ಕಲಸ ಸಿಗುತ್ತಿತ್ತು. ಇದನ್ನೆಲ್ಲ ಬಿಟ್ಟು ಕಮಿಷನ್ ಆಸೆಗೆ ಕೇವಲ 40 ಜನರಿಗೆ ಟೆಂಡರ್ ನೀಡಿದ್ದಾರೆ ಎಂದು HESCOM ಎಂಡಿ ಡಿ. ಭಾರತಿ ಮತ್ತು ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲೊಟ್ಟಿ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿದ್ದು, ಅನಧಿಕೃತ ಟೆಂಡರ್ ಹಿಂಪಡೆಯದಿದ್ದರೆ ಪ್ರಧಾನಿ ಕಚೇರಿ ಕದ ತಟ್ಟುವ ಎಚ್ಚರಿಕೆ ಸಹ ನೀಡಿದ್ದಾರೆ.
Published On - 3:01 pm, Thu, 24 November 22