ಹುಬ್ಬಳ್ಳಿ: ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಹಣ ಪಡೆದು ವಂಚನೆ; ಆರೋಪಿ ಅರೆಸ್ಟ್​

| Updated By: ವಿವೇಕ ಬಿರಾದಾರ

Updated on: Sep 06, 2023 | 12:56 PM

ನನಗೆ ರೈಲ್ವೇ ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯವಿದ್ದಾರೆ. ನಾನು ಈಗಾಗಲೆ ಅನೇಕ ಜನರಿಗೆ ನೌಕರಿ ಕೊಡಿಸಿದ್ದೇನೆ ಎಂದು ಸುಳ್ಳು ನೇಮಕಾತಿ ಪತ್ರ ಮತ್ತು ಜಾಯ್ನಿಂಗ್ ಲೆಟರ್ ತೋರಿಸಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದ ಆರೋಪಿಯ ಬಂಧನ.

ಹುಬ್ಬಳ್ಳಿ: ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಹಣ ಪಡೆದು ವಂಚನೆ; ಆರೋಪಿ ಅರೆಸ್ಟ್​
ಕಸಬಾಪೇಟ ಪೊಲೀಸ್ ಠಾಣೆ
Follow us on

ಹುಬ್ಬಳ್ಳಿ: ರೈಲ್ವೇ ಇಲಾಖೆಯಲ್ಲಿ (Railway Department) ಕೆಲಸ ಕೊಡಿಸುವುದಾಗಿ ಹೇಳಿ ಹಳೇಹುಬ್ಬಳ್ಳಿಯ (Old Hubballi) ನೇಕಾರನಗರದ ಓರ್ವ ವ್ಯಕ್ತಿಯಿಂದ 31 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದ ವಿಜಯಪುರ (Vijayapura) ಮೂಲದ ಪ್ರಶಾಂತ್ ದೇಶಪಾಂಡೆ ಎಂಬಾತನನ್ನು ಪೊಲೀಸರು (Police) ಬಂಧಿಸಿದ್ದಾರೆ. ನನಗೆ ರೈಲ್ವೇ ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯವಿದ್ದಾರೆ. ನಾನು ಈಗಾಗಲೆ ಅನೇಕ ಜನರಿಗೆ ನೌಕರಿ ಕೊಡಿಸಿದ್ದೇನೆ ಎಂದು ಸುಳ್ಳು ನೇಮಕಾತಿ ಪತ್ರ ಮತ್ತು ಜಾಯ್ನಿಂಗ್ ಲೆಟರ್ ತೋರಿಸಿ ನಂಬಿಸಿದ್ದಾನೆ. ನಂತರ ನಿನಗು ಕೆಲಸ ಕೊಡಿಸುವುದಾಗಿ ಹೇಳಿ ನೇಕಾರನಗರದ ಓರ್ವ ವ್ಯಕ್ತಿಗೆ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ. ಸದ್ಯ ಪ್ರಶಾಂತ ದೇಶಪಾಂಡೆ ವಿರುದ್ಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗಳ್ಳತನ ಮಾಡಿದ್ದ ಆರೋಪಿ ಪೊಲೀಸರ ವಶ

ಬೆಂಗಳೂರು: ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಸುಬ್ರತೋಮಂಡಲ್​ ಬಂಧಿತ ಆರೋಪಿ. ಬಂಧಿತನ ಬಳಿ ಇದ್ದ 211 ಗ್ರಾಂ ಚಿನ್ನ, 75 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇದೇನಿದು ವಿಚಿತ್ರ ಮಂಕಿ ಕ್ಯಾಪ್ ಕಳ್ಳರು! ಮೆಡಿಕಲ್ ಸ್ಟೋರ್​​ಗಳೇ ಇವರ ಟಾರ್ಗೆಟ್

ಆ.27 ರಂದು ಸಂಜಯನಗರದ ಪಟೇಲಪ್ಪ ಲೇಔಟ್​​ನಲ್ಲಿನ ಮನೆಯೊಂದರ ಮಾಲಿಕರು ತಮ್ಮ ಸ್ನೇಹಿತರ ಮನೆಗೆ ಹೋಗಿದ್ದಾಗ ಮನೆ ಬೀಗ ಮುರಿದು ಆರೋಪಿ ಸುಬ್ರತೋಮಂಡಲ್ ಕಳ್ಳತನ ಮಾಡಿದ್ದನು.

ಮನೆಗಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಮನೆಗಳ್ಳತನ ಮಾಡಿದ್ದ ಆರೋಪಿಗಳನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ರವಿ, ಇಮ್ರಾನ್, ಜಯಕುಮಾರ್ ಬಂಧಿತ ಆರೋಪಿಗಳು. ಬಂಧಿತರಿಂದ 7 ಲಕ್ಷ ಮೌಲ್ಯದ 130 ಗ್ರಾಂ ಚಿನ್ನ ಮತ್ತು 1.8 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಾಗಲಗುಂಟೆಯ ಶೆಟ್ಟಿಹಳ್ಳಿಯಲ್ಲಿ ವಾಸಿಸುವ ಕುಟುಂಬ ಧರ್ಮಸ್ಥಳಕ್ಕೆ ತೆರಳಿದ್ದರು. ಕುಟುಂಬಸ್ಥರು ಹ್ಯಾಂಗಿಂಗ್ ಲಾಕ್ ಹಾಕಿ ಹೋಗಿದ್ದರು. ಇದರಿಂದ ಮನೆಯಲ್ಲಿ ಯಾರು‌ ಇಲ್ಲ ಎಂದು ಪ್ಲಾನ್​ ಮಾಡಿ ಆಗಸ್ಟ್ 13 ರಂದು ಆರೋಪಿಗಳು ಕಳ್ಳತನ ಮಾಡಿದ್ದರು. ಬೀಗ ಒಡೆದಿರುವುದನ್ನು ನೋಡಿ ಕುಟುಂಬಸ್ಥರಿಗೆ ಕಟ್ಟಡ ಮಾಲೀಕ ವಿಷಯ ತಿಳಿಸಿದ್ದರು.

ಚನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್ ಕಾಮಗಾರಿ ವೇಳೆ ಕಾರ್ಮಿಕ ಸಾವು

ಕೋಲಾರ: ಚನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್ ಕಾಮಗಾರಿ ವೇಳೆ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ನಾಗಶೆಟ್ಟಿಹಳ್ಳಿ ಬಳಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಸುಜನ್​ ಘೋಷ್ ​(32) ಮೃತ ದುರ್ದೈವಿ.

ಹೈವೇ ಕಾಮಗಾರಿ ವೇಳೆ ತಲೆಗೆ ಕಬ್ಬಿಣದ ರಾಡ್ ಬಿದ್ದು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬೇತಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:06 pm, Wed, 6 September 23