Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಗಲಭೆ ಕೇಸ್: ಶ್ರೀಕಾಂತ್​ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು, ಬಿಡುಗಡೆ ಅನುಮಾನ

ರಾಮಜನ್ಮಭೂಮಿ ಹೋರಾಟದ ಕೇಸ್​ನಲ್ಲಿ ಆರೋಪಿಯಾಗಿರುವ ಕರಸೇವಕ ಶ್ರೀಕಾಂತ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ. ಆದರೆ ಸಮಯದ ಅಭಾವದಿಂದ ತೀರ್ಪು ಆದೇಶ ಕೈ ಸೇರುವುದು ತಡವಾದರೆ ಶ್ರೀಕಾಂತಗೆ ಇಂದು ಬಿಡುಗಡೆ ಭಾಗ್ಯ ಅನುಮಾನವೆನ್ನಲಾಗುತ್ತಿದೆ.

ಹುಬ್ಬಳ್ಳಿ ಗಲಭೆ ಕೇಸ್: ಶ್ರೀಕಾಂತ್​ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು, ಬಿಡುಗಡೆ ಅನುಮಾನ
ಶ್ರೀಕಾಂತ ಪೂಜಾರಿ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 05, 2024 | 6:04 PM

ಹುಬ್ಬಳ್ಳಿ, ಜನವರಿ 05: ರಾಮಜನ್ಮಭೂಮಿ ಹೋರಾಟದ ಕೇಸ್​ನಲ್ಲಿ ಆರೋಪಿಯಾಗಿರುವ ಕರಸೇವಕ ಶ್ರೀಕಾಂತ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಹುಬ್ಬಳ್ಳಿ  (Hubballi) ಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ. 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಬಂದ ನಂತರ ದಾಖಲೆಗಳನ್ನು 5 ಮತ್ತು 3ನೇ ಜೆಎಮ್ಎಫ್‌ಸಿ ನ್ಯಾಯಾಲಕ್ಕೆ ನೀಡಬೇಕು.

ತೀರ್ಪು ಆದೇಶವನ್ನ ಈ ಎರಡೂ ಕೋರ್ಟ್‌ಗಳಿಗೆ ತಲುಪಿಸಬೇಕು. ಬಳಿಕ ಸಂಜೆ 6 ಗಂಟೆಯೊಳಗೆ ತೀರ್ಪಿನ ಆದೇಶ ಜೈಲು ಅಧಿಕಾರಿಗಳ ಕೈ ಸೇರಬೇಕು. ಸಮಯದ ಅಭಾವದಿಂದ ತೀರ್ಪು ಆದೇಶ ಕೈ ಸೇರುವುದು ತಡವಾದರೆ ಶ್ರೀಕಾಂತಗೆ ಇಂದು ಬಿಡುಗಡೆ ಭಾಗ್ಯವಿಲ್ಲ ಎನ್ನಲಾಗುತ್ತಿದೆ.

ಶ್ರೀಕಾಂತ ಪೂಜಾರಿಗೆ ವಿಧಿಸಿದ ಷರತ್ತುಗಳು

  • ಇಬ್ಬರು ಜಾಮೀನುದಾರರ ಭದ್ರತೆ ನೀಡಬೇಕು
  • ಒಂದು ಲಕ್ಷ ರೂಪಾಯಿ 2 ಬಾಂಡ್ ನೀಡಬೇಕು
  • ನ್ಯಾಯಾಲಯದ ಪ್ರತಿ ವಿಚಾರಣೆಗೂ ಹಾಜರಾಗಬೇಕು
  • ನ್ಯಾಯಾಲಯದ ಪರವಾನಿಗೆ ಇಲ್ಲದೇ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳಬಾರದು
  • ಸಾಕ್ಷ್ಯ ನಾಶಪಡಿಸುವಂತಿಲ್ಲ.
  • ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ.  ಒಂದು ವೇಳೆ ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗುವುದಾದರೆ ಅನುಮತಿ ಕಡ್ಡಾಯ.
  • ಪ್ರತಿ ಮುದ್ದಾತ್ತಿಗೂ ಕಡ್ಡಾಯವಾಗಿ ಹಾಜರಿರಬೇಕು.
  • ಇಬ್ಬರು ವ್ಯಕ್ತಿಗಳಿಂದ ತಲಾ 2 ಲಕ್ಷ ರೂ. ಭದ್ರತಾ ಬಾಂಡ್ ಶೂರಿಟಿ ಕೊಡಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಮೇಲಿನ 16 ಕೇಸ್​ಗಳಲ್ಲಿ 15 ಖುಲಾಸೆಯಾಗಿವೆ, ಸರ್ಕಾರ ದಿಕ್ಕುತಪ್ಪಿಸಿದೆ: ಮಹೇಶ್ ಟೆಂಗಿನಕಾಯಿ

1992 ರಲ್ಲಿ ರಾಮಮಂದಿರ ಹೋರಾಟ ಸಂಬಂಧ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಾಟೆಯಲ್ಲಿ ಶ್ರೀಕಾಂತ್‌ ಪೂಜಾರಿ ಭಾಗಿಯಾಗಿದ್ದರು. ಈ ಹಿನ್ನೆಲೆ ಇತ್ತೀಚೆಗೆ ಅರೆಸ್ಟ್‌ ಮಾಡಲಾಗಿತ್ತು. ಇದರಿಂದ ರಾಜ್ಯದಲ್ಲಿ ಬಿಜೆಪಿ  ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿತ್ತು.

ಇದನ್ನೂ ಓದಿ: ಈ ಪ್ರಕರಣ ಖಂಡಿತವಾಗಿ ಬಿದ್ದು ಹೋಗುತ್ತದೆ: ಕರಸೇವಕ ಶ್ರೀಕಾಂತ್ ಪರ ವಕೀಲರು ಹೀಗೆ ಹೇಳಿದ್ದೇಕೆ?

ಶ್ರೀಕಾಂತ್‌ ಪೂಜಾರಿಯನ್ನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಹೋರಾಟ ನಡೆದಿತ್ತು. ವಿಪಕ್ಷ ನಾಯಕ ಆರ್‌ ಅಶೋಕ್​ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದಂತೆ ಪ್ರತಿಭಟನೆ ಮತ್ತೊಂದು ಸ್ವರೂಪ ಪಡೆದಿತ್ತು. ಠಾಣೆ ಮುಂದೆ ಟೈರ್‌ಗೆ ಬೆಂಕಿ ಹಚ್ಚಿದ್ದರು. ಹಿಂಬದಿ ಗೇಟ್​​ನಿಂದ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಅದರಲ್ಲಿಯೂ ಬಿಜೆಪಿ ಮುಖಂಡರು ಠಾಣೆ ಒಳಗೆ ನುಗ್ಗಲು ಯತ್ನಿಸುತ್ತಿದ್ದಂತೆ, ಆರ್‌. ಅಶೋಕ್‌, ಶಾಸಕರಾದ ಮಹೇಶ್‌ ತೆಂಗಿನಕಾಯಿ, ಅರವಿಂದ್‌ ಬೆಲ್ಲದ್‌ರನ್ನ ವಶಕ್ಕೆ ಪಡೆಯಲಾಗಿತ್ತು. ಹಿಂದೂ ಕಾರ್ಯಕರ್ತರನ್ನೇ ಸಿದ್ದರಾಮಯ್ಯ ಸರ್ಕಾರ ಟಾರ್ಗೆಟ್‌ ಮಾಡುತ್ತಿದೆ ಎಂದು ಆರೋಪಿಸಿದ ಅಶೋಕ್‌, ಶಹರ ಠಾಣೆ ಇನ್ಸ್‌ಪೆಕ್ಟರ್‌ ಅಮಾನತಿಗೆ ಆಗ್ರಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:42 pm, Fri, 5 January 24

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ