ಪ್ರಧಾನಿ ಮೋದಿಯಿಂದ ಧಾರವಾಡ ಐಐಟಿ ಉದ್ಘಾಟನೆ: ಕಾರ್ಯಕ್ರಮಕ್ಕೆ ಭರದಿಂದ ನಡೆದಿದೆ ಸಿದ್ದತೆ, ಖಾಕಿ ಕಣ್ಗಾವಲು

ನಾಳೆ(ಮಾ.12) ಐಐಟಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ, ಐಐಟಿ ಕಾರ್ಯಕ್ರಮದಲ್ಲಿ ಬೀಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 5 ಎಸ್ಪಿ, 8 ಹೆಚ್ಚುವರಿ ಎಸ್ಪಿ, 28 ಡಿವೈಎಸ್ಪಿ, 63 ಪೊಲೀಸ್ ಇನ್ಸ್ಪೆಕ್ಟರ್, ಸೇರಿ ಒಟ್ಟು 1484 ಪೊಲೀಸ್​ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.

ಪ್ರಧಾನಿ ಮೋದಿಯಿಂದ ಧಾರವಾಡ ಐಐಟಿ ಉದ್ಘಾಟನೆ: ಕಾರ್ಯಕ್ರಮಕ್ಕೆ ಭರದಿಂದ ನಡೆದಿದೆ ಸಿದ್ದತೆ, ಖಾಕಿ ಕಣ್ಗಾವಲು
ಐಐಟಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ, ಸಿದ್ದಗೊಳ್ಳುತ್ತಿರುವ ವೇದಿಕೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 11, 2023 | 3:22 PM

ಧಾರವಾಡ: ನೂತನವಾಗಿ ಧಾರವಾಡದಲ್ಲಿ ನಿರ್ಮಿಸಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)ಯನ್ನು ನಾಳೆ(ಮಾ.12) ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ, ಐಐಟಿ ಸುತ್ತ ಮುತ್ತ ಬೀಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.  ಸಾರ್ವಜನಿಕ ಸಮಾರಂಭದ ವೇದಿಕೆ, ಪಾರ್ಕಿಂಗ್, ಐಐಟಿಗೆ ಸೇರುವ ರಸ್ತೆಗಳಲ್ಲಿ ಒಟ್ಟು 1484 ಪೊಲೀಸ್​ ಸಿಬ್ಬಂದಿಯ ನಿಯೋಜನೆ ಮಾಡಲಾಗಿದ್ದು, 5 ಎಸ್ಪಿ, 8 ಹೆಚ್ಚುವರಿ ಎಸ್ಪಿ, 28 ಡಿವೈಎಸ್ಪಿ, 63 ಪೊಲೀಸ್ ಇನ್ಸ್ಪೆಕ್ಟರ್, 134 ಪಿಎಸ್ಸೈ, 158 ಎಎಸ್‌ಐ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಭಾನುವಾರ ಮಧ್ಯಾಹ್ನ 3.05ಕ್ಕೆ ಪ್ರಧಾನಿ ಮೋದಿ ಉದ್ಘಾಟನೆ ಮಾಡಿ, ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸಮಾರಂಭದಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು, ಸಮಾವೇಶಕ್ಕೆ ಬರುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. 60ಕ್ಕೂ ಹೆಚ್ಚು ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಿ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿಯೇ ಒಳ ಬಿಡಲಿದ್ದಾರೆ.

ಹಸಿರು ವಲಯವಾಗಿ ಸಜ್ಜಾಗುತ್ತಿದೆ ಆಡಳಿತ ಭವನ

ಇನ್ನು ಧಾರವಾಡದ ಐಐಟಿ ಮುಖ್ಯ ಕಟ್ಟಡದಲ್ಲಿ ತಯಾರಿ ಭರದಿಂದ ಸಾಗಿದೆ. ಐಐಟಿ ಮುಂಭಾಗದಲ್ಲಿ ಹತ್ತು ಅಡಿ ಎತ್ತರ ಬೃಹತ್ ವೇದಿಕೆ ಸಿದ್ಧಗೊಂಡಿದೆ. ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳ ಕಲಾಕೃತಿ ತಯಾರಿಸಲಾಗದ್ದು, ಇದು ವಿಭಿನ್ನವಾಗಿ ಪ್ರಧಾನಿಯವರನ್ನ ಸ್ವಾಗತಿಸಲಿವೆ. ಆಡಳಿತ ಭವನ ಹಸಿರು ವಲಯವಾಗಿ ಸಜ್ಜಾಗುತ್ತಿದ್ದು, ಫೇಸ್ 1ರಲ್ಲಿ ನಿರ್ಮಾಣ ಆಗಿರುವ 18 ವಿಭಾಗಗಳಲ್ಲಿ ಸದ್ಯ ಫೇಸ್ 1ರ ಕಟ್ಟಡಗಳೊಂದಿಗೆ ಉದ್ಘಾಟನೆ ಮಾಡಲಿದ್ದಾರೆ. ಇನ್ನು ಮುಖ್ಯದ್ವಾರ, ಆಡಳಿತ ಭವನ, 2 ಅಕಾಡೆಮಿಕ ವಿಭಾಗ, ಗ್ರಂಥಾಲಯ, ಕಂಪ್ಯೂಟರ್ ವಿಭಾಗ, ಎರಡು ಹಾಸ್ಟೆಲ್, ಮೆಸ್ , ಗೆಸ್ಟ್ ಹೌಸ್ ಸೇರಿ 18 ವಿಭಾಗವನ್ನ ಸುಮಾರು 850 ಕೋಟಿ ರೂ. ವೆಚ್ಚದಲ್ಲಿ 470 ಎಕರೆ ಪ್ರದೇಶದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ. ನೂತನ ಕ್ಯಾಂಪಸ್‌ನಲ್ಲಿ ಒಟ್ಟು 856 ವಿದ್ಯಾರ್ಥಿಗಳು ಕಲಿಯಲಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ಮಾ.12ರಂದು ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂನ್ನು ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ

ಐಐಟಿ ಮುಂಭಾಗದಲ್ಲಿ ಸಿದ್ಧಗೊಂಡಿರೋ ಬೃಹತ್ ವೇದಿಕೆ

ನಾಳೆ ಐಐಟಿ ಕಟ್ಟಡ ಉದ್ಘಾಟನೆಗೆ ಪ್ರಧಾನಿ ಆಗಮಿಸಲಿರುವ ಹಿನ್ನಲೆ, ಹತ್ತು ಅಡಿ ಎತ್ತರ ಬೃಹತ್ ವೇದಿಕೆ ನಿಮಾರ್ಣ ಮಾಡಲಾಗಿದೆ. ಜೊತೆಗೆ ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳ ಕಲಾಕೃತಿ ಮಾಡಲಾಗಿದ್ದು ವಿಭಿನ್ನವಾಗಿ ಮೋದಿಗೆ ಸ್ವಾಗತಿಸಲಿವೆ. ಇನ್ನು ವೇದಿಕೆ, ಪೆಂಡಾಲ್, ಊಟದ ವ್ಯವಸ್ಥೆ, ಪಾರ್ಕಿಂಗ್‌‌ಗಾಗಿ 120 ಎಕರೆ ಪ್ರದೇಶ ಬಳಕೆ ಮಾಡಿಕೊಳ್ಳಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Sat, 11 March 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ