ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

| Updated By: preethi shettigar

Updated on: Oct 23, 2021 | 2:03 PM

ಬಿಜೆಪಿ ಮೇಲೆ‌ ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಯಾಕೆ ಮಾಡುತ್ತಿದ್ದೆ. ಬಿಜೆಪಿ ಜೊತೆಯೇ 5 ವರ್ಷ ಕಾಲ ಸರ್ಕಾರ ಮಾಡುತ್ತಿದ್ದೆ. 2006ರಲ್ಲಿ ಸರ್ಕಾರ ಮಾಡಲು ಕಾರಣ ಇದೇ ಸಿದ್ದರಾಮಯ್ಯ. ಅವರ ನಡವಳಿಕೆಯಿಂದ ನಾವು ಸರ್ಕಾರ ಮಾಡಿದ್ದೆವು ಎಂದು ಹೇಳಿದ್ದಾರೆ.

ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಹೆಚ್‌.ಡಿ.ಕುಮಾರಸ್ವಾಮಿ
Follow us on

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿಯೇ ಟಾರ್ಗೆಟ್. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ಆದರೆ ನಾನು ಎಲ್ಲ ನಾಯಕರಿಗೂ ಹೇಳುವುದು ಒಂದೇ, ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆಗೆ ಹೋದರೆ ಕೆಸರೆರಚಾಟ. ಒಂದು ವೇಳೆ ಕೆಸರೆರಚಾಟ ಮಾಡಿಕೊಂಡು ಹೋದರೆ ಅದಕ್ಕೆ ಅಂತ್ಯ ಇರಲ್ಲ. ಸಿದ್ದರಾನಯ್ಯ ಅವರಿಗೆ ಮನವಿ ಮಾಡುತ್ತೇನೆ ನಿಮಗಿರುವ ವರ್ಚಸ್ಸು, ರಾಜಕೀಯ ಶಕ್ತಿ ಕುಂದಿಸಿಕೊಳ್ಳಬೇಡಿ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಬಳಿಕ ಜೆಡಿಎಸ್ ಪಕ್ಷ ಬಿಜೆಪಿಯ ಟೀಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ಅದನ್ನು ಬಿಟ್ಟು ಬೇರೆ ಏನು ಹೇಳಲು ಸಾಧ್ಯ. ನಾಮಗೆ ಯಾರ ಬಗ್ಗೆಯಾ ಸಾಫ್ಟ್ ಕಾರ್ನರ್ ಇಲ್ಲ. ಬಿಜೆಪಿ ಮೇಲೆ‌ ಸಾಫ್ಟ್ ಕಾರ್ನರ್ ಇದ್ದಿದ್ದರೆ ಕಾಂಗ್ರೆಸ್ ಜೊತೆ ಸರ್ಕಾರ ಯಾಕೆ ಮಾಡುತ್ತಿದ್ದೆ. ಬಿಜೆಪಿ ಜೊತೆಯೇ 5 ವರ್ಷ ಕಾಲ ಸರ್ಕಾರ ಮಾಡುತ್ತಿದ್ದೆ. 2006ರಲ್ಲಿ ಸರ್ಕಾರ ಮಾಡಲು ಕಾರಣ ಇದೇ ಸಿದ್ದರಾಮಯ್ಯ. ಅವರ ನಡವಳಿಕೆಯಿಂದ ನಾವು ಸರ್ಕಾರ ಮಾಡಿದ್ದೆವು ಎಂದು ಹೇಳಿದ್ದಾರೆ.

ಸಿಂದಗಿಯಲ್ಲಿ ಚುನಾವಣೆ ಗೆಲ್ಲುತ್ತೇವೆ: ಎಚ್.ಡಿ.ಕುಮಾರಸ್ವಾಮಿ
ಕಳೆದ 5 ದಿನಗಳಿಂದ ಪ್ರಚಾರದಲ್ಲಿ ಭಾಗವಹಿಸಿದ್ದೆನೆ. ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಸಿಂದಗಿಯಲ್ಲಿ ಚುನಾವಣೆ ಗೆಲ್ಲುತ್ತೇವೆ. ದೇವೆಗೌಡರ ಕಾಲದ ಹಾಗೂ ನನ್ನ ಕಾಲದ ನೀರಾವರಿ ಯೋಜನೆಗಳು ರೈತರ ಸಾಲ ಮನ್ನಾ ಬಗ್ಗೆ ಹಳ್ಳಿಗಳಲ್ಲಿ ಜನ ಸ್ಪಂದಿಸಿ ಮಾತನಾಡುತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜನತಾ‌‌ ಪರಿವಾರದ ಸಿಎಂ ಉದಾಸಿ ಬಿಜೆಪಿಗೆ ಹೋದ ನಂತರ ನಮಗೆ ಹಾನಗಲನಲ್ಲಿ ನಾಯಕತ್ವದ ಕೊರತೆ ಇತ್ತು. ಈ ಬಾರಿ ನಾವು ಹಾನಗಲನಲ್ಲಿ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಅಲ್ಲಿಯ ಸ್ಥಿತಿ ನೋಡಿ ನಾನು ಮಾತನಾಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸಿಂದಗಿಯಲ್ಲಿ ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ ಹೇಳಿಕೆ
ಬಸವಕಲ್ಯಾಣದಲ್ಲಿ ಅಲ್ಪಸಂಖ್ಯಾತರನ್ನು ಬಲಿಪಶು ಮಾಡಿದರು. ಈಗ ಅಲ್ಪಸಂಖ್ಯಾತ ಮತ ವಿಭಜಿಸುವುದಕ್ಕೆ ಹೊರಟಿದ್ದಾರೆ. ಆದರೆ ಜೆಡಿಎಸ್‌ನವರ ಈ ಪ್ರಯತ್ನ ಫಲಿಸುವುದಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಜೆಡಿಎಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಈಶ್ವರ ಖಂಡ್ರೆ ಹೇಳಿದ್ದಾರೆ.

ಕೌರವರು, ಪಾಂಡವರು ಎಂಬ ಟೀಕೆಗೆ ಈಶ್ವರ ಖಂಡ್ರೆ ಉತ್ತರ ನೀಡಿದ್ದು, ಬಿಜೆಪಿಯಲ್ಲಿ ಕಾಂಗ್ರೆಸ್ ವಲಸಿಗರಿಂದ ಹೆಚ್ಚು ಪ್ರಚಾರ. ಇದರಿಂದಲೂ ಕಾಂಗ್ರೆಸ್‌ಗೆ ಯಾವುದೇ ಪರಿಣಾಮ ಆಗುವುದಿಲ್ಲ. ಬಿಜೆಪಿಯವರು ಏಕೆ ಇಷ್ಟೊಂದು ತಳಮಟ್ಟಕ್ಕೆ ಹೋಗುತ್ತಿದ್ದಾರೆ. ಬಿಜೆಪಿಯವರಿಗೆ ಅಧಿಕಾರದ ದುರಹಂಕಾರ ಬಂದಿದೆ. ಈ ಚುನಾವಣೆಯಲ್ಲಿ ಗೋಣಿಚೀಲದ ಹಣ ಪರಿಣಾಮ ಬೀರಲ್ಲ. ಅವರೆಷ್ಟೇ ಗೋಣಿ ಚೀಲ ತಂದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಜೆಡಿಎಸ್, ಬಿಜೆಪಿ ವಿರುದ್ಧ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:
ಕಾರ್ಯಕ್ರಮಕ್ಕೆ ಹೋಗಲ್ಲ! ನಮಗೂ ಆತ್ಮಗೌರವ ಇದೆ; ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್​ ಶಾಸಕ ಶ್ರೀನಿವಾಸ್ ಬೇಸರ

ಜೆಡಿಎಸ್ ಪಕ್ಷವನ್ನು ಕೆಣಕಿದಷ್ಟು ಕಾಂಗ್ರೆಸ್ ಮುಗಿಯುತ್ತೆ: ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

Published On - 1:14 pm, Sat, 23 October 21