ಕಾರ್ತಿಕ ಏಕಾದಶಿಗೆ ಹುಬ್ಬಳ್ಳಿಯಿಂದ ಪಂಢರಪುರಕ್ಕೆ ವಿಶೇಷ ರೈಲು: ಇಲ್ಲಿದೆ ವೇಳಾಪಟ್ಟಿ

ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಆಚರಣೆಗಳಲ್ಲಿ ಒಂದಾದ ಕಾರ್ತಿಕ ಏಕಾದಶಿ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ನೈಋತ್ಯ ರೈಲ್ವೆಯು ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಈ ರೈಲುಗಳ ವೇಳಾಪಟ್ಟಿ ಇಲ್ಲಿದೆ.

ಕಾರ್ತಿಕ ಏಕಾದಶಿಗೆ ಹುಬ್ಬಳ್ಳಿಯಿಂದ ಪಂಢರಪುರಕ್ಕೆ ವಿಶೇಷ ರೈಲು: ಇಲ್ಲಿದೆ ವೇಳಾಪಟ್ಟಿ
ಪಂಢರಪುರ, ಹುಬ್ಬಳ್ಳಿ ರೈಲು ನಿಲ್ದಾಣ
Follow us
ವಿವೇಕ ಬಿರಾದಾರ
|

Updated on:Nov 11, 2024 | 8:16 AM

ಹುಬ್ಬಳ್ಳಿ, ನವೆಂಬರ್​ 11: ಕಾರ್ತಿಕ ಮಾಸದಲ್ಲಿ (Kartika Masa) ಬರುವ ಏಕಾದಶಿ (Ekadashi) ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಈ ದಿನದಂದು ಮಹರಾಷ್ಟ್ರ (Maharashtra) ರಾಜ್ಯದಲ್ಲಿರುವ ಪಂಢರಪುರ ವಿಠಲನ (Pandarapura Vittala) ದೇವಸ್ಥಾನದಲ್ಲಿ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಿಂದ ಲಕ್ಷಾಂತರ ಭಕ್ತರು ಹೋಗುತ್ತಾರೆ. ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ (South Western Railway) ಹುಬ್ಬಳ್ಳಿಯಿಂದ ಪಂಢರಪುರಕ್ಕೆ ವಿಶೇಷ ರೈಲು ಓಡಿಸುತ್ತಿದೆ. ಈ ಕುರಿತು ನೈಋತ್ಯ ರೈಲ್ವೆ ಸಾಮಾಜಿಕ ಮಾಧ್ಯಮ ಎಕ್ಸ್​ ಮುಖಾಂತರ ಮಾಹಿತಿ ಹಂಚಿಕೊಂಡಿದೆ.

ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಆಚರಣೆಗಳಲ್ಲಿ ಒಂದಾದ ಕಾರ್ತಿಕ ಏಕಾದಶಿ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ಆರು ಟ್ರಿಟ್​ಗಳಿಗೆ ಕಾಯ್ದಿರಿಸದ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸುತ್ತಿದೆ. ಹಬ್ಬದ ಸಮಯದಲ್ಲಿ ಸುಗಮ ಪ್ರಯಾಣದ ಅನುಭವಕ್ಕಾಗಿ ಈ ಸೇವೆಯ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕೆಂದು ನೈಋತ್ಯ ರೈಲ್ವೆ ಮನವಿ ಮಾಡಿದೆ.

ಇದನ್ನೂ ಓದಿ: ವಾರಾಂತ್ಯದಲ್ಲಿ ಹುಬ್ಬಳ್ಳಿ ಮತ್ತು ಯಶವಂತಪುರ ನಡುವೆ ವಿಶೇಷ ರೈಲು

ರೈಲುಗಳ ವಿವರ

ರೈಲು ಸಂಖ್ಯೆ: 07313 ಎಸ್​ಎಸ್​ಎಸ್​ ಹುಬ್ಬಳ್ಳಿ-ಪಂಢರಪುರ ವಿಶೇಷ ರೈಲು ನವೆಂಬರ್​ 9 ರಿಂದ 15ರವರೆಗೆ ಹುಬ್ಬಳ್ಳಿಯಿಂದ ರಾತ್ರಿ 7:45ಕ್ಕೆ ಹೊರಟು ಮರುದಿನ ನಸುಕಿನ ಜಾವ 4:40ಕ್ಕೆ ಪಂಢರಪುರ ತಲುಪಲಿದೆ.

ರೈಲು ಸಂಖ್ಯೆ: 07314 ಪಂಢರಪುರ-ಎಸ್​ಎಸ್​ಎಸ್​​ ಹುಬ್ಬಳ್ಳಿ ವಿಶೇಷ ರೈಲು ನವೆಂಬರ್​ 10 ರಿಂದ 16ರವರೆಗೆ ಪಂಢರಪುರದಿಂದ ಬೆಳಗಿನ ಜಾವ 6 ಗಂಟೆಗೆ ಹೊರಟು ಅದೇ ದಿನ ಸಂಜೆ 4:30ಕ್ಕೆ ಹುಬ್ಬಳ್ಳಿ ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?

ಈ ರೈಲು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ್​​ ರೋಡ್​, ಘಟಪ್ರಭಾ, ಚಿಕ್ಕೋಡಿ ರೋಡ್​, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ್​​, ಶೆಡಬಾಳ​, ವಿಜಯನಗರ, ಮೀರಜ್​, ಸುಲ್ಗರೆ, ಕವಠೆ-ಮಹಾಕಾಲ್​, ಧಲಗಾಂವ್​, ಜತ್​​ ರೋಡ್​ ಮತ್ತು ಸಂಗೋಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಟ್ವಿಟರ್​ ಪೋಸ್ಟ್​​

ಈ ರೈಲಿನಲ್ಲಿ 10 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಸೆಕೆಂಡ್​ ಕ್ಲಾಸ್​ ಲಗೇಜ್​ ಕಮ್​ ಬ್ರೇಕ್​ ವ್ಯಾನ್​ಗಳು ಸೇರಿದಂತೆ ಒಟ್ಟು 12 ಬೋಗಿಗಳು ಇರಲಿವೆ.

ಈ ರೈಲುಗಳು ಪ್ರತಿ ನಿಲ್ದಾಣಕ್ಕೆ ಆಗಮನ/ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು www.enquiry.indianrail.gov.in ಅಧಿಕೃತ ರೈಲ್ವೆ ವೆಬ್‌ಸೈಟ್ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ನಂಬರಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:15 am, Mon, 11 November 24

ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಜಿತ್ ಪವಾರ್ ಬ್ಯಾಗ್ ಪರಿಶೀಲನೆ
ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಜಿತ್ ಪವಾರ್ ಬ್ಯಾಗ್ ಪರಿಶೀಲನೆ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ
ಉಪ ಚುನಾವಣೆ ಹೊತ್ತಲ್ಲಿ ಚುನಾವಣಾಧಿಕಾರಿಯ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ
ಉಪ ಚುನಾವಣೆ ಹೊತ್ತಲ್ಲಿ ಚುನಾವಣಾಧಿಕಾರಿಯ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ
ಯೋಗೇಶ್ವರ್ ರೈತನ ಮಗ ಮತ್ತು ರೈತ ದೇಶದ ಬೆನ್ನೆಲುಬು: ಶೀಲಾ ಯೋಗೇಶ್ವರ್
ಯೋಗೇಶ್ವರ್ ರೈತನ ಮಗ ಮತ್ತು ರೈತ ದೇಶದ ಬೆನ್ನೆಲುಬು: ಶೀಲಾ ಯೋಗೇಶ್ವರ್
ಜೆಡಿಎಸ್ ಕಾರ್ಯಕರ್ತೆಯೂ ಮತಗಟ್ಟೆ ಬಳಿ ಶಾಲು ಹೊದ್ದು ಓಡಾಡುತ್ತಿದ್ದರು
ಜೆಡಿಎಸ್ ಕಾರ್ಯಕರ್ತೆಯೂ ಮತಗಟ್ಟೆ ಬಳಿ ಶಾಲು ಹೊದ್ದು ಓಡಾಡುತ್ತಿದ್ದರು
‘ಭೈರತಿ ರಣಗಲ್’ ಚಿತ್ರದಲ್ಲಿ ಶ್ರೀಮುರಳಿ ಸರ್​ಪ್ರೈಸ್ ಎಂಟ್ರಿ?
‘ಭೈರತಿ ರಣಗಲ್’ ಚಿತ್ರದಲ್ಲಿ ಶ್ರೀಮುರಳಿ ಸರ್​ಪ್ರೈಸ್ ಎಂಟ್ರಿ?
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ
CCTV Video: ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಸವಾರರು ಪಾರು
CCTV Video: ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಸವಾರರು ಪಾರು
‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
‘ಯಾರೂ ಉಳಿಯಲ್ಲ’; ತೊಡೆ ತಟ್ಟಿದ ಉಗ್ರಂ ಮಂಜು
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ