ದೂರು ಕೊಡಲು ಪೊಲೀಸ್ ಸ್ಟೇಷನ್ ಗೆ ಬಂತಾ ಗುಬ್ಬಚ್ಚಿ ಮರಿ?
ಒಂದು ಗಂಟೆ ಕಾಲ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ ಗುಬ್ಬಚ್ಚಿ ಮರಿ ಅಲ್ಲಿಂದ ಪುರ್ ಅಂತಾ ಹೊರಗೆ ಹಾರಿಹೋಯಿತು. ಠಾಣೆಗೆ ಬಂದ ಗುಬ್ಬಚ್ಚಿ ಮರಿ ಕಂಡು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದರಾದರೂ ಅದು ಕೊನೆಗೆ ಬೇರೆಡೆ ಹಾರಿ ಹೋಗಿದ್ದನ್ನು ಕಂಡು ಪೆಚ್ಚು ಮೋರೆ ಹಾಕಿಕೊಂಡರು.
ಬಾಗಲಕೋಟೆ ನವನಗರದ ಟ್ರಾಫಿಕ್ ಸ್ಟೇಷನ್ (bagalkot navanagar traffic police station) ನಲ್ಲಿ ಅಪರೂಪದ ಘಟನೆಯೊಮದು ನಡೆದಿದ್ದು ದೂರು ಕೊಡಲು ಗುಬ್ಬಚ್ಚಿ (sparrow) ಮರಿಯೊಂದು ಪೊಲೀಸ್ ಸ್ಟೇಷನ್ ಗೆ ಬಂದಂತಿತ್ತು. ನೇರವಾಗಿ ಪೊಲೀಸ್ ಠಾಣೆ ಒಳಗೆ ಬಂದು, ಸಿನಿಯರ್ ಹೆಡ್ ಕಾನ್ಸ್‌ಟೇಬಲ್ ಟೇಬಲ್ ಬಳಿ ಗುಬ್ಬಚ್ಚಿ ಮರಿ ಬಂದು ಕುಳಿತಿತ್ತು. ಆ ವೇಳೆ ಮಹಿಳಾ ಕಾನ್ಸ್‌ಟೇಬಲ್ ಗುಬ್ಬಿ ಮರಿ ಜೊತೆ ಕ್ಯೂಟ್ ಆಗಿ ಮಾತಾಡಿದರು. ಕಂಪ್ಲೆಂಟ್ ಕೊಡಬೇಕಿತ್ತಾ? ಯಾರ ಮೇಲೆ ದೂರು ಕೊಡಲು ಬಂದಿದ್ದೀಯಾ? ಪೇಪರ್ ಕೊಡು, ಕಂಪ್ಲೇಂಟ್ ಬರೆದು ಕೊಡ್ತೀಯಾ ಎಂದು ಆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಗುಬ್ಬಚ್ಚಿ ಮರಿಗೆ ಪ್ರಶ್ನೆ ಮಾಡಿದರು. ಒಂದು ಗಂಟೆ ಕಾಲ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ ಗುಬ್ಬಚ್ಚಿ ಮರಿ ಅಲ್ಲಿಂದ ಪುರ್ ಅಂತಾ ಹೊರಗೆ ಹಾರಿಹೋಯಿತು. ಠಾಣೆಗೆ ಬಂದ ಗುಬ್ಬಚ್ಚಿ ಮರಿ ಕಂಡು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದರಾದರೂ ಅದು ಕೊನೆಗೆ ಬೇರೆಡೆ ಹಾರಿ ಹೋಗಿದ್ದನ್ನು ಕಂಡು ಪೆಚ್ಚು ಮೋರೆ ಹಾಕಿಕೊಂಡರು.
Published on: Jul 06, 2023 04:05 PM
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ

