National Youth Fest: ವಿವಿಧ ರಾಜ್ಯದ 15 ಪ್ರತಿನಿಧಿಗಳಿಗೆ ಆರೋಗ್ಯದಲ್ಲಿ ಏರುಪೇರು; ಓರ್ವ ಪ್ರತಿನಿಧಿಗೆ ಎದೆ ನೋವು

Hubli-Dharwad: ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದ್ದು, ಯುವಜನೋತ್ಸವಕ್ಕೆ ಬಂದ ಜಮ್ಮು ಮತ್ತು ಕಾಶ್ಮೀರ ಪ್ರತಿನಿಧಿಗಳ ಆರೋಗ್ಯದಲ್ಲಿ ಏರುಪೇರಾಗಿದೆ.

National Youth Fest: ವಿವಿಧ ರಾಜ್ಯದ 15 ಪ್ರತಿನಿಧಿಗಳಿಗೆ ಆರೋಗ್ಯದಲ್ಲಿ ಏರುಪೇರು; ಓರ್ವ ಪ್ರತಿನಿಧಿಗೆ ಎದೆ ನೋವು
ರಾಷ್ಟ್ರೀಯ ಯುವಜನೋತ್ಸವ
Updated By: ವಿವೇಕ ಬಿರಾದಾರ

Updated on: Jan 13, 2023 | 12:46 PM

ಧಾರವಾಡ: ಪೇಡಾ ನಗರಿ ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ (National Youth Fest) ನಡೆಯುತ್ತಿದ್ದು, ಯುವಜನೋತ್ಸವಕ್ಕೆ ಬಂದ ಜಮ್ಮು ಮತ್ತು ಕಾಶ್ಮೀರ (Jammu and Kashmir) ಪ್ರತಿನಿಧಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಫಾಯಿಡ್ ಎಂಬ ಪ್ರತಿನಿಧಿಗೆ ಎದೆ ನೋವು, ಆಸ್ಮಾ ಮಹಿಳಾ ಪ್ರತಿನಿಧಿಗೆ ಬಲಗೈ ನೋವು, 6 ಜನರಿಗೆ ಸಣ್ಣ ಪುಟ್ಟ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೆ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ (Hubli Kims) ಆಸ್ಪತ್ರೆಗೆ ರವಾನಿಸಲಾಗಿದೆ. ವಿವಿಧ ರಾಜ್ಯದ ಪ್ರತಿನಿಧಿಗಳು ಜ. 9ರಿಂದ ಧಾರವಾಡಕ್ಕೆ ಬಂದಿದ್ದರು. ಆ ಪೈಕಿ ಒಟ್ಟು 15 ಜನರ ಆರೋಗ್ಯದಲ್ಲಿ ಏರುಪೇರಾಗಿದೆ.

ಯುವಜನೋತ್ಸವ ಪ್ರಯುಕ್ತ ಜಾನಪದ ನೃತ್ಯ ಸ್ಪರ್ಧೆ

ಯುವಜನೋತ್ಸವ ಪ್ರಯುಕ್ತ ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ಸ್ಪರ್ಧೆಗೆ ರಾಜ್ಯಪಾಲ ಥಾವರ್‌ಚಂದ್ ಗೇಹ್ಲೋತ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದ್ದಾರೆ. ಜಾನಪದ ನೃತ್ಯ ಸ್ಪರ್ಧೆ ಕೆಸಿಡಿ ಆವರಣ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿದೆ.

ಯುವ ಕೃತಿ ಪ್ರದರ್ಶನ ಉದ್ಘಾಟನೆ

ಯುವಜನೋತ್ಸವ ಪ್ರಯುಕ್ತ ಯುವ ಕೃತಿ ಪ್ರದರ್ಶನ ಏರ್ಪಡಿಸಲಾಗಿದೆ. ಈ ಪ್ರದರ್ಶನದ ಮಳಿಗೆಗಳನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸಿದ್ದಾರೆ. ಕೆಸಿಡಿ ಫುಟ್‌ಬಾಲ್ ಮೈದಾನದಲ್ಲಿ ಪ್ರದರ್ಶನ ನಡೆಯುತ್ತಿದೆ. ದೇಶದ ವಿವಿಧೆಡೆಯ ಯುವ ಆವಿಷ್ಕಾರಗಳನ್ನೊಳಗೊಂಡ ಪ್ರದರ್ಶನ ಇದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Fri, 13 January 23