ಹುಬ್ಬಳ್ಳಿ: ಆದೇಶ ಹೊರಡಿಸಿದ 24 ಗಂಟೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi-Dharwad Municipal Corporation) ಆಯುಕ್ತರನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಮತ್ತೊಂದು ಆದೇಶವನ್ನು ಹೊರಡಿಸಿದೆ. ನಿನ್ನೆ ಒಂದು ಆದೇಶ, ಇವತ್ತು ಒಂದು ಆದೇಶ ಹೊರಡಿಸುವ ಮೂಲಕ ಸರ್ಕಾರ ಗೊಂದಲಕ್ಕೀಡು ಮಾಡಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರಾಗಿ ನಿನ್ನೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಎಂಡಿ ಎಸ್.ಭರತ್ ಅವರು ಅಧಿಕಾರ ಸ್ವೀಕರಿಸಿದ್ದರು. ಆದರೆ ಇಂದು ಈಶ್ವರ ಉಳ್ಳಾಗಡ್ಡಿ ಅವರನ್ನು ಪಾಲಿಕೆ ಆಯುಕ್ತರಾಗಿ ಆದೇಶಿಸಿದೆ.
ಆ ಮೂಲಕ 24 ಗಂಟೆಯಲ್ಲಿ ಹು-ಧಾ ಪಾಲಿಕೆ ಆಯುಕ್ತರನ್ನು ಸರ್ಕಾರ ಬದಲಿಸಿದೆ. ಈಶ್ವರ ಉಳ್ಳಾಗಡ್ಡಿ ಬೆಳಗಾವಿ ಜಿಲ್ಲಾ ಯೋಜನಾ ಅಧಿಕಾರಿಯಾಗಿದ್ದರು. ಕೆಲವು ದಿನಗಳ ಹಿಂದೆ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರನ್ನು ವರ್ಗಾವಣೆ ಮಾಡಿದ ನಂತರ ಕೆಲ ದಿನ ಸರ್ಕಾರ ಯಾರನ್ನೂ ನೇಮಿಸಿರಲಿಲ್ಲ.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಸಂಚಲನ: ಕಾಂಗ್ರೆಸ್ನತ್ತ ಮುಖ ಮಾಡಿದ ಬಿಎಸ್ ಯಡಿಯೂರಪ್ಪ ಸಂಬಂಧಿ
ನಿನ್ನೆ ಆಯುಕ್ತರಾಗಿ ಭರತ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ನಿನ್ನೆ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಇಂದು ಈಶ್ವರ ಉಳ್ಳಾಗಡ್ಡಿ ಹು-ಧಾ ಪಾಲಿಕೆ ಆಯುಕ್ತರಾಗಿ ಆದೇಶ ಹೊರಡಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.