ಹುಬ್ಬಳ್ಳಿ, ನ.23: ವಾಟ್ಸಪ್ ಕಾಲ್ನಲ್ಲಿ ಹುಬ್ಬಳ್ಳಿ(Hubballi) ಮೂಲದ ದತ್ತಾತ್ರೇಯ ಎಂಬುವವರಿಗೆ ಅಶ್ಲೀಲ ವಿಡಿಯೋ ಕಳಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ಮರ್ಯಾದೆಗೆ ಹೆದರಿ ಬರೊಬ್ಬರಿ 2 ಲಕ್ಷದ 40 ಸಾವಿರ ಕಳೆದುಕೊಂಡಿದ್ದಾರೆ. ಫೇಸಬುಕ್ ಮೂಲಕ ವ್ಯಕ್ತಿಗೆ ಪರಿಚಯವಾಗಿ ಬಳಿಕ ವಾಟ್ಸಪ್ನಲ್ಲಿ ಚಾಟ್ ಮಾಡಿದ್ದ ಗ್ಯಾಂಗ್, ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡು ಬೆತ್ತಲೆ ವಿಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ನಿಮ್ಮ ವಿಡಿಯೋ ವಿವಿಧ ವೆಬ್ಸೈಟ್ನಲ್ಲಿ ಓಡಾಡುತ್ತಿದೆ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಹೆದರಿ ಫೋನ್ ಪೇ ಹಾಗೂ RTGS ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.
ಮರ್ಯಾದೆಗೆ ಹೆದರಿ ಬರೋಬ್ಬರಿ ಲಕ್ಷಾಂತರ ರೂಪಾಯಿ ಹಣ ನೀಡಿದರೂ, ಮತ್ತಷ್ಟು ಹಣಕ್ಕೆ ಪೀಡಿಸುತ್ತಿದ್ದರಂತೆ. ಈ ಹಿನ್ನಲೆ ಅವರ ಕಾಟ ತಡೆಯಲಾರದೇ ಇಂದು(ನ.23) ಸಂತ್ರಸ್ಥ ದತ್ತಾತ್ರೇಯ ಅವರು ಹುಬ್ಬಳ್ಳಿ ಕಸಾಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಶನಿವಾರ ವಾಟ್ಸಪ್ ಚಾಟ್ ಮಾಡಿದ್ದ ಗ್ಯಾಂಗ್, ಹಣಕ್ಕೆ ಬೇಡಿಕೆ ಇಟ್ಟಿತ್ತಂತೆ. ಹೀಗಾಗಿ ಮರ್ಯಾದೆಗೆ ಹೆದರಿ ತಾಯಿ ಚಿಕಿತ್ಸಗೆ ಇಟ್ಟಿರುವ ಹಣವನ್ನೇ ಹಂತ ಹಂತವಾಗಿ ಪೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ:ಸ್ತ್ರೀರೋಗ ತಜ್ಞೆ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ.. ಅಶ್ಲೀಲ ವಿಡಿಯೋ ಕಳಿಸಿ ಎಂದ ಕಿರಾತಕರು!
ಇನ್ನು ಇದೆ ನ.4 ರಂದು ಮೇಕ್ ಇನ್ ಇಂಡಿಯಾ ಯೋಜನೆಯಡಿ ವ್ಯಕ್ತಿಯೊಬ್ಬ ಮಹಿಳಾ ಉದ್ಯಮಿಯೊಬ್ಬರಿಗೆ ಬರೊಬ್ಬರಿ 1.2 ಕೋಟಿ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಹಿಳೆ ಬೆಂಗಳೂರು ನಗರದ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ಲಾಸ್ಟಿಕ್ ಬದಲಿ ಉತ್ಪಾದನೆಯ ಸ್ಟಾರ್ಟ್ ಅಪ್ ಸಂಸ್ಥಾಪಕ ಅಶ್ವಥ್ ಹೆಗ್ಡೆ, ಕಂಪನಿಯ ಫ್ರಾಂಚೈಸಿಗಾಗಿ 74.25 ಲಕ್ಷ ರೂಪಾಯಿಗಳನ್ನು ಪಾವತಿಸಿ ತನಗೆ ಮೋಸ ಮಾಡಿದ್ದಾರೆ ಎಂದು ಉದ್ಯಮಿ ನೀಲಿಮಾ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಇಂತಹ ಸಾಲು ಸಾಲು ಪ್ರಕರಣಗಳು ದಾಖಲಾಗುತ್ತಿದ್ದರೂ ಕೇಸ್ಗಳ ಸಂಖ್ಯೆ ನಿಲ್ಲುತ್ತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Thu, 23 November 23